ಮಂಗಳೂರು: ಪಿಲಿಕುಳ ಮೃಗಾಲಯದಲ್ಲಿ ಸಂಗಾತಿಗಳಿಗಾಗಿ ಕಾಯುತ್ತಿವೆ 12 ಪಕ್ಷಿ ಪ್ರಭೇದಗಳು !

ಸಂಗಾತಿಗಳಿಲ್ಲದ ಹೆಚ್ಚಿನ ಪ್ರಾಣಿಗಳು ಖಿನ್ನತೆಯ ಲಕ್ಷಣಗಳನ್ನು ತೋರಿಸುತ್ತವೆ ಹೀಗಾಗಿ ಅವುಗಳನ್ನು ನಿರ್ವಹಿಸಲು ಕಷ್ಟ ಎಂದು ಕಾರ್ಯಕರ್ತರು ಹೇಳುತ್ತಾರೆ. ಕಳೆದ ಮೂರು ವರ್ಷಗಳಿಂದ ಪಿಲಿಕುಳ ಮೃಗಾಲಯದಲ್ಲಿ ಈಜಿಪ್ಟಿನ ರಣಹದ್ದುಗೆ ಸಂಗಾತಿ ಇಲ್ಲ ಎಂದು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.
pilikula biological park
ಪಿಲಿಕುಳ ಮೃಗಾಲಯ
Updated on

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನವು ವಿವಿಧ ಜಾತಿ ಪ್ರಾಣಿ ಮತ್ತು ಪಕ್ಷಿಗಳಿಂದ ತುಂಬಿದೆ, 1,000 ಕ್ಕೂ ಹೆಚ್ಚು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಆದರೆ 12 ಪಕ್ಷಿ ಪ್ರಭೇದಗಳು ಸಂಗಾತಿಗಳ ಕೊರತೆಯಿಂದ ಮೃಗಾಲಯದಲ್ಲಿ ನರಳುತ್ತಿವೆ.

ಪಿಲಿಕುಳ ಜೈವಿಕ ಉದ್ಯಾನವನದ ಅಧಿಕಾರಿಗಳು ಒದಗಿಸಿದ ಮಾಹಿತಿಯ ಪ್ರಕಾರ, ಪ್ರಸ್ತುತ 12 ಪಕ್ಷಿ ಪ್ರಭೇದಗಳು ಒಡನಾಡಿಗಳಿಲ್ಲದೆ ಬದುಕುತ್ತಿವೆ. ಮೃಗಾಲಯದಲ್ಲಿರುವ ಒಂಟಿ ಪಕ್ಷಿಗಳೆಂದರೆ ವೈಟ್ ಬೆಲ್ಲಿಡ್ ಸೀ ಈಗಲ್, ವೈಟ್ ಸ್ಕ್ಯಾವೆಂಜರ್ ರಣಹದ್ದು, ಮಲಬಾರ್ ಗ್ರೇ ಹಾರ್ನ್‌ಬಿಲ್, ಕಾಕಟೂ ಗಲಾಹ್, ಶ್ರೀಲಂಕಾದ ಬೇ ಗೂಬೆ, ಗ್ರೇ ಹಾರ್ನ್ಡ್ ಗೂಬೆ, ಬ್ಲೂ ರಾಕ್ ಪಾರಿವಾಳ, ಫ್ಯಾನ್‌ಟೈಲ್ ಪಾರಿವಾಳ, ಕಪ್ಪು ಹಂಸ, ಹಸಿರು ತುರಾಕೊ, ನೇರಳೆ ತುರಾಕೊ ಮತ್ತು ಬೆಳ್ಳಿ ಫೆಸೆಂಟ್ ಸಂಗಾತಿಗಳಿಗಾಗಿ ಕಾಯುತ್ತಿವೆ.

ಸಂಗಾತಿಗಳಿಲ್ಲದ ಹೆಚ್ಚಿನ ಪ್ರಾಣಿಗಳು ಖಿನ್ನತೆಯ ಲಕ್ಷಣಗಳನ್ನು ತೋರಿಸುತ್ತವೆ ಹೀಗಾಗಿ ಅವುಗಳನ್ನು ನಿರ್ವಹಿಸಲು ಕಷ್ಟ ಎಂದು ಕಾರ್ಯಕರ್ತರು ಹೇಳುತ್ತಾರೆ. ಕಳೆದ ಮೂರು ವರ್ಷಗಳಿಂದ ಪಿಲಿಕುಳ ಮೃಗಾಲಯದಲ್ಲಿ ಈಜಿಪ್ಟಿನ ರಣಹದ್ದುಗೆ ಸಂಗಾತಿ ಇಲ್ಲ ಎಂದು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. "ಕೇಂದ್ರ ಮೃಗಾಲಯ ಪ್ರಾಧಿಕಾರದ (CZA) ಮಾರ್ಗಸೂಚಿಗಳ ಪ್ರಕಾರ, ಯಾವುದೇ ಪ್ರಾಣಿ ಅಥವಾ ಪಕ್ಷಿಯನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಸಂಗಾತಿಯಿಲ್ಲದೆ ಇಡಬಾರದು. ಒಂದು ವೇಳೆ ಇಲ್ಲದಿದ್ದರೆ ಕೂಡಲೇ ಸಂಗಾತಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ವನ್ಯಜೀವಿ ಕಾರ್ಯಕರ್ತ ದಿನೇಶ್ ಹೊಳ್ಳ ಹೇಳಿದರು.

