ಬೆಂಗಳೂರಿನಲ್ಲಿ 7.11 ಕೋಟಿ ರೂ. ದರೋಡೆ ಪ್ರಕರಣ: ಪೊಲೀಸರ ತನಿಖೆ ತೀವ್ರ; ಶಂಕಿತರ ವಿಚಾರಣೆ, ನಕಲಿ ನಂಬರ್ ಪ್ಲೇಟ್ ಪತ್ತೆ

ಆಂಧ್ರಪ್ರದೇಶದ ಚಿತ್ತೂರು ಬಳಿ ಬಾಣಸವಾಡಿ ಬಳಿಯ ಕಲ್ಯಾಣ್ ನಗರದ ಹೇಮಂತ್ ಮತ್ತು ಸುನಿಲ್ ಎಂದು ಗುರುತಿಸಲಾದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.
South division police investigating the Rs 7.11-crore daylight heist.
7.11 ಕೋಟಿ ರೂಪಾಯಿ ಮೌಲ್ಯದ ಹಗಲು ದರೋಡೆಯ ತನಿಖೆ ನಡೆಸುತ್ತಿರುವ ದಕ್ಷಿಣ ವಿಭಾಗದ ಪೊಲೀಸರು.
Updated on

ಬೆಂಗಳೂರು: ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿ ಹಗಲು ದರೋಡೆ ಪ್ರಕರಣದ ತನಿಖೆ ನಡೆಸುತ್ತಿರುವ ದಕ್ಷಿಣ ವಿಭಾಗದ ಪೊಲೀಸರಿಗೆ ದರೋಡೆಕೋರರ ಬಗ್ಗೆ ಇನ್ನೂ ಪ್ರಮುಖ ಸುಳಿವುಗಳು ಸಿಕ್ಕಿಲ್ಲ, ನಗದು ನಿರ್ವಹಣಾ ಸೇವೆಗಳ (CMS) ಸಿಬ್ಬಂದಿ ಸೇರಿದಂತೆ 30 ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಆದಾಗ್ಯೂ, ಆಂಧ್ರಪ್ರದೇಶದ ಚಿತ್ತೂರು ಬಳಿ ಬಾಣಸವಾಡಿ ಬಳಿಯ ಕಲ್ಯಾಣ್ ನಗರದ ಹೇಮಂತ್ ಮತ್ತು ಸುನಿಲ್ ಎಂದು ಗುರುತಿಸಲಾದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಅವರ ಬಂಧನದ ಬಗ್ಗೆ ಪೊಲೀಸರಿಂದ ಯಾವುದೇ ದೃಢೀಕರಣವಿಲ್ಲ. ಆರೋಪಿಗಳು ಪರಾರಿಯಾಗಿದ್ದ ಟೊಯೋಟಾ ಇನ್ನೋವಾವನ್ನು ಆಂಧ್ರಪ್ರದೇಶದಲ್ಲಿ ಬಿಟ್ಟು ಹೋಗಿರುವುದು ಕಂಡುಬಂದಿದೆ. ಇನ್ನೋವಾ, ಮಾರುತಿ ಸುಜುಕಿ ಝೆನ್ ಮತ್ತು ಮಾರುತಿ ಸುಜುಕಿ ವ್ಯಾಗನ್‌ಆರ್ ಎಂಬ ಮೂರು ವಾಹನಗಳನ್ನು ಆರೋಪಿಗಳು ನಗದು ಸಮೇತ ಪರಾರಿಯಾಗಲು ಬಳಸಿದ್ದರು ಎಂದು ತಿಳಿದುಬಂದಿದೆ.

ಅಪರಾಧದಲ್ಲಿ ಬಳಸಲಾದ ಇನ್ನೋವಾ ಕಾರಿನ ಮೇಲೆ ಬೆಂಗಳೂರಿನ ಇಂದಿರಾನಗರ 100 ಅಡಿ ರಸ್ತೆಯ ಮಾರುತಿ ಸ್ವಿಫ್ಟ್ ಕಾರಿನ ನಕಲಿ ನಂಬರ್ ಪ್ಲೇಟ್ ಇತ್ತು ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಹೊಸಕೋಟೆ-ಮಾಲೂರು ರಸ್ತೆ ಮೂಲಕ ನಗರದಿಂದ ಹೊರಡುವಾಗ ಅದೇ ಇನ್ನೋವಾದಲ್ಲಿ ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಈ ಗ್ಯಾಂಗ್ ಬಳಸಿದೆ. ಹೊಸಕೋಟೆ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಸೇರಿದಂತೆ ನಗರದ ಎಲ್ಲಾ ಗಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಟೋಲ್‌ಗೇಟ್‌ಗಳು ಮತ್ತು ಸುತ್ತಮುತ್ತಲಿನ ಸಿಸಿಟಿವಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ.

