ಮದ್ಯ, ಮಾಂಸ, ಮೊಬೈಲು... ಕೈದಿಗಳಿಗೆ ಐಷಾರಾಮಿ ತಾಣವಾಗಿ ಮಾರ್ಪಟ್ಟ ಮೈಸೂರು ಜೈಲು!

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಿರುವ ವಿಶೇಷ ಮಾಹಿತಿಯ ಪ್ರಕಾರ, ಮೈಸೂರಿನ ಹೈ ಸೆಕ್ಯುರಿಟಿ ಜೈಲು ಆಯ್ದ ಕೈದಿಗಳಿಗೆ ಪೂರ್ಣ ಪ್ರಮಾಣದ ಸೌಕರ್ಯ ವಲಯವಾಗಿ ರೂಪಾಂತರಗೊಂಡಿದೆ. ಮದ್ಯ, ಮಾಂಸ, ಸಿಗರೇಟ್ ಮತ್ತು ಬೀಡಿಗಳಿಂದ ಹಿಡಿದು ಮೊಬೈಲ್ ಫೋನ್‌ಗಳವರೆಗೆ ಎಲ್ಲವೂ ಹಣಕ್ಕೆ ಲಭ್ಯವಿದೆ
File image
ಸಂಗ್ರಹ ಚಿತ್ರ
Updated on

ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಫೋನ್‌ಗಳನ್ನು ಮುಕ್ತವಾಗಿ ಬಳಸುತ್ತಿರುವುದು ಹಾಗೂ ವಿಐಪಿ ಚಿಕಿತ್ಸೆ ಆನಂದಿಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ಕೇಂದ್ರ ಕಾರಾಗೃಹದಿಂದ ಅಷ್ಟೇ ಆಘಾತಕಾರಿ ವಿಡಿಯೋಗಳು ಹೊರಬಂದಿವೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಿರುವ ವಿಶೇಷ ಮಾಹಿತಿಯ ಪ್ರಕಾರ, ಮೈಸೂರಿನ ಹೈ ಸೆಕ್ಯುರಿಟಿ ಜೈಲು ಆಯ್ದ ಕೈದಿಗಳಿಗೆ ಪೂರ್ಣ ಪ್ರಮಾಣದ ಸೌಕರ್ಯ ವಲಯವಾಗಿ ರೂಪಾಂತರಗೊಂಡಿದೆ. ಮದ್ಯ, ಮಾಂಸ, ಸಿಗರೇಟ್ ಮತ್ತು ಬೀಡಿಗಳಿಂದ ಹಿಡಿದು ಮೊಬೈಲ್ ಫೋನ್‌ಗಳವರೆಗೆ ಎಲ್ಲವೂ ಹಣಕ್ಕೆ ಲಭ್ಯವಿದೆ.

ಸುಧಾರಣಾ ಕೇಂದ್ರವಾಗಿರುವುದಕ್ಕಿಂತ ಹೆಚ್ಚಾಗಿ, ಈ ಜೈಲು ಮನರಂಜನಾ ಕೇಂದ್ರದಂತೆ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಪ್ರತಿಯೊಂದು ನಿಷೇಧಿತ ವಸ್ತುವಿಗೆ ತನ್ನದೇ ಆದ ಬೆಲೆ ಇರುತ್ತದೆ. ಜೈಲಿನ ಒಳಗಿನಿಂದ ದಾಖಲೆಗಳು, ವೀಡಿಯೊಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದ ಜೈಲು ಸಂದರ್ಶಕ ಮಂಡಳಿಯ ಸದಸ್ಯ ಪವನ್ ಸಿದ್ದರಾಮು ಅವರ ಪ್ರಕಾರ, ಜೈಲಿನೊಳಗಿನ ಪ್ರತಿಯೊಂದು ವಸ್ತುವು ನಿಗದಿತ ದರ ಪಟ್ಟಿಯಲ್ಲಿ ಬರುತ್ತದೆ.

ಹೊರಗೆ ಅಗತ್ಯ ವಸ್ತುಗಳ ಮಾರುಕಟ್ಟೆ ಬೆಲೆಗಳು ಏರಿಳಿತವಾಗಿದ್ದರೂ, ಜೈಲಿನೊಳಗೆ ಯಾವ ವಸ್ತುವೂ ಕೆಜಿಗೆ 150 ರೂ.ಗಿಂತ ಕಡಿಮೆ ಬರುವುದಿಲ್ಲ. ಮದ್ಯದ ಬಾಟಲಿಗಳು ಮತ್ತು ಮಾಂಸಾಹಾರವನ್ನು ಸಹ ಖರೀದಿಸಲು ಶಕ್ತರಾದವರಿಗೆ ಪ್ರತಿ ವಾರ ಆರ್ಡರ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.

