70 ನೇ ಕನ್ನಡ ರಾಜ್ಯೋತ್ಸವ: ಝಗಮಗಿಸಿದ ಶಕ್ತಿಸೌಧ; ಕನ್ನಡ ಅನ್ನದ ಭಾಷೆಯಾಗಲಿ- ಸಿಎಂ ಸಿದ್ದರಾಮಯ್ಯ!

ಜನರು ಸೆಲ್ಪಿ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ. ಬಣ್ಣ-ಬಣ್ಣದ ವಿದ್ಯುತ್‌ ದೀಪದಿಂದ ವಿಧಾನಸೌಧಕ್ಕೆ ಹೊಸ ಕಳೆಯೇ ಬಂದಂತಾಗಿದೆ.
Vidhana soudha
ವಿಧಾನಸೌಧ
Updated on

ಬೆಂಗಳೂರು: 70 ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಕಣ್ಮನ ಸೆಳೆಯುತ್ತಿದೆ.

ಕೆಂಪು ಹಾಗೂ ಹಳದಿ ಬಣ್ಣದ ವಿದ್ಯುತ್​ ದೀಪಾಲಂಕಾರ ಮಾಡಲಾಗಿದ್ದು, ವಿಧಾನಸೌಧ ಕನ್ನಡ ಧ್ವಜವನ್ನು ಮೈದಳೆದು ನಿಂತಂತೆ ಭಾಸವಾಗುತ್ತಿದೆ.

ಜನರು ಸೆಲ್ಪಿ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ. ಬಣ್ಣ-ಬಣ್ಣದ ವಿದ್ಯುತ್‌ ದೀಪದಿಂದ ವಿಧಾನಸೌಧಕ್ಕೆ ಹೊಸ ಕಳೆಯೇ ಬಂದಂತಾಗಿದೆ.

ಈ ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಕನ್ನಡ ನಮ್ಮ ನೆಲದ ಭಾಷೆ ಮಾತ್ರ ಆಗದೆ ಬದುಕಿನ ಭಾಷೆ, ಅನ್ನದ ಭಾಷೆಯಾಗಲಿ ಎನ್ನುವ ಹಾರೈಕೆ ನನ್ನದು ಎಂದಿದ್ದಾರೆ.

Vidhana soudha
Bengaluru tunnel project: ಟ್ರಾಫಿಕ್ ಸಮಸ್ಯೆ ಹೋಗಲಾಡಿಸುವ ಯೋಜನೆಗೆ ವಿರೋಧವೇಕೆ? ಸಿಎಂ ಸಿದ್ದರಾಮಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com