
ಗದಗ: ಗದಗದ ಶಿರಹಟ್ಟಿಯಲ್ಲಿ ಚಹಾ ಮತ್ತು ಸಿಗರೇಟ್ ಬಾಕಿ ಪಾವತಿಸದ ಕಾರಣ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದು, ಘರ್ಷಣೆ ಕೋಮು ಸ್ವರೂಪ ಪಡೆದುಕೊಂಡಿದೆ.
ತಲಗೇರಿ ಬೀದಿಯಲ್ಲಿ ಪಾನ್ ಅಂಗಡಿ ನಡೆಸುತ್ತಿರುವ ಅಬ್ದುಲ್ ಗಣಿ, ದೇವಪ್ಪ ಪೂಜಾರ್ ಎಂಬಾತನಿಗೆ ಸಿಗರೇಟ್ ಮತ್ತು ಚಹಾದ ಬಾಗಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಅಬ್ದುಲ್ ಗನಿಗೆ 2,500 ರೂ. ನೀಡುವಂತೆ ಹೇಳಿದ್ದಾನೆ. ಹಣ ನೀಡುವ ಬದಲಾಗಿ ದೇವಪ್ಪ ಪಕ್ಕದ ಅಂಗಡಿಗೆ ಹೋಗಿದ್ದಾನೆ. ಈ ವೇಳೆ ಗನಿ ಹಣ ನೀಡುವಂತಿ ಬೆದರಿಸಿದ್ದಾನೆ. ಬಾಕಿ ಮೊತ್ತ ಕೇವಲ 800 ರೂ. ಎಂದು ದೇವಪ್ಪ ವಾದಿಸಿದ್ದರಿಂದ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಘರ್ಷಣೆಗೆ ಆರಂಭವಾಗಿದೆ.
ಗಲಾಟೆಯಲ್ಲಿ ಗಾಯಗೊಂಡ ದೇವಪ್ಪ, ತನ್ನ ಸ್ನೇಹಿತರಿಗೆ ತಿಳಿಸಿದಾಗ ಅವರು ಸ್ಥಳಕ್ಕೆ ಧಾವಿಸಿ ಅಬ್ದುಲ್ ಅಂಗಡಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ನಂತರ ವಾಗ್ವಾದ ಕೋಮು ಸ್ವರೂಪ ಪಡೆದುಕೊಂಡಿತು.
ದೇವಪ್ಪನ ಸ್ನೇಹಿತರು ಮೊದಲು ತಮ್ಮ ಮೇಲೆ ದಾಳಿ ಮಾಡಿ ಅಂಗಡಿಯನ್ನು ಧ್ವಂಸಗೊಳಿಸಿದರು ಎಂದು ಅಬ್ದುಲ್ ಪತ್ನಿ ಮುಮ್ತಾಜ್ ಹೇಳಿದ್ದಾರೆ. ಆದರೆ, ಯುವಕರು ಇದನ್ನು ನಿರಾಕರಿಸಿದ್ದಾರೆ, ಅಬ್ದುಲ್ ಗುಂಪು ಹಿಂದಿನಿಂದ ದಾಳಿ ಮಾಡಿದೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಅಬ್ದುಲ್ ಘನಿ ಮಕಾಂದಾರ್, ದೇವಪ್ಪ ಪೂಜಾರ್, ಪರಶುರಾಮ್ ಡೊಂಕಬಳ್ಳಿ, ಮೈಲಾರಪ್ಪ ಕಪ್ಪಣ್ಣವರ್, ರವಿ ಕಪ್ಪಣ್ಣವರ್ ಹಾಗೂ ವಿರೂಪಾಕ್ಷ ಹಿರೇಮಠ ಎಂಬವರು ಗಾಯಗೊಂಡಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಶಿರಹಟ್ಟಿ ಪಟ್ಟಣದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರ ಮಧ್ಯ ಪ್ರವೇಶದಿಂದ ಸದ್ಯ ಪರಿಸ್ಥಿತಿ ತಿಳಿಗೊಂಡಿದೆ.
Advertisement