

ಮೈಸೂರು: ಸಮಸ್ಯೆ ಹೇಳಲು ಬಂದಿದ್ದ ಕಾರ್ಯಕರ್ತನಿಗೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ರವಿಶಂಕರ್ ಕೆನ್ನೆಗೆ ಭಾರಿಸಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ದೊಡ್ಡೇಕೊಪ್ಪಲು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವೇಳೆ ಮಹದೇವು ಎಂಬ ವ್ಯಕ್ತಿಯ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಾಸಕರು ಜನರ ಸಮಸ್ಯೆಗಳನ್ನು ಕೇಳುತ್ತಿದ್ದರು. ಈ ಸಂದರ್ಭದಲ್ಲಿ ಮಹದೇವು ಗ್ರಾಮಕ್ಕೆ ಡೇರಿ ಕಟ್ಟಡ ಕಟ್ಟಿಸಿಕೊಡಿ ಎಂದು ಶಾಸಕರಿಗೆ ಮನವಿ ಮಾಡಿದ್ದಾನೆ, ಜೊತೆಗೆ ಮುಖಂಡ ಶಾಸಕರ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ಹಂತದಲ್ಲಿ ತನ್ನದೇ ಪಕ್ಷದ ಮುಖಂಡನಿಗೆ ಕಪಾಳಕ್ಕೆ ಹೊಡೆದು ಸುಮನೆ ಹಿಂದೆ ಕುಳಿತುಕೋ ಅಂತ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.
ತನ್ನದೇ ಪಕ್ಷದ ಮುಖಂಡನ ಕಪಾಳಕ್ಕೆ ಶಾಸಕರು ಹೊಡೆದಿದ್ದು, ಸುಮ್ಮನೆ ಹಿಂದೆ ಕುಳಿತಿಕೋ ಅಂತ ಆವಾಜ್ ಹಾಕಿದ್ದಾರೆ. ಶಾಸಕ ರವಿಶಂಕರ್ ಅವರು ಕಾರ್ಯಕರ್ತನಿಗೆ ಹೊಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಜನಪ್ರತಿನಿಧಿಗಳ ವರ್ತನೆ ಸರಿನಾ ಎಂದು ನೆಟ್ಟಿಗರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ಹಲ್ಲೆಗೆ ಒಳಗಾದ ಮಹದೇವು, ಶಾಸಕರು ತನ್ನ ಮೇಲೆ ಹಲ್ಲೆ ಮಾಡಿಲ್ಲ. ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ತಾವು ವೇದಿಕೆ ಮೇಲೆ ಹೋಗಿ ಡೇರಿ ವಿಚಾರವಾಗಿ ಮಾತನಾಡುತ್ತಿದ್ದೆ.
ಈ ಸಂದರ್ಭದಲ್ಲಿ ಬೇರೆ ಬೇರೆ ಊರಿನವರು ತಮ ಕುಂದುಕೊರತೆಗಳನ್ನು ಹೇಳಿಕೊಳ್ಳುತ್ತಿದ್ದರು. ಗೊಂದಲ ಹೆಚ್ಚಾದಾಗ ನನ್ನನ್ನು ಬೆನ್ನು ತಟ್ಟಿ ಬಾರಪ್ಪ ಪಕ್ಕದಲ್ಲಿ ಕುಳಿತುಕೋ ಎಂದು ಕರೆದರು. ಅದನ್ನು ಹೊರತುಪಡಿಸಿ ಶಾಸಕರು ತನ್ನ ಮೇಲೆ ಹಲ್ಲೆ ಮಾಡಿಲ್ಲ. ಸುಳ್ಳು ವಿಚಾರಗಳನ್ನು ಹಬ್ಬಿಸಲಾಗುತ್ತಿದೆ ಎಂದು ಮಹದೇವು ಹೇಳಿದ್ದಾರೆ.
Advertisement