ಕೇರಳದ ಕಾಸರಗೋಡಿನ ಕಿದೂರು ಗ್ರಾಮದ ಶಿಕ್ಷಕ, ಸಂರಕ್ಷಣಾವಾದಿ ಮತ್ತು ಪಕ್ಷಿ ತಜ್ಞ ರಾಜು ಕಿದೂರ್ ಮಾತನಾಡಿ ಒಡನಾಡಿಗಳಿಲ್ಲದ ಕೆಲವು ಪಕ್ಷಿಗಳು ಒತ್ತಡಕ್ಕೆ ಗುರಿಯಾಗುತ್ತವೆ, ಇದು ಅವುಗಳಿಗೆ ಮಾರಕವಾಗಬಹುದು ಎಂದು ಹೇಳಿದರು.

pilikula biological park
ಮೈಸೂರು, ಬನ್ನೇರುಘಟ್ಟ ಮೃಗಾಲಯ ಪ್ರವೇಶ ಶುಲ್ಕ ಶೇ.20ರಷ್ಟು ಹೆಚ್ಚಳ..!

ಉದಾಹರಣೆಗೆ, ವೈಟ್ ಬೆಲ್ಲಿಡ್ ಸೀ ಈಗಲ್ ಮತ್ತು ಮಲಬಾರ್ ಗ್ರೇ ಹಾರ್ನ್‌ಬಿಲ್ ಕುಟುಂಬಕ್ಕೆ ಸೇರಿದ ಪಕ್ಷಿಗಳು. ಒಡನಾಡಿಗಳಿಲ್ಲದೆ, ನಾವು ಅವುಗಳ ಸಾಮಾನ್ಯ ಚಟುವಟಿಕೆಗಳನ್ನು ನೋಡಲು ಸಾಧ್ಯವಿಲ್ಲ. ಅವು ತಮ್ಮ ಸಂಗಾತಿಯನ್ನು ಬದಲಾಯಿಸುವುದಿಲ್ಲ, ಆದ್ದರಿಂದ ಅಂತಹ ಪಕ್ಷಿಗಳಿಗೆ ಜೋಡಿಯನ್ನು ಹುಡುಕುವುದು ಸುಲಭದ ಕೆಲಸವಲ್ಲ ಎಂದು ಅವರು ಹೇಳಿದರು.

ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಈ ಪಕ್ಷಿಗಳಿಗಾಗಿ ಜೋಡಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಶೆಟ್ಟಿ ತಿಳಿಸಿದ್ದಾರೆ. ಮೃಗಾಲಯದಲ್ಲಿರುವ ಒಂಟಿ ಪಕ್ಷಿಗಳಿಗೆ ಸಂಗಾತಿಗಳನ್ನು ಕೋರಿ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ (CZA) ನಾವು ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ನಾವು ಇನ್ನೂ CZA ಯಿಂದ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ರಕ್ಷಿಸಲಾದ ಕೆಲವು ಗಾಯಗೊಂಡ ಪಕ್ಷಿಗಳನ್ನು ಕಾಡಿಗೆ ಬಿಡಲು ಸಾಧ್ಯವಿಲ್ಲ, ಮತ್ತು ಅವುಗಳಿಗೆ ಸಂಗಾತಿಯನ್ನು ಹುಡುಕುವುದು ಕಷ್ಟ. ಕಳೆದ ವಾರ, ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ನಾವು ಸುಮಾರು 15 ಹೊಸ ಪ್ರಾಣಿಗಳನ್ನು ಸ್ವೀಕರಿಸಿದ್ದೇವೆ, ಅದರಲ್ಲಿ ನಮಗೆ ಒಂದು ಸೋಮಾರಿ ಕರಡಿ ಸಿಕ್ಕಿತು. ಮೃಗಾಲಯದಲ್ಲಿರುವ ಸೋಮಾರಿ ಕರಡಿ ಒಂದು ವರ್ಷಕ್ಕೂ ಹೆಚ್ಚು ಕಾಲ ಒಡನಾಡಿ ಇಲ್ಲದೆ ಇತ್ತು.

ಈಗ, ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ, ನಾವು ಒಂದು ಜೋಡಿ ಸೋಮಾರಿ ಕರಡಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಅದೇ ರೀತಿ, ನಾವು ಇತರ ಒಂಟಿ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಂಗಾತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com