

ಕೊಪ್ಪಳ: ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಬಳ್ಳಾರಿಗಳಲ್ಲಿ ಕೃಷಿ ಮತ್ತು ಅಕ್ಕಿ ಗಿರಣಿ ಕಾರ್ಮಿಕರ ವಲಸೆ ಹೆಚ್ಚಾಗುತ್ತಿದೆ. ನೀರಿನ ಸಮಸ್ಯೆ ಮತ್ತು ಭತ್ತದ ಬೆಳೆಗೆ ಬ್ಯಾಕ್ಟೀರಿಯಾದ ಕಾಯಿಲೆ ಬರುವ ಭೀತಿಯಿಂದಾಗಿ ಈ ಜಿಲ್ಲೆಗಳಲ್ಲಿ ಕೃಷಿ ಮತ್ತು ಅಕ್ಕಿ ಗಿರಣಿ ಕಾರ್ಮಿಕರ ವಲಸೆ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ.
ಈ ಜಿಲ್ಲೆಗಳಲ್ಲಿ ಸುಮಾರು 300 ಅಕ್ಕಿ ಗಿರಣಿಗಳಿವೆ, ಸಾವಿರಾರು ಕಾರ್ಮಿಕರು ಇದ್ದಾರೆ. ಈ ಪ್ರದೇಶದಲ್ಲಿ ಸಾವಿರಾರು ಕೃಷಿ ಕಾರ್ಮಿಕರು ಗುತ್ತಿಗೆ ಪಡೆದ ಹೊಲಗಳಲ್ಲಿಯೂ ಭತ್ತ ಬೆಳೆಯುತ್ತಾರೆ. ತುಂಗಭದ್ರಾ ನದಿಯಲ್ಲಿ ನೀರಿನ ಕೊರತೆ ಮತ್ತು ದುಂಡಾನು (ಬ್ಯಾಕ್ಟೀರಿಯಾದ ಎಲೆ ರೋಗ) ರೋಗವು ಬೆಳೆಗಳಿಗೆ ಹಾನಿ ಮಾಡುವ ಭಯದಿಂದಾಗಿ ಜನರು ಈ ವರ್ಷ ಮಹಾರಾಷ್ಟ್ರ, ಗೋವಾ ಮತ್ತು ತೆಲಂಗಾಣದಂತಹ ರಾಜ್ಯಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಬಂದಿದೆ.
ಸರ್ಕಾರವು ಭತ್ತದ ಗದ್ದೆಗಳ ಮಾಲೀಕರಿಗೆ ಪರಿಹಾರ ನೀಡಲಿದ್ದರೂ, ಪರಿಸ್ಥಿತಿ ಹದಗೆಟ್ಟರೆ ಜಮೀನುಗಳನ್ನು ಗುತ್ತಿಗೆ ಪಡೆದ ಕಾರ್ಮಿಕರು ನಷ್ಟದ ಭೀತಿ ಎದುರಿಸುತ್ತಿದ್ದಾರೆ.
ಕೊಪ್ಪಳದ ಕೃಷಿ ವಿಜ್ಞಾನಿಗಳು ಜಿಲ್ಲೆಯಲ್ಲಿ ಸುಮಾರು 1,00,000 ಹೆಕ್ಟೇರ್ ಭೂಮಿ ಹೆಚ್ಚುವರಿ ರಸಗೊಬ್ಬರ ಬಳಕೆಯಿಂದಾಗಿ ಮಣ್ಣಿನ ಗುಣಮಟ್ಟವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಇದು ಭತ್ತದ ರೈತರ ವಲಸೆಗೆ ಮತ್ತೊಂದು ಕಾರಣವಾಗಿದೆ.
ಕೊಪ್ಪಳದ ರೈತ ಮುಖಂಡರು ಭಾಗವಹಿಸಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ, ಅಣೆಕಟ್ಟು ರಚನೆಯ ರಕ್ಷಣೆ ಮುಖ್ಯವಾಗಿದ್ದು, ಎರಡನೇ ಬೆಳೆಗೆ ನೀರು ಪೂರೈಸಲು ಸಾಧ್ಯವಿಲ್ಲ ಎಂದು ನಿರ್ಧರಿಸಲಾಯಿತು. ಭತ್ತದ ಬೆಳೆಗಾರರು ಈ ನಿರ್ಧಾರವನ್ನು ಸ್ವಾಗತಿಸಿದರೂ, ಸಾವಿರಾರು ಜನರು ಉದ್ಯೋಗ ಅರಸಿ ಮಹಾನಗರಗಳು ಮತ್ತು ಇತರ ದೊಡ್ಡ ನಗರಗಳಿಗೆ ವಲಸೆ ಹೋಗುವಂತೆ ಆಗಿದೆ.
ಗಂಗಾವತಿಯ ಅಕ್ಕಿ ಗಿರಣಿ ಕಾರ್ಮಿಕ ಪರಶು ಮಾದಿನೂರು, ನೀರಿನ ಕೊರತೆಯು ಬೆಳೆ ಕೊರತೆಗೆ ಕಾರಣವಾಗುತ್ತದೆ. ಅಕ್ಕಿ ಗಿರಣಿಗಳಿಗೆ ಸಮಸ್ಯೆಯಾಗಿದೆ. ಇದರಿಂದ ಅಕ್ಕಿ ಗಿರಣಿ ಕಾರ್ಮಿಕರು ಮತ್ತು ಗುತ್ತಿಗೆ ಮೇಲೆ ಹೊಲಗಳನ್ನು ತೆಗೆದುಕೊಂಡ ಭತ್ತದ ಬೆಳೆಗಾರರು ಬೇರೆ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ದುಂಡಾಣು ಹುಳು ರೋಗವು ರೈತರಲ್ಲಿ ಭಯವನ್ನು ಹರಡುತ್ತಿದೆ ಎಂದು ಹೇಳಿದರು.
Advertisement