
ಕೊಪ್ಪಳ: ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಸಂಗ್ರಹಿಸಿಟ್ಟು ಅನೇಕ ಮಹಿಳೆಯರು ಅದನ್ನು ಸದುಪಯೋಗ ಮಾಡಿಕೊಂಡ ಉದಾಹರಣೆಗಳಿವೆ. ಇತ್ತೀಚೆಗೆ ಬೆಂಗಳೂರು ದಕ್ಷಿಣದ ರಾಮನಗರದಲ್ಲಿ ಗೃಹ ಲಕ್ಷ್ಮೀ ಹಣದಿಂದ ಮಹಿಳೆಯೊಬ್ಬರು ವಾಷಿಂಗ್ ಮೆಷಿನ್ ಖರೀದಿಸಿದ್ದು ಸುದ್ದಿಯಾಗಿತ್ತು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿ ಶಂಕ್ರಮ್ಮ ಎಂಬವರು ತಮ್ಮ ತಬ್ಬಲಿ ಮೊಮ್ಮಗಳು ರೇಖಾಳ ಉಜ್ವಲ ಭವಿಷ್ಯಕ್ಕೆ, ತಮ್ಮ ಖಾತೆಗೆ ಬಂದ ಗೃಹಲಕ್ಷ್ಮೀ ಯೋಜನೆಯ 23 ಕಂತುಗಳ ಹಣವನ್ನು ಖರ್ಚು ಮಾಡದೇ ಉಳಿಸಿಕೊಂಡು ಬಂದಿದ್ದಾರೆ.
ಅಜ್ಜಿ ಶಂಕ್ರಮ್ಮ ಗೃಹಲಕ್ಷ್ಮೀಯಿಂದ ಬಂದ ಸಂಪೂರ್ಣ ಹಣವನ್ನು ಮೊಮ್ಮಗಳು ರೇಖಾಳ ಹೆಸರಿನ ಖಾತೆಗೆ ಜಮಾ ಮಾಡಿದ್ದಾರೆ. ತಂದೆ ತಾಯಿ ಇಲ್ಲದೆ ಬೆಳೆದ ರೇಖಾಳ ಭವಿಷ್ಯ ಮತ್ತು ವಿದ್ಯಾಭ್ಯಾಸವನ್ನು ಸುರಕ್ಷಿತಗೊಳಿಸಲು ಈ ಹಣವನ್ನು ಎತ್ತಿಟ್ಟಿದ್ದೇನೆ ಎಂದು ಹೇಳಿದ್ದಾರೆ.
Advertisement