South division police investigating the Rs 7.11-crore daylight heist.
ಬೆಂಗಳೂರಿನಲ್ಲಿ ಹಾಡಹಗಲೇ 7 ಕೋಟಿ ರೂ. ದರೋಡೆ ಪ್ರಕರಣ: ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಬಂಧನ

ತಂಡಗಳಾಗಿ ವಿಭಜಿಸಿ ಮೂರು ಕಾರುಗಳಲ್ಲಿ ಪ್ರಯಾಣಿಸುವ ಮೂಲಕ ಪೊಲೀಸರನ್ನು ವಂಚಿಸಿದ ಗ್ಯಾಂಗ್, ಝೆನ್ ಮತ್ತು ವ್ಯಾಗನಾರ್ ನಲ್ಲಿದ್ದ ಹಣದೊಂದಿಗೆ ವಾಸ್ತವವಾಗಿ ಪರಾರಿಯಾಗಿದ್ದರೂ, ಪೊಲೀಸರು ಇನ್ನೋವಾವನ್ನು ಮಾತ್ರ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಗಳು ನಗರದಲ್ಲಿ ಅಡಗಿಕೊಂಡಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕುತ್ತಿಲ್ಲ, ಆರೋಪಿಗಳು ತಮಿಳುನಾಡಿನ ಅಂಗಲಾ ಪರಮೇಶ್ವರಿ ದೇವಸ್ಥಾನ ಮತ್ತು ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆಯೇ ಎಂದು ಸಹ ಪರಿಶೀಲಿಸುತ್ತಿದ್ದಾರೆ.

ಪ್ರಕರಣ ದಾಖಲಾಗಿದ್ದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊನ್ನೆ ತಡರಾತ್ರಿಯವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇದ್ದರು. ನಗದು ಸಾಗಿಸುತ್ತಿದ್ದ ವಾಹನದ (GJ-01-HT-9173) ಚಾಲಕ ಮತ್ತು ಮತ್ತೊಬ್ಬ CMS ಸಿಬ್ಬಂದಿಯನ್ನು ನಿನ್ನೆ ಮತ್ತೆ ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ಯಲಾಯಿತು. ಆರೋಪಿಗಳು ಜೈಲಿನ ಆವರಣದ ಒಳಗಿನಿಂದ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಸುಳಿವುಗಳನ್ನು ಅನುಸರಿಸಿ ಒಂದು ತಂಡ ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿತು.

ಪ್ರಕರಣದ ತನಿಖೆಗಾಗಿ ಸುಮಾರು 18 ತಂಡಗಳನ್ನು ರಚಿಸಲಾಗಿದೆ. ತನಿಖೆಗಾಗಿ ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ. ಇದನ್ನು ನಾಲ್ವರು ಜಂಟಿ ಪೊಲೀಸ್ ಆಯುಕ್ತರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಗ್ಯಾಂಗ್ ನೆರೆಯ ರಾಜ್ಯಕ್ಕೆ ಪರಾರಿಯಾಗಿದೆ ಎಂಬ ಅನುಮಾನದ ಮೇಲೆ ACP ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಶ್ರೇಣಿಯ 50 ಕ್ಕೂ ಹೆಚ್ಚು ಹಿರಿಯ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ತಾಂತ್ರಿಕ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ಸ್ವಿಫ್ಟ್ ಮಾಲೀಕನ ವಿಚಾರಣೆ

ಆರೋಪಿಗಳು ಇನ್ನೋವಾಗಾಗಿ ನೋಂದಣಿ ಸಂಖ್ಯೆ KA-03-NC-8052 ನ್ನು ಬಳಸಿದ್ದರು. ಅದರಲ್ಲಿ ಅವರು ಆರಂಭದಲ್ಲಿ ನಗರದಿಂದ ಹಣದೊಂದಿಗೆ ಪರಾರಿಯಾಗಿದ್ದರು. ತನಿಖೆಯ ಸಮಯದಲ್ಲಿ, ಪೊಲೀಸರು ನೋಂದಣಿ ಸಂಖ್ಯೆ ಬಿಳಿ ಮಾರುತಿ ಸ್ವಿಫ್ಟ್ ಕಾರಿಗೆ ಸೇರಿದ್ದು, ಮಾಲೀಕ ಗಂಗಾಧರ್, ಇಂದಿರಾನಗರ 100 ಅಡಿ ರಸ್ತೆಯಲ್ಲಿ ವಾಸಿಸುವ ಹಿರಿಯ ನಾಗರಿಕ ಎಂದು ಪತ್ತೆಹಚ್ಚಿದರು.

