ಉದ್ಯೋಗಾವಕಾಶಗಳ ಕೊರತೆ ಸೇರಿ ಹಲವು ಕಾರಣಗಳಿಗಾಗಿ ಕನ್ನಡ M.A ದಾಖಲಾತಿಯಲ್ಲಿ ಇಳಿಕೆ

ಕನ್ನಡದಲ್ಲಿ ಎಂಎ ಮುಗಿದ ನಂತರ ಉದ್ಯೋಗಾವಕಾಶಗಳು ಸೀಮಿತವಾಗಿವೆ. ಸಂಶೋಧನೆ ಮತ್ತು ಬೋಧನೆಯ ಹೊರತಾಗಿ, ಅಭ್ಯರ್ಥಿಗಳಿಗೆ ಸಿಗುವ ಏಕೈಕ ಕೆಲಸದ ಅವಕಾಶಗಳು ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಮಾತ್ರ.
representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ಪ್ರಾಧ್ಯಾಪಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ಕುಸಿತಕ್ಕೆ ಹಲವಾರು ಕಾರಣಗಳಿವೆ, ಅವುಗಳಲ್ಲಿ ಪ್ರಮುಖವಾದವು, ಸೀಮಿತ ಕೆಲಸದ ಅವಕಾಶಗಳು, ಕನ್ನಡ ವಿಭಾಗಗಳಲ್ಲಿ ಶಾಶ್ವತ ಉಪನ್ಯಾಸಕರ ಕೊರತೆ ಮತ್ತು ಮಾನವಿಕ ವಿಷಯಗಳಲ್ಲಿ ಕೋರ್ಸ್‌ಗಳನ್ನು ಕಲಿಸಲು ಹೊಸ ಕಾಲೇಜುಗಳ ಕೊರತೆ ಸೇರಿವೆ.

ಕನ್ನಡದಲ್ಲಿ ಎಂಎ ಮುಗಿದ ನಂತರ ಉದ್ಯೋಗಾವಕಾಶಗಳು ಸೀಮಿತವಾಗಿವೆ. ಸಂಶೋಧನೆ ಮತ್ತು ಬೋಧನೆಯ ಹೊರತಾಗಿ, ಅಭ್ಯರ್ಥಿಗಳಿಗೆ ಸಿಗುವ ಏಕೈಕ ಕೆಲಸದ ಅವಕಾಶಗಳು ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಮಾತ್ರ. ಅನೇಕ ಹೊಸ ಪಿಯು ಕಾಲೇಜುಗಳು ತೆರೆಯುತ್ತಿದ್ದರೂ, ಅವು ವಿಜ್ಞಾನ ಮತ್ತು ವಾಣಿಜ್ಯವನ್ನು ಕಲಿಸಲು ಆದ್ಯತೆ ನೀಡುತ್ತವೆ. ಸಾಹಿತ್ಯ ಅಥವಾ ಭಾಷೆ ಪದವಿ ಕೋರ್ಸ್‌ಗಳಲ್ಲಿ ನಾಲ್ಕು ಸೆಮಿಸ್ಟರ್‌ಗಳ ಬದಲಿಗೆ ಎರಡು ಸೆಮಿಸ್ಟರ್‌ಗಳಿಗೆ ಸೀಮಿತವಾಗಿದೆ. ಆದ್ದರಿಂದ, ಸರ್ಕಾರಿ ಕಾಲೇಜುಗಳು ಮತ್ತು ಖಾಸಗಿ ಕಾಲೇಜುಗಳಲ್ಲಿ ಸಾಹಿತ್ಯವನ್ನು ಕಲಿಸಲು ಕಡಿಮೆ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರೊಫೆಸರ್ ನಿತ್ಯಾನಂದ ಬಿ ಶೆಟ್ಟಿ ತಿಳಿಸಿದ್ದಾರೆ.

ಮೊದಲ ಮತ್ತು ಎರಡನೇ ವರ್ಷದಲ್ಲಿ ಒಟ್ಟು 70 ವಿದ್ಯಾರ್ಥಿಗಳಿದ್ದಾರೆ ಮತ್ತು 52 ವಿದ್ಯಾರ್ಥಿಗಳು ಕನ್ನಡದಲ್ಲಿ ಪೂರ್ಣ ಸಮಯ ಮತ್ತು ಅರೆಕಾಲಿಕ ಪಿಎಚ್‌ಡಿ ಮಾಡುತ್ತಿದ್ದಾರೆ ಎಂದು ಪ್ರೊಫೆಸರ್ ಶೆಟ್ಟಿ ಹೇಳಿದರು. ಕಳೆದ ವರ್ಷ, ವಿಶ್ವವಿದ್ಯಾಲಯಗಳಲ್ಲಿ ಭಾಷೆಗೆ ಗುಣಮಟ್ಟದ ಶಿಕ್ಷಕರ ಕೊರತೆ ಇದೆ ಎಂದು ಅವರು ಹೇಳಿದರು. ಈಗ ನೇಮಕಗೊಂಡ ಶಿಕ್ಷಕರು ಅಥವಾ ಪ್ರಾಧ್ಯಾಪಕರು ಶಾಸ್ತ್ರೀಯ ಪಠ್ಯ ಅಥವಾ ಆಧುನಿಕ ಸಾಹಿತ್ಯದಲ್ಲಿ ಪರಿಣತಿಯನ್ನು ಹೊಂದಿರುವುದಿಲ್ಲ.

