ಸಿಎಂ ತವರು ಜಿಲ್ಲೆಯಲ್ಲಿ ಡಿ.ಕೆ ಶಿವಕುಮಾರ್ ಪರ ಮುಸಲ್ಮಾನರ ಪ್ರಾರ್ಥನೆ; ತಮ್ಮ ನಾಯಕರ ಪರ ಒಕ್ಕಲಿಗ-ಅಹಿಂದ ಗುಂಪುಗಳಿಂದ ಬ್ಯಾಟಿಂಗ್

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Vokkaligas take out a bike rally in support of DCM D K Shivakumar in Mysuru on Saturday.
ಮೈಸೂರಿನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಬೆಂಬಲಿಸಿ ಒಕ್ಕಲಿಗರು ಬೈಕ್ ರ್ಯಾಲಿ ನಡೆಸಿದರು.
Updated on

ಮೈಸೂರು: ರಾಜ್ಯ ರಾಜಕೀಯದಲ್ಲಿ ಕುರ್ಚಿ ಕದನಕ್ಕೆ ನಿನ್ನೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ. ಆದರೆ ತಮ್ಮ ನಾಯಕನ ಪರ ಮಾತನಾಡುವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಸಿಎಂ ಹುದ್ದೆಗಾಗಿ ನಡೆಯುತ್ತಿರುವ ಹಗ್ಗಜಗ್ಗಾಟದಲ್ಲಿ ತಮ್ಮ ನಾಯಕನ ಪರ ಹೋರಾಡುತ್ತಲೇ ಇದ್ದಾರೆ.

2023 ರಲ್ಲಿ ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿತ್ತು ಎಂದು ಹೇಳುವ ಪ್ರಕಾರ ಡಿ ಕೆ ಶಿವಕುಮಾರ್ ಅವರನ್ನು ಇನ್ನುಳಿದ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ, ಸ್ವಾಭಿಮಾನಿ ಒಕ್ಕಲಿಗ ಸೇವಾ ಬಳಗ ಮತ್ತು ಇತರ ಹಲವಾರು ಒಕ್ಕಲಿಗ ಸಂಘಟನೆಗಳು ನಿನ್ನೆ ಮೈಸೂರಿನಲ್ಲಿ ಬೈಕ್ ಮೆರವಣಿಗೆ ಆಯೋಜಿಸಿದ್ದವು.

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Vokkaligas take out a bike rally in support of DCM D K Shivakumar in Mysuru on Saturday.
ನಾಯಕತ್ವ ಬದಲಾವಣೆ: ಕಾಂಗ್ರೆಸ್ ಹೈಕಮಾಂಡ್ ಗೆ 'ಹಗ್ಗದ ಮೇಲಿನ ನಡಿಗೆ'!

2023 ರಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುವಲ್ಲಿ ಡಿ ಕೆ ಶಿವಕುಮಾರ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಶ್ರೀಗಳು ಹೇಳಿದರು. ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಬೇಕು. ಶಿವಕುಮಾರ್ ಅವರು ರಾಜ್ಯವನ್ನು ಮುನ್ನಡೆಸುವ ರಾಜಕೀಯ ಮತ್ತು ಆಡಳಿತಾತ್ಮಕ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು.

ಆದರೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ಅಹಿಂದ ಸಂಘಟನೆಗಳು ಮತ್ತು ಸಂವಿಧಾನ ಸಂರಕ್ಷಣಾ ಸಮಿತಿಯ ಕಾರ್ಯಕರ್ತರು ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಸಭೆ ನಡೆಸಿ, ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಿದರೆ ದೆಹಲಿಯ ಎಐಸಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದರು.

Vokkaligas take out a bike rally in support of DCM D K Shivakumar in Mysuru on Saturday.
ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟು ಪ್ರದರ್ಶನ: "ಏಕತೆಯ"ಯ ಹಿಂದಿದೆ ಬಿಡಿಸಲಾಗದ ಕಗ್ಗಂಟು; ಕ್ಷಣಿಕ 'ಆಪ್ಟಿಕ್ಸ್' ಎನ್ನುವುದು ಗ್ಯಾರಂಟಿ..!

ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು; ಅವರನ್ನು ಪದಚ್ಯುತಗೊಳಿಸುವ ಯಾವುದೇ ನಿರ್ಧಾರ ಮಾಡಿದರೆ ದೆಹಲಿಯಲ್ಲಿ ಪ್ರತಿಭಟನೆಗೆ ಒಳಪಡಿಸಲಾಗುತ್ತದೆ; ಮತ್ತು ಈಗ ನಡೆಯುತ್ತಿರುವ ರಾಜಕೀಯ ಗೊಂದಲಗಳನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು.

ಭಾಗವಹಿಸುವವರು ಸಿದ್ದರಾಮಯ್ಯ ಅವರಿಗೆ ತಮ್ಮ ಅಚಲ ಬೆಂಬಲವನ್ನು ಪುನರುಚ್ಚರಿಸಿದರು. ಅವರನ್ನು "ಅಹಿಂದ ಸಮುದಾಯದ ಗುರುತು" ಎಂದು ಬಣ್ಣಿಸಿದರು. ಪರಿಣಾಮಕಾರಿ ಆಡಳಿತದ ಮೂಲಕ ದಮನಿತ ಗುಂಪುಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವುದನ್ನು ಅವರಿಗೆ ಸಲ್ಲುತ್ತಾರೆ. ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಇನ್ನೂ ಬಾಕಿ ಇದೆ. ಇದು ನಾಯಕತ್ವದ ನಿರಂತರತೆಯನ್ನು ನಿರ್ಣಾಯಕವಾಗಿಸಿದೆ ಎಂದರು.

ಅಹಿಂದ ನಾಯಕರೊಬ್ಬರು ಮುಖ್ಯಮಂತ್ರಿಯಾಗಿ ಮುಂದುವರಿಯುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲು ಪಿತೂರಿ ನಡೆಸುತ್ತಿವೆ ಎಂದು ಶಿವರಾಮು ಆರೋಪಿಸಿದರು. ನಂತರ, ಜಲದರ್ಶಿನಿ ಅತಿಥಿ ಗೃಹದ ಮುಂದೆ ಹುಣಸೂರು ರಸ್ತೆಯಲ್ಲಿ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.

ಸಿಎಂ ತವರು ಜಿಲ್ಲೆಯಲ್ಲಿ ಮುಸಲ್ಮಾನರಿಂದ ಡಿ ಕೆ ಶಿವಕುಮಾರ್ ಗೆ ಬೆಂಬಲ

ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿ ಆಗಬೇಕೆಂಬ ಧ್ವನಿ ಮುಂದುವರೆದಿದೆ. ಈ ಬೆಳವಣಿಗೆಯ ಭಾಗವಾಗಿ, ಡಿ.ಕೆ.ಶಿವಕುಮಾರ್ ಪರವಾಗಿ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮೈಸೂರಿನ ಹಜರತ್ ಸಯ್ಯದ್ ಗಮನ್ ಷಾ ಖಾದ್ರಿ ದರ್ಗಾದಲ್ಲಿ ಡಿಕೆ ಶಿವಕುಮಾರ್​​ ಬೆಂಬಲಿಗರು ಒಗ್ಗೂಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com