ಹದಿಹರೆಯದಲ್ಲಿ ಗರ್ಭಧಾರಣೆ ಹೆಚ್ಚಳ: ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ POCSO ಜಾಗೃತಿ ಅಭಿಯಾನ

ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ವಿದ್ಯಾ ಕುಮಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ POCSO ಕಾಯ್ದೆಯ ಕುರಿತು ಜಾಗೃತಿ ಮೂಡಿಸಲು ಇತ್ತೀಚೆಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಗರ್ಭಧಾರಣೆಯ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳು 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಜ್ಜಾಗುತ್ತಿವೆ.

ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕಿ ವಿದ್ಯಾ ಕುಮಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ POCSO ಕಾಯ್ದೆಯ ಕುರಿತು ಜಾಗೃತಿ ಮೂಡಿಸಲು ಇತ್ತೀಚೆಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಕಾರ್ಯಕ್ರಮವು ನವೆಂಬರ್‌ನಲ್ಲಿ ಪ್ರಾರಂಭವಾಗಿ ಜನವರಿಯವರೆಗೆ 40,000 ಸರ್ಕಾರಿ ಶಾಲೆಗಳು ಮತ್ತು 4,248 ಕಾಲೇಜುಗಳಲ್ಲಿ ನಡೆಯಲಿದೆ. ಶಿಕ್ಷಕರಿಗೆ ಈಗಾಗಲೇ ಮಾಜಿ ನ್ಯಾಯಾಧೀಶರು, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಮತ್ತು ಕಾನೂನು ತಜ್ಞರು ಪೋಕ್ಸೊ ಕಾಯ್ದೆಯ ಕುರಿತು ತರಬೇತಿ ನೀಡಿದ್ದಾರೆ ಎಂದರು.

Representational image
ಮಹಿಳೆಯರಿಗೆ POSH ಮತ್ತು POCSO ಕಾಯ್ದೆ ಬಗ್ಗೆ ಅರಿವು ಇರಬೇಕು: NCW ಅಧ್ಯಕ್ಷೆ ವಿಜಯ ರಾಹತ್ಕರ್

ಮಕ್ಕಳ ಹಕ್ಕುಗಳ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ್ ಶರ್ಮಾ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಮತ್ತು ಇತರರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದೇವೆ. ಹೆಚ್ಚುವರಿಯಾಗಿ, ನಾವು ವಿದ್ಯಾರ್ಥಿನಿಯರಿಗಾಗಿ ಆತ್ಮರಕ್ಷಣಾ ತರಗತಿಗಳನ್ನು ನಡೆಸುತ್ತಿದ್ದೇವೆ ಎಂದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಂದರೇನು?

POCSO ಕಾಯ್ದೆಯ ಹಿನ್ನೆಲೆ ಮತ್ತು ನಿಬಂಧನೆಗಳು, ಅಪರಾಧಗಳು ಮತ್ತು ಶಿಕ್ಷೆಗಳು, ಮಕ್ಕಳ ಕಾನೂನುಗಳು (2015–2021) ಮತ್ತು ತಿದ್ದುಪಡಿಗಳು, ಜಾಗರೂಕತೆ ಮತ್ತು ಜಾಗೃತಿ ಕುರಿತು ಚರ್ಚೆ ಮತ್ತು ಸಂವಾದ, ಹದಿಹರೆಯದಲ್ಲಿ ಪ್ರೀತಿ ಮತ್ತು ಪ್ರಣಯದ ಭಾವನಾತ್ಮಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತು ಮಾರ್ಗಸೂಚಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪತ್ರಿಕೆಗೆ ಲಭ್ಯವಾಗಿದೆ.

ವಿದ್ಯಾರ್ಥಿನಿಯರು ಲೈಂಗಿಕ ಶೋಷಣೆಯ ಅಪಾಯದಲ್ಲಿದ್ದರೆ ಏನು ಮಾಡಬೇಕೆಂದು ಶಿಕ್ಷಣ ನೀಡಲಾಗುತ್ತದೆ. ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳು ಮತ್ತು ಮುಕ್ತ ಮನೆಗಳೊಂದಿಗೆ ಪರಿಚಿತತೆಯನ್ನು ಪ್ರೋತ್ಸಾಹಿಸುತ್ತದೆ.

ಮಕ್ಕಳ ಹಕ್ಕುಗಳ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ್ ಶರ್ಮಾ ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದರು. ಕರ್ನಾಟಕದಲ್ಲಿ ಹದಿಹರೆಯದ ಗರ್ಭಧಾರಣೆಯು ಹೆಚ್ಚಿದೆ. ಇದು ಭಾವನಾತ್ಮಕ ಮತ್ತು ದೈಹಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಸರ್ಕಾರ ಈ ಉಪಕ್ರಮವನ್ನು ಮೊದಲೇ ಪ್ರಾರಂಭಿಸಬೇಕಿತ್ತು. ಶಿಕ್ಷಕರು ಅಥವಾ ತಜ್ಞರು ವಿದ್ಯಾರ್ಥಿಗಳಿಗೆ ಮೊದಲು ಮಾನವ ಜೀವಶಾಸ್ತ್ರ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಕಲಿಸಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com