ಹಗಲು ಹೊತ್ತಿನಲ್ಲಿ ದರೋಡೆ ನಡೆದ ಸ್ವಲ್ಪ ಸಮಯದ ನಂತರ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಗಂಗಾಧರ್ ಅವರ ಮನೆಗೆ ಭೇಟಿ ನೀಡಿದಾಗ, ಅದೇ ನೋಂದಣಿ ಸಂಖ್ಯೆಯ ಸ್ವಿಫ್ಟ್ ಕಾರನ್ನು ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಲಾಗಿತ್ತು. 7.11 ಕೋಟಿ ರೂಪಾಯಿ ದೋಚಿ ಪರಾರಿಯಾಗಿದ್ದ ಗ್ಯಾಂಗ್ ಅವರ ವಾಹನದ ನೋಂದಣಿ ಸಂಖ್ಯೆಯನ್ನು ಬಳಸಿದೆ ಎಂದು ಪೊಲೀಸರು ಅವರಿಗೆ ವಿವರಿಸಿದರು. ಯಾವುದೇ ಅಕ್ರಮದ ಸಾಧ್ಯತೆಯನ್ನು ತಳ್ಳಿಹಾಕಲು ಪೊಲೀಸರು ಕಾರಿನ ವಿವರಗಳನ್ನು ಮಾಲೀಕರೊಂದಿಗೆ ಪರಿಶೀಲಿಸಿದರು. ಅವರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ.

ಗಂಗಾಧರ್ (78ವ) ಮಾಧ್ಯಮಗಳಿಗೆ ತಮ್ಮ ಕಾರಿನ ನಂಬರ್ ಪ್ಲೇಟ್ ನ್ನು ಏಕೆ ಬಳಸಲಾಗಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದು, ಪೊಲೀಸರು ತನಿಖೆ ನಡೆಸಬೇಕು ಎಂದು ಹೇಳಿದರು. ಆರೋಪಿಗೆ ನನ್ನ ಕಾರಿನ ಸಂಖ್ಯೆ ಹೇಗೆ ಸಿಕ್ಕಿತು ಎಂಬುದನ್ನು ಪೊಲೀಸರು ಪತ್ತೆ ಮಾಡಬೇಕು. ಬುಧವಾರ ಮಧ್ಯಾಹ್ನ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ನನ್ನ ಮನೆಗೆ ಬಂದು ನನ್ನ ಕಾರಿನ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ನಂತರ, ಮಾಧ್ಯಮಗಳ ಮೂಲಕ ನನಗೆ ತಿಳಿಯಿತು ಎಂದರು.

ಕಾರು 2018 ರ ಮಾಡೆಲ್ ಆಗಿದ್ದು, ನಾನು ಒಬ್ಬನೇ ಮಾಲೀಕ, ಸುಮಾರು 45,000 ಕಿ.ಮೀ. ಓಡಿಸಿದ್ದೇನೆ. ಹಳೆಯ ನಂಬರ್ ಪ್ಲೇಟ್ ನ್ನು ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್‌ಗೆ ಬದಲಾಯಿಸಲು ಅದನ್ನು ಶೋರೂಂಗೆ ತೆಗೆದುಕೊಂಡು ಹೋಗಿದ್ದೆ. ನಾನು ಹೃದ್ರೋಗಿಯಾಗಿದ್ದು, ನನ್ನ ಕಾರಿನ ಸಂಖ್ಯೆಯನ್ನು ಬಳಸಲಾಗುತ್ತಿದೆ ಎಂದು ತಿಳಿದಾಗಿನಿಂದ ನನ್ನ ರಕ್ತದೊತ್ತಡ ಹೆಚ್ಚಾಗಿದೆ. ಇಡೀ ರಾತ್ರಿ ನಿದ್ದೆ ಮಾಡಲಿಲ್ಲ ಎಂದರು.

ಗೃಹ ಸಚಿವ ಜಿ ಪರಮೇಶ್ವರ ಮಾಧ್ಯಮಗಳಿಗೆ ತಿಳಿಸಿದ್ದು, ಪೊಲೀಸರು ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಆರೋಪಿಗಳು ಕರ್ನಾಟಕ ಅಥವಾ ಬೇರೆ ಯಾವುದೇ ರಾಜ್ಯದವರೇ ಎಂದು ಪರಿಶೀಲಿಸುತ್ತಿದ್ದಾರೆ. ಇನ್ನೋವಾ ಕಾರಿಗೆ ಮಾರುತಿ ಸ್ವಿಫ್ಟ್ ನೋಂದಣಿ ಸಂಖ್ಯೆಯನ್ನು ಬಳಸಲಾಗಿದ್ದು, ಮಾಲೀಕರನ್ನು ಸಂಪರ್ಕಿಸಲಾಗಿದೆ.

ದರೋಡೆಯ ನಂತರ, ಆರೋಪಿಗಳು ಹಣವನ್ನು ಸಾಗಿಸಲು ವಾಹನಗಳನ್ನು ಬದಲಾಯಿಸಿದ್ದಾರೆ. ಹಣವನ್ನು ಯಾವ ವಾಹನಗಳಲ್ಲಿ ತೆಗೆದುಕೊಂಡು ಹೋಗಲಾಗಿದೆ ಎಂಬುದರ ಕುರಿತು ನಿಖರವಾದ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com