representational image
ಹೊರರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡವರು ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು: ಸಿಎಂ ಸಿದ್ದರಾಮಯ್ಯ

ಅವರು ನಿರ್ದಿಷ್ಟ ಸಾಹಿತ್ಯ ಪಠ್ಯದ ವಿಮರ್ಶೆ ಸಾಮಗ್ರಿಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಸಾಹಿತ್ಯವನ್ನು ಕಲಿಸುತ್ತಾರೆ. ಉದಾಹರಣೆಗೆ, ಅವರು ಪಂಪ ಭಾರತವನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ಓದಿ ಹೇಳುವುದಿಲ್ಲ. ಅವರು ಈ ಕೃತಿಯ ವಿಮರ್ಶೆಯನ್ನು ಓದುತ್ತಾರೆ, ಹಾಗಾದರೆ ವಿದ್ಯಾರ್ಥಿಗಳು ವಿಶ್ಲೇಷಣಾತ್ಮಕ ಅಥವಾ ತಾರ್ಕಿಕ ಕೌಶಲ್ಯಗಳನ್ನು ಹೇಗೆ ಬೆಳೆಸಿಕೊಳ್ಳಬಹುದು? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡೊಮಿನಿಕ್ ಡೇವಿಡಪ್ಪ ಮಾತನಾಡಿ, "ಇಲ್ಲಿ ಕನ್ನಡ ವಿಭಾಗದಲ್ಲಿ ಎರಡು ವಿಭಿನ್ನ ವಿಭಾಗಗಳಿವೆ. ಒಂದು ವಿಭಾಗ ಕನ್ನಡ ಸಾಹಿತ್ಯವಾಗಿದ್ದರೆ, ಎರಡನೆಯದು ತುಲನಾತ್ಮಕ ಅಧ್ಯಯನ. ಈ ವರ್ಷ ಕನ್ನಡ ಸಾಹಿತ್ಯದಲ್ಲಿ ಎಂಎ ವ್ಯಾಸಂಗ ಮಾಡುತ್ತಿರುವ 53 ವಿದ್ಯಾರ್ಥಿಗಳು ಮತ್ತು ತುಲನಾತ್ಮಕ ಅಧ್ಯಯನದಲ್ಲಿ 13 ವಿದ್ಯಾರ್ಥಿಗಳು ಇದ್ದಾರೆ. ಕಳೆದ ವರ್ಷ ಕನ್ನಡ ಸಾಹಿತ್ಯದಲ್ಲಿ 57 ಮತ್ತು ತುಲನಾತ್ಮಕ ಅಧ್ಯಯನದಲ್ಲಿ 19 ವಿದ್ಯಾರ್ಥಿಗಳು ಇದ್ದರು.

ಎರಡೂ ವಿಭಾಗಗಳಿಗೆ ಸಂಪೂರ್ಣವಾಗಿ 10 ಖಾಯಂ ಉಪನ್ಯಾಸಕರಿದ್ದರೂ, ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಬೋಧನೆಗೆ ನಾವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ನಾವು ಅವರಿಗೆ ಅನುವಾದಕ್ಕಾಗಿ AI ಪರಿಕರಗಳನ್ನು ಕಲಿಸಲು ಪ್ರಾರಂಭಿಸಿದ್ದೇವೆ, ಸ್ಮಾರ್ಟ್ ಬೋರ್ಡ್‌ಗಳನ್ನು ಪರಿಚಯಿಸಿದ್ದೇವೆ ಎಂದು ಹೇಳಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಗ್ರಾಮೀಣ ಪ್ರದೇಶಗಳ ಅನೇಕ ವಿದ್ಯಾರ್ಥಿಗಳು ತಮ್ಮ ಕುಟುಂಬಗಳು ಮತ್ತು ಹಳ್ಳಿಗಳಲ್ಲಿ ಮೊದಲ ತಲೆಮಾರಿನ ಪದವೀಧರರಾಗಿದ್ದಾರೆ ಎಂದು ಅವರು ಹೇಳಿದರು.

ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಕಲಿಯುತ್ತಾರೆ ಎಂಬ ಅಂಶವನ್ನು ಬೆಂಬಲಿಸುತ್ತಾ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕ ಡಾ. ಚಂದ್ರಶೇಖರ ಬೆಟ್ಟಳ್ಳಿ, "ನಮ್ಮಲ್ಲಿ ಕನ್ನಡದಲ್ಲಿ ಎಂಎ ವ್ಯಾಸಂಗ ಮಾಡುತ್ತಿರುವ 76 ವಿದ್ಯಾರ್ಥಿಗಳಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶಗಳಿಂದ ಬಂದವರು. ಶಾಲೆಗಳಲ್ಲಿ ಶಿಕ್ಷಕರಾಗಲು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅವರು ಆಶಿಸುತ್ತಾರೆ ಎಂದು ಹೇಳಿದರು. ಅವರಿಗೆ ಕಲಸಲು ಕೇವಲ ಇಬ್ಬರು ಖಾಯಂ ಉಪನ್ಯಾಸಕರು ಮತ್ತು 14 ಅತಿಥಿ ಉಪನ್ಯಾಸಕರಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com