File image
ಪರಪ್ಪನ ಅಗ್ರಹಾರ ಕಾರಾಗೃಹ: ಒಳ ಉಡುಪಿನಲ್ಲಿ ಮೊಬೈಲ್ ಕಳ್ಳ ಸಾಗಣೆಗೆ ಯತ್ನ; ಜೈಲು ವೀಕ್ಷಕ ಬಂಧನ

ಕ್ಯಾಂಟೀನ್ ನಿರ್ವಾಹಕರು ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕೆಲವು ಸಿಬ್ಬಂದಿಗಳು ಆವರಣದೊಳಗೆ ನಿಷೇಧಿತ ವಸ್ತುಗಳನ್ನು ಕಳ್ಳಸಾಗಣೆ ಮಾಡುವಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂದು ಅವರು ಆರೋಪಿಸಿದ್ದಾರೆ.

ಇದು ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಅವರ ಕೈ ಕೆಳಗೆ ನಡೆಯುತ್ತದೆ. ಮೈಸೂರು ನಗರ ಪೊಲೀಸರು ಸರ್ ಫ್ರೈಸ್ ಭೇಟಿ"ಗಳನ್ನು ನಡೆಸಿ "ಶೂನ್ಯ" ವರದಿಗಳನ್ನು ಸಲ್ಲಿಸುತ್ತಿದ್ದರೂ, ವಾಸ್ತವವು ತುಂಬಾ ವಿಭಿನ್ನವಾಗಿದೆ ಎಂದು ಅವರು ಆರೋಪಿಸಿದರು.

ಸರಿಯಾಗಿ ದಾಳಿ ನಡೆಸಿದರೆ, ಪ್ರತಿ ಬಾರಿಯೂ ನೂರಾರು ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಪ್ರತಿ ವರ್ಷ ಇಂತಹ ಎಷ್ಟು ದಾಳಿಗಳನ್ನು ನಡೆಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತರು ಮಾತ್ರ ಉತ್ತರಿಸಬೇಕು ಎಂದು ಹೇಳಿದರು.

ಮೈಸೂರು ಕೇಂದ್ರ ಕಾರಾಗೃಹದ ಪ್ರಸ್ತುತ ಮುಖ್ಯ ಸೂಪರಿಂಟೆಂಡೆಂಟ್ ಅವರನ್ನು ಈ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯೋಜಿಸಲಾಗಿತ್ತು. ಇವರ ಅವಧಿಯಲ್ಲಿ ಬೆಂಗಳೂರು ಜೈಲಿನಲ್ಲಿ ಕೈದಿಗಳು ಮೊಬೈಲ್ ಫೋನ್‌ಗಳೊಂದಿಗೆ ಮತ್ತು ನೃತ್ಯ ಮಾಡುತ್ತಿರುವ ವೀಡಿಯೊಗಳ ಬಗ್ಗೆ ರಾಷ್ಟ್ರವ್ಯಾಪಿ ವಿವಾದದ ಕೇಂದ್ರಬಿಂದುವಾಗಿತ್ತು ಎಂದು ಅವರು ವಿವರಿಸಿದರು.

"ಈ ವರ್ಗಾವಣೆ ಮಾದರಿಯು ಒಂದೇ ಅಧಿಕಾರಿಗಳು ವಿವಿಧ ಜೈಲುಗಳಲ್ಲಿ ಒಂದೇ ರೀತಿಯ ಭ್ರಷ್ಟ ವ್ಯವಸ್ಥೆಯನ್ನು ಹೇಗೆ ನಿಯಂತ್ರಿಸುತ್ತಿದ್ದಾರೆ ಮತ್ತು ಪುನರಾವರ್ತಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಇಂತಹ ಅಧಿಕಾರಿಗಳಿಂದ ತಿದ್ದುಪಡಿ ಮತ್ತು ಸುಧಾರಣಾ ಸೌಲಭ್ಯಗಳ ಕಲ್ಪನೆಯೇ ನಾಶವಾಗುತ್ತಿದೆ. ಬದಲಾಗಿ, ಜೈಲುಗಳೊಳಗೆ ಸಮಾನಾಂತರ ಮಾಫಿಯಾ ಜಾಲ ಸೃಷ್ಟಿಯಾಗುತ್ತಿದೆ ಎಂದು ಪವನ್ ಸಿದ್ಧರಾಮು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com