
ಗದಗ: ಗದಗ ಬಳಿಯ ಬಿಂಕದಕಟ್ಟಿ ಗ್ರಾಮದಲ್ಲಿ ಬುಧವಾರ ತನ್ನ ಪತ್ನಿಯನ್ನು ಕೊಂದ ಬಸ್ ಕಂಡಕ್ಟರ್‌ನ ಮೂವರು ಮಕ್ಕಳು, ಪೊಲೀಸರು ಆತನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ತಮ್ಮ ತಂದೆಯನ್ನು ತಾವೇ ಕೊಲ್ಲುವುದಾಗಿ ಎಚ್ಚರಿಸಿದ್ದಾರೆ.
ಗದಗ NWKRTC ವಿಭಾಗದ ಕಂಡಕ್ಟರ್ ರಮೇಶ್ ನರಗುಂದ ಆರೋಪಿ. ತನ್ನ ಪತ್ನಿ ಸ್ವಾತಿಯ ಮೇಲೆ ಅನುಮಾನ ಪಟ್ಟು ಏಕಾಏಕಿ ಬೀಸುವ ಕಲ್ಲು ಎತ್ತಿಹಾಕಿ, ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.
ರಮೇಶ್ ಮತ್ತು ಸ್ವಾತಿ ಆಗಾಗ್ಗೆ ಜಗಳವಾಡುತ್ತಿದ್ದರು. ದಂಪತಿಯ ಮಕ್ಕಳು ಸಾಮಾನ್ಯವಾಗಿ ವಿವಾದಗಳಿಂದ ದೂರವಿದ್ದರು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ. ಹುಬ್ಬಳ್ಳಿಯಲ್ಲಿ ಹಿರಿಯ ಮಗಳು, ಗದಗದಲ್ಲಿ ಇಬ್ಬರು ಕಿರಿಯ ಪುತ್ರರು ವ್ಯಾಸಂಗ ಮಾಡುತ್ತಿದ್ದರು, ಈ ಹತ್ಯೆಯಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ತಂದೆ ಯಾವಾಗಲೂ ನಮ್ಮ ಅಗತ್ಯಗಳನ್ನು ಪೂರೈಸುತ್ತಿದ್ದರು, ನಮ್ಮನ್ನು ನೋಡಿಕೊಂಡರು, ಆದರೆ ಅವರು ನನ್ನ ತಾಯಿಯ ಜೊತೆ ಕ್ರೂರಿಯಾಗಿ ವರ್ತಿಸುತ್ತಿದ್ದರು ಎಂದು ಕಿರಿಯ ಮಗ ಮಂಜುನಾಥ್ ಹೇಳಿದರು.
ನಮ್ಮ ತಂದೆ ತಾಯಿಯನ್ನು ಕೊಲ್ಲುತ್ತಾನೆಂದು ನಾವು ಎಂದಿಗೂ ಭಾವಿಸಿರಲಿಲ್ಲ. ಈಗ ನಾವು ಅನಾಥರಾಗಿದ್ದೇವೆ. ಪೊಲೀಸರು ನಮ್ಮ ತಂದೆಗೆ ಮರಣದಂಡನೆ ವಿಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಅವರು ಹಾಗೆ ಮಾಡದಿದ್ದರೆ, ನಾವೇ ಶಿಕ್ಷೆ ವಿಧಿಸುತ್ತೇವೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಯಾವುದೇ ಔಪಚಾರಿಕ ಆರೋಪಪಟ್ಟಿ ಪ್ರಕಟವಾಗಿಲ್ಲ.
Advertisement