
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯ ಬಸ್ ಚಾಲಕನ ಅಜಾಗರೂಕತೆಗೆ ಮತ್ತೊಂದು ಜೀವ ಇಂದು ಬಲಿಯಾಗಿದೆ.
ಬಿಎಂಟಿಸಿ ಬಸ್ ಹರಿದು 9 ವರ್ಷದ ಬಾಲಕಿ ಸ್ಥಳಲ್ಲೇ ಮೃತಪಟ್ಟ ಘಟನೆ ರಾಜಾಜಿನಗರದ 1ನೇ ಬ್ಲಾಕ್ನಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕಮಲಾನಗರದಲ್ಲಿ ಬಿಎಂಟಿಸಿ ಬಸ್‌ನ ಬ್ರೇಕ್ ಫೇಲ್ಯೂರ್ ಆಗಿ ನಂದಿನಿ ಪಾರ್ಲರ್‌ಗೆ ನುಗ್ಗಿದ ಘಟನೆ ನಡೆದಿತ್ತು.
ಬಸ್‌ನಲ್ಲಿ ಇಪ್ಪತ್ತು ಮಂದಿ ಪ್ರಯಾಣಿಕರಿದ್ದರು. ಯಾರಿಗೂ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ನಂದಿನಿ ಪಾರ್ಲರ್‌ನ ಗೋಡೆ ಮತ್ತು ಒಳಗಡೆಯಿದ್ದ ಕೆಲವು ಉಪಕರಣಗಳಿಗೆ ಹಾನಿಯಾಗಿತ್ತು.
ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ದುರಂತ ಅಂತ್ಯ ಕಂಡ ಸಾಕಷ್ಟು ಘಟನೆಗಳು ಬೆಂಗಳೂರಿನಲ್ಲಿ ನಡೆದಿದೆ.
Advertisement