'ಜಾತಿ ಗಣತಿಯಲ್ಲಿ ಭಾಗವಹಿಸದಿರುವ ಸುಧಾ ಮೂರ್ತಿ ಆಯ್ಕೆಯನ್ನು ಗೌರವಿಸುತ್ತೇನೆ'

ಅವರು ಏನೇ ಹೇಳಿದ್ದರೂ, ಅದು ಅಭಿವ್ಯಕ್ತಿಯ ಒಂದು ಭಾಗ. ಅದು ಅವರ ಆಯ್ಕೆ. ಸರ್ಕಾರವಾಗಿ, ನಾವು ಯಾರನ್ನೂ ಇದರಲ್ಲಿ ಭಾಗವಹಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಅದು ಅವರ ಆಯ್ಕೆಗೆ ಬಿಟ್ಟ ವಿಚಾರ.
"It's her choice": Karnataka Minister on Sudha Murty's decision to not join caste survey
ಸಚಿವ ಸಂತೋಷ್ ಲಾಡ್
Updated on

ಬೆಂಗಳೂರು: ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರು ಜಾತಿ ಜನಗಣತಿ ಎಂದೇ ಕರೆಯಲಾಗುತ್ತಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಭಾಗವಹಿಸದಿರುವ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕ ಮತ್ತು ಕಾರ್ಮಿಕ ಸಚಿವೆ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.

"ಅವರು ಏನೇ ಹೇಳಿದ್ದರೂ, ಅದು ಅಭಿವ್ಯಕ್ತಿಯ ಒಂದು ಭಾಗ. ಅದು ಅವರ ಆಯ್ಕೆ. ಸರ್ಕಾರವಾಗಿ, ನಾವು ಯಾರನ್ನೂ ಇದರಲ್ಲಿ ಭಾಗವಹಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಅದು ಅವರ ಆಯ್ಕೆಗೆ ಬಿಟ್ಟ ವಿಚಾರ. ನಾವು ಅದನ್ನು ಗೌರವಿಸುತ್ತೇವೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಸುಧಾ ಮೂರ್ತಿ ಅವರ ನಿರ್ಧಾರ ಸಮಾಜದ ಮೇಲೆ ಯಾವುದೇ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ. ಅವರು ತಮ್ಮ ನಿಲುವನ್ನು ತೆಗೆದುಕೊಂಡಿದ್ದರೆ, ನಾನು ಅವರನ್ನು ಗೌರವಿಸುತ್ತೇನೆ" ಎಂದು ಅವರು ಹೇಳಿದರು.

"It's her choice": Karnataka Minister on Sudha Murty's decision to not join caste survey
ನಾವು ಹಿಂದುಳಿದ ಜಾತಿಗೆ ಸೇರಿಲ್ಲ: ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ನಾರಾಯಣಮೂರ್ತಿ- ಸುಧಾಮೂರ್ತಿ ನಿರಾಕರಣೆ!

ಸುಧಾ ಮೂರ್ತಿ ಮತ್ತು ಅವರ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ನಡೆಸುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ ನಂತರ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಬರೆದ ಸ್ವಯಂ ದೃಢೀಕೃತ ಪತ್ರದಲ್ಲಿ, ಸುಧಾ ಮೂರ್ತಿ ಅವರು, ತಾವು ಹಿಂದುಳಿದ ಸಮುದಾಯಕ್ಕೆ ಸೇರಿದವರಲ್ಲ. ಆದ್ದರಿಂದ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಪತ್ರದಲ್ಲಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ವೈಯಕ್ತಿಕ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. "ನಾವು ಮತ್ತು ನಮ್ಮ ಕುಟುಂಬ ಜನಗಣತಿಯಲ್ಲಿ ಭಾಗವಹಿಸುವುದಿಲ್ಲ ಮತ್ತು ನಾವು ಅದನ್ನು ಈ ಪತ್ರದ ಮೂಲಕ ದೃಢೀಕರಿಸುತ್ತಿದ್ದೇವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com