

ಕೊಪ್ಪಳ: ಮನೆಯಲ್ಲಿ ಯಾರೂ ಇಲ್ಲದಾಗ ತನ್ನ ಅಪ್ರಾಪ್ತ ತಂಗಿಯನ್ನೇ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಆರೋಪಿ ಇದೀಗ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಇನ್ನು ಗರ್ಭವತಿಯಾಗಿದ್ದ ಬಾಲಕಿ ವಾರದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಅಕ್ಟೋಬರ್ 26ರ ಬೆಳಿಗ್ಗೆ ಮನೆ ಕೆಲಸ ಮಾಡುವಾಗ ಬಾಲಕಿ ಜಾರಿ ಬಿದ್ದಿದ್ದಳು. ಹೀಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಬಾಲಕಿಯ ಬೆನ್ನಿಗೆ ಗಾಯವಾಗಿದ್ದು ಸ್ಕ್ಯಾನಿಂಗ್ ಮಾಡುವಂತೆ ಸೂಚಿಸಿದರು. ನಂತರ ಅಕ್ಟೋಬರ್ 30ರಂದು ಬಾಲಕಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ಮಗುವಿರುವುದು ಪತ್ತೆಯಾಗಿತ್ತು. ಅದೇ ದಿನ ರಾತ್ರಿ ಗಂಡು ಮಗುವಿಗೆ ಆಕೆ ಜನ್ಮ ನೀಡಿದ್ದಳು. ತಾನೂ ಗರ್ಭೀಣಿಯಾಗಿದ್ದ ವಿಷಯ ತನಗೆ ಗೊತ್ತಿಲ್ಲ ಎಂದು ಬಾಲಕಿ ಹೇಳಿದ್ದಳು. ಆದರೆ ಯಾರೂ ಇಲ್ಲದಾಗ ತನ್ನ ಮೇಲೆ ಅಣ್ಣ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಬಾಲಕಿ ಪೋಷಕರಿಗೆ ತಿಳಿದ್ದಳು. ನಂತರ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾಯಲ್ಲಿ ದೂರು ದಾಖಲಿಸಿದ್ದಳು.
Advertisement