
ಹುಬ್ಬಳ್ಳಿ: ಹಿಂದೂ ಯುವಕನೆಂದು ನಂಬಿಸಿ ಅಪ್ತಾಪ್ತ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಮುಸ್ಲಿಂ ಯುವಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ತಾನು ಹಿಂದೂ ಯುವಕನೆಂದು ಪರಿಚಯಿಸಿಕೊಂಡಿದ್ದ ಯುವಕ 17 ವರ್ಷದ ಅಪ್ರಾಪ್ತ ಬಾಲಕಿ ಜೊತೆ ಸಲುಗೆ ಬೆಳೆಸಿಕೊಂಡಿದ್ದಾನೆ. ಇದಾದ ನಂತರ ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ವ್ಯಾಪ್ತಿಯಲ್ಲಿನ ನಿರ್ಜನ ಪ್ರದೇಶಕ್ಕೆ ಯುವಕ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಂತವಾಗಿದ್ದ ಇಬ್ಬರನ್ನು ಕಂಡ ಸ್ಥಳೀಯರು ಪ್ರಶ್ನಿಸಿದ್ದಾರೆ. ಆಗ ಯುವಕ ತನ್ನ ಹೆಸರು ರಮೇಶ್ ಎಂದು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಯುವಕನ ಮೊಬೈಲ್ ಕಿತ್ತುಕೊಂಡು ಪರಿಶೀಲನೆ ನಡೆಸಿದಾಗ ಆತ ಮುಸ್ಲಿಂ ಹಾಗೂ ಆತನ ಹೆಸರು ಸೈಯದ್ ರಹನಾ ಎಂದು ತಿಳಿದುಬಂದಿದೆ. ಇನ್ನು ಸೈಯದ್ ಮೊಬೈಲ್ ನಲ್ಲಿ ಕೆಲ ಯುವತಿಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಇದನ್ನು ಕಂಡ ಸಾರ್ವಜನಿಕರು ಕೂಡಲೇ ಸೈಯದ್ ನನ್ನು ಪೊಲೀಸರಿಗೆ ಒಪ್ಪಿಸಿದ್ದು ಗೋಕುಲ್ ರೋಡ್ ಠಾಣೆಯಲ್ಲಿ ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
Advertisement