ರಾಯಚೂರು: ಕಾಂತಾರ ಸಿನಿಮಾ ನೋಡಲು ತೆರಳಿದ್ದ ಇಬ್ಬರು ಯುವಕರು ದುರಂತ ಸಾವು

ಮೃತ ಯುವಕರನ್ನು ವೆಂಕಟೇಶ(28) ಮತ್ತು ಯಲ್ಲಾಲಿಂಗ(28) ಎಂದು ಗುರುತಿಸಲಾಗಿದೆ.
Two youths drowned in canal in Raichur
ಸಾಂದರ್ಭಿಕ ಚಿತ್ರ
Updated on

ರಾಯಚೂರು: ರಿಷಬ್ ಶೆಟ್ಟಿ ಅಭಿನಯದ ಕಾಂತಾರ: ಚಾಪ್ಟರ್ 1 ಸಿನಿಮಾ ನೋಡಲು ತೆರಳಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ದಾರುಣ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದಲ್ಲಿ ಭಾನುವಾರ ನಡೆದಿದೆ.

ಮೃತ ಯುವಕರನ್ನು ವೆಂಕಟೇಶ(28) ಮತ್ತು ಯಲ್ಲಾಲಿಂಗ(28) ಎಂದು ಗುರುತಿಸಲಾಗಿದ್ದು, ಈ ಇಬ್ಬರು ಯುವಕರು ಕಾಂತಾರ ಸಿನಿಮಾ ನೋಡಲು ಮುದಗಲ್​ನಿಂದ ಮಸ್ಕಿಗೆ ಬಂದಿದ್ದರು. ಆದರೆ ಮಧ್ಯಾಹ್ನದ ಶೋಗೆ ಟಿಕೆಟ್ ಸಿಗದಿದ್ದರಿಂದ ನಾಲೆಯಲ್ಲಿ ಈಜಾಡಿ, ನಂತರ ಸಂಜೆ ಸಿನಿಮಾ ನೋಡಲು ಪ್ಲ್ಯಾನ್ ಮಾಡಿಕೊಂಡಿದ್ದರು.

ಅದರಂತೆ ಈಜಲು ತೆರಳಿದ್ದ ಯಲ್ಲಾಲಿಂಗ, ಈಜು ಬಾರದಿದ್ದರಿಂದ ನಾಲೆಯಲ್ಲಿ ಕೊಚ್ಚಿಹೋಗುತ್ತಿದ್ದ. ಆತನ ರಕ್ಷಣೆ ಮಾಡಲು ಹೋಗಿ ವೆಂಕಟೇಶನೂ ನೀರುಪಾಲಾಗಿದ್ದಾನೆ. ಇಬ್ಬರ ಮೃತದೇಹಗಳು ರಾಯಚೂರಿ‌ನ ಸಿರವಾರ ಬಳಿ ಪತ್ತೆ ಆಗಿವೆ.

Two youths drowned in canal in Raichur
ಮಹಾರಾಷ್ಟ್ರ: ಬೆಳಗಾವಿಯ ಒಂದೇ ಕುಟುಂಬದ ಮೂವರು ಸಮುದ್ರಪಾಲು; ನಾಲ್ವರು ನಾಪತ್ತೆ

ಈ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com