
ಬೆಂಗಳೂರು: ಸರ್ಕಾರಿ ಸಂಸ್ಥೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ವಿರುದ್ಧ ಮುಗಿಬಿದಿದ್ದು, ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ಟ್ವೀಟ್ ಸಮರವೇರ್ಪಟ್ಟಿದೆ.
ಕುವೆಂಪು ನಾಡಕವಿ ಎನ್ನುವ ಬಿ.ವೈ. ವಿಜಯೇಂದ್ರ ಅವರ ಟ್ವೀಟ್ ಗೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಕುವೆಂಪು ನಾಡಕವಿ ಅಲ್ಲ, ರಾಷ್ಟ್ರಕವಿ. ನಮ್ಮದೇ ರಾಷ್ಟ್ರಕವಿ ಬಗ್ಗೆ ಇತಿಹಾಸ ಗೊತ್ತಿಲ್ಲದವರಿಂದ ಆರ್ ಎಸ್ ಎಸ್ ಬಗ್ಗೆ ಗೊತ್ತಿದೆ ಎಂದು ಹೇಗೆ ನಿರೀಕ್ಷೆ ಮಾಡಲಿ ಎಂದಿದ್ದಾರೆ.
ಬಿಜೆಪಿಯೊಂದಿಗಿನ ಸಮಸ್ಯೆ ಸರಳವಾಗಿದೆ. ನಿಮ್ಮ WHATSAPP ನಲ್ಲಿ RSS ಬೇರೆ ಇತಿಹಾಸವನ್ನು ನೀಡುತ್ತದೆ. ನೈಜ ಇತಿಹಾಸವನ್ನು ಓದಲು ನಿಮ್ಮಲ್ಲಿ ಯಾರೂ ಚಿಂತಿಸುವುದಿಲ್ಲ. ನಿಮ್ಮ ಪಕ್ಷದ ಸೈದ್ಧಾಂತಿಕ ಗಾಡ್ ಫಾದರ್ ಸಾವರ್ಕರ್ ಅವರಿಂದಲೇ ಆರಂಭಿಸೋಣ. ಅವರು ಭಾರತವನ್ನು ಮಾತೃಭೂಮಿ ಎಂದು ಕರೆಯಲಿಲ್ಲ, ಅವರು ಅದನ್ನು ಪಿತೃಭೂಮಿ ಎಂದು ಕರೆದರು. 1923 ರಲ್ಲಿ ಸಾವರ್ಕರ್ ಅವರು “Hindutva: Who is a Hindu?”ಎಂಬ ಪುಸ್ತಕದಲ್ಲಿ ಹಿಂದುತ್ವದ ಸೈದ್ಧಾಂತಿಕ ಅಡಿಪಾಯ ಹಾಕಿದರು. ಅದರಲ್ಲಿ ಅವರು ಹಿಂದೂ ಎಂದರೆ ಕೇವಲ ಹುಟ್ಟಿನಿಂದ ಅಥವಾ ನಂಬಿಕೆಯಿಂದಲ್ಲ, ಆದರೆ ಭಾರತ ಪಿತೃಭೂಮಿ ವ್ಯಾಖ್ಯಾನಿಸಿದ್ದಾರೆ. ಇದು ಕೇವಲ ಶಬ್ದಾರ್ಥದ ಆಯ್ಕೆಯಾಗಿರಲಿಲ್ಲ, ಸೈದ್ಧಾಂತಿಕವಾಗಿತ್ತು. "ಪಿತೃಭೂಮಿ" ಭಕ್ತಿಯ ಬಗ್ಗೆ ಅಲ್ಲ; ಇದು ಪ್ರಾಬಲ್ಯದ ಬಗ್ಗೆ ಹೇಳುತ್ತದೆ ಎಂದಿದ್ದಾರೆ.
RSS ಸಿದ್ಧಾಂತಗಳು ನೀವು ಹೇಳಿಕೊಳ್ಳುವಷ್ಟು ಶುದ್ಧ ಮತ್ತು ಉದಾತ್ತವಾಗಿದ್ದರೆ, ನನ್ನ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿ ಎಂದಿದ್ದಾರೆ.
ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್ ಶಾಖೆಗಳಿಗೆ ಏಕೆ ಹಾಜರಾಗುವುದಿಲ್ಲ?
ಅವರು ಯಾಕೆ ಗೋ ರಕ್ಷಕರಲ್ಲ?
ಬಿಜೆಪಿಯಿಂದ ಒಬ್ಬನೇ ಒಬ್ಬ ಜನರಲ್ ಝಡ್ ಏಕೆ ತ್ರಿಶೂಲ್ ದೀಕ್ಷಾ ತೆಗೆದುಕೊಂಡಿಲ್ಲ?
ಲಾಠಿ ಹಿಡಿದು ಗಣವೇಷದಾರಿಯಾಗಿ ಬಿಜೆಪಿ ನಾಯಕರ ಮಕ್ಕಳು ಇರುವುದನ್ನು ನಾವು ಏಕೆ ನೋಡುವುದಿಲ್ಲ?
ಬಿಜೆಪಿ ನಾಯಕರು ತಮ್ಮ ಮನೆಗಳಲ್ಲಿ ಮನುಸ್ಮೃತಿಯನ್ನು ಏಕೆ ಅನುಸರಿಸಿಲ್ಲ
100 ವರ್ಷಗಳ ನಂತರವೂ RSS ಏಕೆ ನೋಂದಾಯಿತ ಸಂಸ್ಥೆಯಾಗಿಲ್ಲ?
RSS ತನ್ನ ಪ್ರಧಾನ ಕಛೇರಿಯಲ್ಲಿ ಜನವರಿ 26, 2002 ರಂದು ಮೊದಲ ಬಾರಿಗೆ ರಾಷ್ಟ್ರಧ್ವಜವನ್ನು ಹಾರಿಸಿತು ಎಂದು ನಿಮಗೆ ತಿಳಿದಿದೆಯೇ?
Advertisement