ದಸರಾ ಬೇಸ್‌ಬಾಲ್ ಕಪ್ 2025: ಮೊಟ್ಟ ಮೊದಲ ಬೇಸ್ ಬಾಲ್ ಟೂರ್ನಿಗೆ ಸಂಸದ ಯದುವೀರ್ ಒಡೆಯರ್ ಚಾಲನೆ

ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಮೊಟ್ಟ ಮೊದಲ ರಾಜ್ಯಮಟ್ಟದ ಕ್ಲಬ್ ಬೇಸ್‌ಬಾಲ್ ಟೂರ್ನಮೆಂಟ್‌ ಗೆ ಮಹಾರಾಜಾ ಮೈದಾನದಲ್ಲಿ ಬಿಜೆಪಿ ಸಂಸದ ಯದುವೀರ್ ಒಡೆಯರ್ ಚಾಲನೆ ನೀಡಿದರು.
ದಸರಾ ಬೇಸ್‌ಬಾಲ್ ಕಪ್ 2025 ಟೂರ್ನಿಗೆ ಚಾಲನೆ
ದಸರಾ ಬೇಸ್‌ಬಾಲ್ ಕಪ್ 2025 ಟೂರ್ನಿಗೆ ಚಾಲನೆ
Updated on

ಮೈಸೂರು: ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಮೊಟ್ಟ ಮೊದಲ ರಾಜ್ಯಮಟ್ಟದ ಕ್ಲಬ್ ಬೇಸ್‌ಬಾಲ್ ಟೂರ್ನಮೆಂಟ್‌ ಗೆ ಮಹಾರಾಜಾ ಮೈದಾನದಲ್ಲಿ ಬಿಜೆಪಿ ಸಂಸದ ಯದುವೀರ್ ಒಡೆಯರ್ ಚಾಲನೆ ನೀಡಿದರು. ಇದು ದಸರಾ ಉತ್ಸವದ ಒಂದು ಭಾಗವಾಗಿದ್ದು ಮೈಸೂರಿನ ದಸರಾ ಹಬ್ಬವು ಸಂಸ್ಕೃತಿ, ಕಲೆ ಮತ್ತು ಕ್ರೀಡೆಯ ಸಮನ್ವಯವಾಗಿದ್ದು, ಈ ಬಾರಿ ಅದರ ಭಾಗವಾಗಿ ಬೇಸ್‌ಬಾಲ್ ಸ್ಪರ್ಧೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಬೇಸ್‌ಬಾಲ್ ನಂತಹ ಕ್ರೀಡೆಗಳ ಮೂಲಕ ಯುವಕರಲ್ಲಿ ಕ್ರೀಡಾಸ್ಪೂರ್ತಿ, ಶಿಸ್ತು ಮತ್ತು ಒಗ್ಗಟ್ಟಿನ ಭಾವನೆ ಬೆಳೆಸುವ ಈ ಟೂರ್ನಿಯ ಹಿಂದಿನ ಉದ್ದೇಶ. ಮೂರು ದಿನಗಳ ಕಾಲ ಟೂರ್ನಿ ನಡೆಯಲಿದ್ದು ವಿವಿಧ ಜಿಲ್ಲೆಗಳ ಯುವಕರು ಹಾಗೂ ಯುವತಿಯರ ಒಟ್ಟು 17 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಗೆದ್ದ ತಂಡಕ್ಕೆ ಬಹುಮಾನವನ್ನು ವಿತರಿಸಲಾಗುತ್ತದೆ.

ದಸರಾ ಬೇಸ್‌ಬಾಲ್ ಕಪ್ 2025 ಟೂರ್ನಿಗೆ ಚಾಲನೆ
ಬಲೂನ್ ಮಾರುತ್ತಿದ್ದ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ: ದೂರು ದಾಖಲಿಸಲು ಆಧಾರ್, ಪಡಿತರ ಚೀಟಿಗಳಿಲ್ಲದೆ ವಲಸಿಗರ ಪರದಾಟ!

ದಸರಾ ಬೇಸ್‌ಬಾಲ್ ಕಪ್–2025 ಉದ್ಘಾಟನೆ ಕುರಿತಂತೆ ಯದುವೀರ್‌ ಒಡೆಯರ್ ಅವರು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಟೂರ್ನಿಯ ಕುರಿತು ಪೋಸ್ಟ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಮೈಸೂರಿನ ಯುವಕರಿಗೆ ಹೊಸ ಪ್ರೇರಣೆ ನೀಡುವ ಕ್ರೀಡಾ ಉತ್ಸವ ಎಂದು ಸಂಸದರು ಶ್ಲಾಘಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com