

ಬೆಂಗಳೂರು: ವಿರೋಧ ಪಕ್ಷದವರು ನನ್ನ ಬಗ್ಗೆ ಬೇಕಾದಷ್ಟು ಟೀಕೆಗಳನ್ನು ಮಾಡಿದರು, ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕೇಸು ಹಾಕಿಸಿದರು. ಆದರೆ ನಾನು ಅವೆಲ್ಲವುಗಳನ್ನೂ ಮೆಟ್ಟಿನಿಂತು ಕೆಲಸದಿಂದ ಗುರುತಿಸಿಕೊಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅವರು ರಚಿಸಿರುವ ನೀರಿನ ಹೆಜ್ಜೆ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ನಾವು ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿದ್ದೆವು, ಬೆಂಗಳೂರಿನಿಂದ ಮಂಡ್ಯಕ್ಕೆ ಮೆರವಣಿಗೆ ಹೋಗಿದ್ದೆವು. ಇಡೀ ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ ವಿಪರೀತ ಸುಸ್ತಾಗಿ ನಡೆದುಕೊಂಡು ಹೋಗುವಾಗ ಅದು ಜಾಗವೂ ಹಾಗೆಯೇ ಇದ್ದಿತು, ಅಂಕುಡೊಂಕು ಸ್ಥಳದಲ್ಲಿ ಹೋಗುವಾಗ ನನ್ನ ಬಾಡಿ ಅಲ್ಲಾಡುತ್ತಿದ್ದಾಗ ಡಿ ಕೆ ಶಿವಕುಮಾರ ಕುಡಿದು ಬಿಟ್ಟು ಅಲ್ಲಾಡ್ತಾನೆ ಎಂದು ಮಾತನಾಡಿದರು.
ವಿರೋಧ ಪಕ್ಷದವರು ಕೇಸು ಹಾಕಿದರು, ಇನ್ನೂ ಕೆಲವು ವಿಚಾರಣೆ ನಡೆಯುತ್ತಿದೆ. ಕೊರೋನಾ ಸಂದರ್ಭದಲ್ಲಿ ನನ್ನನ್ನು ಟೆಸ್ಟ್ ಮಾಡಿ ಕೊರೋನಾ ಇದೆ ಎಂದು ರಿಪೋರ್ಟ್ ಕೊಡಲು ಬಂದೆ, ಆಗ ನನ್ನ ಆರೋಗ್ಯನೂ ಸ್ವಲ್ಪ ಹದಗೆಟ್ಟಿತ್ತು. ಅವರಿಗೆ ನಾನು ಆಗ ಸರಿಯಾಗಿಯೇ ಉತ್ತರ ಕೊಟ್ಟೆ ಎಂದರು.
ಡಿ ಕೆ ಶಿವಕುಮಾರ್ ಕುಡಿದುಬಿಟ್ಟು ಅಲ್ಲಾಡ್ತಾನೆ ಎಂದರು. ನಾನು ಟೀಕೆಗಳಿಗೆ ಜಗ್ಗುವವನಲ್ಲ, ಆ ಸಂದರ್ಭದಲ್ಲಿ ಹಾಗಿತ್ತು, ಇಡೀ ರಾತ್ರಿ ಕಷ್ಟಪಟ್ಟು ಕೆಲಸ ಮಾಡಿ ನಡೆಯುವಾಗ ದೇಹ ದಣಿದು ಅಲ್ಲಾಡಿತು, ನನಗೇನು ಮಧ್ಯಾಹ್ನನೇ ಕುಡಿಯುವ ಚಟ ಇಲ್ಲ. ಅಷ್ಟು ಕಷ್ಟಪಟ್ಟು ಬೆಂಗಳೂರು ತಲುಪಿದೆವು. ಈ ರಾಜ್ಯದ ರೈತರಿಗೋಸ್ಕರ ನೀರಿನ ಹೋರಾಟ ಮಾಡಿದೆವು. ನಮ್ಮ ನೀರು ನಮ್ಮ ಹಕ್ಕು, ಸುಪ್ರೀಂ ಕೋರ್ಟ್ ಮೇಕೆದಾಟು ಬಗ್ಗೆ ಐತಿಹಾಸಿಕ ತೀರ್ಪು ನೀಡಿದೆ. ನಮ್ಮ ಶ್ರಮ, ದಿಕ್ಕು, ಆಲೋಚನೆಯಿಂದ ನ್ಯಾಯ ಸಿಕ್ಕಿದೆ, ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ ಎಂದರು.
Advertisement