ಆನ್‌ಲೈನ್ ಲೈಂಗಿಕ ಶೋಷಣೆ, ದೌರ್ಜನ್ಯ ತಪ್ಪಿಸಲು ಮಕ್ಕಳು-ಪೋಷಕರ ನಡುವಿನ ಸಂಬಂಧ ಉತ್ತಮವಾಗಿರಬೇಕು: KSCPCR ಅಧ್ಯಕ್ಷ ನಾಗಣ್ಣ ಗೌಡ

ಮಕ್ಕಳು ಶಾಲೆಯಲ್ಲಿ ಹೆಚ್ಚೆಚ್ಚು ಸಮಯ ಕಳೆದಂತೆ ಅವರು ಇಂಟರ್ನೆಟ್‌ನ ಅಪಾಯಗಳಿಂದ ದೂರವಿರುತ್ತಾರೆ ಎನ್ನುವ ನಾಗಣ್ಣ ಗೌಡರು, ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಂಡ ಪ್ಯಾನಲ್ ಚರ್ಚೆ ಸೇರಿದಂತೆ ಸಮ್ಮೇಳನವು ಜಂಟಿ ಅಧ್ಯಯನವನ್ನು ಆಧರಿಸಿತ್ತು.
KSCPCR head K Naganna Gowda (second from left) with others
ಕೆಎಸ್‌ಸಿಪಿಸಿಆರ್ ಮುಖ್ಯಸ್ಥ ಕೆ. ನಾಗಣ್ಣ ಗೌಡ (ಎಡದಿಂದ ಎರಡನೆಯವರು) ಇತರರೊಂದಿಗೆ
Updated on

ಬೆಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಮತ್ತು ಚೈಲ್ಡ್‌ಫಂಡ್ ಇಂಡಿಯಾ ಆನ್‌ಲೈನ್ ಲೈಂಗಿಕ ಶೋಷಣೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ನಡೆಸಿದ ಅಧ್ಯಯನ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರ ಇನ್ನೂ ಯಾವುದೇ ನಿಯಂತ್ರಕ ಬದಲಾವಣೆಗಳನ್ನು ಮಾಡಿಲ್ಲ ಎಂದು ಆಯೋಗದ ಅಧ್ಯಕ್ಷ ಕೆ ನಾಗಣ್ಣ ಗೌಡ ಹೇಳಿದ್ದಾರೆ.

ತಾಯಿಯೇ ಮುಖ್ಯ

ಮಕ್ಕಳು ಶಾಲೆಯಲ್ಲಿ ಹೆಚ್ಚೆಚ್ಚು ಸಮಯ ಕಳೆದಂತೆ ಅವರು ಇಂಟರ್ನೆಟ್‌ನ ಅಪಾಯಗಳಿಂದ ದೂರವಿರುತ್ತಾರೆ ಎನ್ನುವ ನಾಗಣ್ಣ ಗೌಡರು, ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಂಡ ಪ್ಯಾನಲ್ ಚರ್ಚೆ ಸೇರಿದಂತೆ ಸಮ್ಮೇಳನವು ಜಂಟಿ ಅಧ್ಯಯನವನ್ನು ಆಧರಿಸಿತ್ತು.

ಅದರ ಪ್ರಕಾರ, ವಿವಿಧ ವಯೋಮಾನದವರಿಗೆ ಆನ್ ಲೈನ್, ಇಂಟರ್ನೆಟ್ ಬೆದರಿಕೆ ವಿಧಾನಗಳು ಬದಲಾಗುತ್ತವೆ. ಪೋಷಕರು ಅಥವಾ ಪ್ರಾಥಮಿಕ ಆರೈಕೆದಾರರ ಒಳಗೊಳ್ಳುವಿಕೆ ಇಲ್ಲಿ ಮಕ್ಕಳಿಗೆ ಅಮೂಲ್ಯವಾದುದು ಎಂದು ತಜ್ಞರು ಒಪ್ಪಿಕೊಳ್ಳುತ್ತಾರೆ. ಅಧ್ಯಯನದ ಅಂಕಿಅಂಶವು ಸಾಮಾನ್ಯವಾಗಿ, ತಾಯಂದಿರು ವಿಶೇಷವಾಗಿ ಮಕ್ಕಳ ಜೊತೆ ಅತ್ಯಂತ ವಿಶ್ವಾಸವಾಗಿ ನಡೆದುಕೊಳ್ಳಬೇಕು, ನಂತರ ತಂದೆ ಮತ್ತು ಒಡಹುಟ್ಟಿದವರು ಎಂದು ಬಹಿರಂಗಪಡಿಸಿದೆ ಎಂದರು.

ಪೋಷಕರು ಸ್ನೇಹಿತರಂತೆ ವರ್ತಿಸಿ

ಪೋಷಕರು ಮಕ್ಕಳ ಜೊತೆ ಸ್ನೇಹಿತರಂತೆ ಇರುವ ಅಭ್ಯಾಸವನ್ನು ನಾವು ಮರಳಿ ತರಬೇಕಾಗಿದೆ. ಇಂಟರ್ನೆಟ್‌ನ ಅಪಾಯಗಳಿಂದ ಮಗುವನ್ನು ಸುರಕ್ಷಿತವಾಗಿರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಪೋಷಕರು-ಮಕ್ಕಳ ಸಂಬಂಧವು ಬಹಳ ಮುಖ್ಯವಾಗಿದೆ ಎಂದು ಟೆಕ್ನಿಕಲರ್ ಗೇಮ್ಸ್‌ನ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥ ವಿಕ್ರಾಂತ್ ಕಪೂರ್ ಹೇಳುತ್ತಾರೆ.

ಮಕ್ಕಳ ವಯಸ್ಸಿನಲ್ಲಿ ಎಲ್ಲವನ್ನೂ ನೋಡುವ, ತಿಳಿದುಕೊಳ್ಳುವ ಕುತೂಹಲ ಪ್ರವೃತ್ತಿ ಹೆಚ್ಚಾಗಿರುತ್ತದೆ. ಅದು ಸಕಾರಾತ್ಮಕ ಲಕ್ಷಣವಾಗಿದೆ, ಆದರೆ ಇದು ಅವರನ್ನು ದುರ್ಬಲ ಮತ್ತು ಮೃದು ಮನಸ್ಸಿಗೆ ಸಹ ದೂಡಬಹುದು, ಹೀಗಾಗಿ ಪೋಷಕರು ಜಾಗರೂಕರಾಗಿರಬೇಕು ಎಂದು ಅಸ್ಟ್ರಾ ಸ್ಟುಡಿಯೋಸ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಮತ್ತು ಸಂಸ್ಥಾಪಕ ಶಾಜಿ ಥಾಮಸ್ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com