

ಮೈಸೂರು: 2025 ರ ದಸರಾ ಉತ್ಸವದ ಭಾಗವಾಗಿದ್ದ ಡ್ರೋನ್ ಪ್ರದರ್ಶನದೊಂದಿಗೆ ಪ್ರಸಿದ್ಧ ಮೈಸೂರು ದಸರಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ, ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳ ಗಮನ ಸೆಳೆದಿದೆ.
ಭಾರತದ ಕರ್ನಾಟಕದ ಮೈಸೂರಿನಲ್ಲಿ ರಾತ್ರಿ ಆಕಾಶದಲ್ಲಿ 2,983 ಡ್ರೋನ್‌ಗಳಿಂದ ಹುಲಿಯ ಅದ್ಭುತ ಚಿತ್ರ ರೂಪುಗೊಂಡಿತ್ತು ಎಂದು ಮಾನವ ಸಾಧನೆಗಳು ಮತ್ತು ಅಪ್ರತಿಮ ವಿಷಯಗಳನ್ನು ದಾಖಲಿಸುವ ಜಾಗತಿಕ ಪ್ರಾಧಿಕಾರವು ನವೆಂಬರ್ 24 ರಂದು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದೆ.
ನಾಡ ಹಬ್ಬ ಮೈಸೂರು ದಸರಾ ಕರ್ನಾಟಕದ ಅತ್ಯಂತ ಭವ್ಯ ಮತ್ತು ಶಾಶ್ವತ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ. ತನ್ನ ಅದ್ಭುತ ವೈಭವ, ಐತಿಹಾಸಿಕ ಮಹತ್ವ ಮತ್ತು ಎಲ್ಲಾ ಸಮುದಾಯಗಳ ನಡುವೆ ಸಂಭ್ರಮದ ವಾತಾವರಣವನ್ನು ಮೂಡಿಸುವ ಈ ಉತ್ಸವವು ವಿಶೇಷ ಮೆಚ್ಚುಗೆ ಪಡೆದಿದೆ.
ನಮ್ಮ ಜನರಿಗೆ ಸ್ಮರಣೀಯ ಅನುಭವಗಳನ್ನು ಸೃಷ್ಟಿಸುವ ನಮ್ಮ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಮಾತನಾಡಿ, ಈ ವರ್ಷ ಸುಮಾರು 3000 ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಹೇಳಿದರು. ಗಿನ್ನೆಸ್ ಅಧಿಕಾರಿಗಳ ಗಮನ ಸೆಳೆದಿರುವ ಹುಲಿ ಚಿತ್ರವನ್ನು ಸುಮಾರು 3,000 ಡ್ರೋನ್‌ಗಳನ್ನು ಬಳಸಿ ರಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಡ್ರೋನ್ ಪ್ರದರ್ಶನಕ್ಕಾಗಿ ಸಿಇಎಸ್‌ಸಿ ಬಾಟ್‌ಲ್ಯಾಬ್ ಡೈನಾಮಿಕ್ಸ್ ಜೊತೆ ಪಾಲುದಾರಿಕೆ ಹೊಂದಿತ್ತು ಎಂದು ರಾಜು ಹೇಳಿದರು. ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಈಗಲ್ ಸರ್ಪದ ಮೇಲೆ ಶ್ರೀಕೃಷ್ಣ ನೃತ್ಯ, ಕಾವೇರಿ ಮಾತೆ, ಕರ್ನಾಟಕ ಭೂಪಟದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳನ್ನು ರಚಿಸಲಾಗಿತ್ತು ಎಂದು ಹೇಳಿದರು. ನಾಲ್ಕು ದಿನಗಳ ಡ್ರೋನ್ ಪ್ರದರ್ಶನಕ್ಕಾಗಿ ಸುಮಾರು ಮೂರು ಕೋಟಿ ರೂ. ಖರ್ಚು ಮಾಡಲಾಗಿದೆ, ”ಎಂದು ಅವರು ಹೇಳಿದರು.
Advertisement