RSS‌ ನಿಷೇಧಿಸಲು ಕಾಂಗ್ರೆಸ್ ಹೊರಟಿದೆ; ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸುತ್ತೆ: ಸಂತೋಷ್ ಹೆಗ್ಡೆ

ಸಂಘಟನೆ ಮಾಡುವ ಅಧಿಕಾರ, ಹಕ್ಕು ಸಂವಿಧಾನ ಕೊಟ್ಟಿದೆ. ಹೀಗಾಗಿರುವಾಗ ಆರ್.ಎಸ್.ಎಸ್. ಸಂಘಟನೆ ನಿಷೇಧಿಸಲು ಹೊರಟಿರುವುದು ಸಂವಿಧಾನಕ್ಕೆ ವಿರೋಧಿ ಎಂದರು.
Santosh hegde
ಸಂತೋಷ್ ಹೆಗ್ಡೆ
Updated on

ಧಾರವಾಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಎಲ್ಲರಿಗೂ ಸಂಘಟನೆ ಕಟ್ಟುವ ಹಕ್ಕು ಸಂವಿಧಾನವೇ ನೀಡಿದ್ದು, ಇದೀಗ ಸಂಘಟನೆ ನಿಷೇಧ ಮಾಡುವ ಕ್ರಮ ಸಂವಿಧಾನ ವಿರೋಧಿ ನಡೆ ಎಂದು ಮಾಜಿ‌ ಲೋಕಾಯುಕ್ತ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆ ಮಾಡುವ ಅಧಿಕಾರ, ಹಕ್ಕು ಸಂವಿಧಾನ ಕೊಟ್ಟಿದೆ. ಹೀಗಾಗಿರುವಾಗ ಆರ್.ಎಸ್.ಎಸ್. ಸಂಘಟನೆ ನಿಷೇಧಿಸಲು ಹೊರಟಿರುವುದು ಸಂವಿಧಾನಕ್ಕೆ ವಿರೋಧಿ ಎಂದರು. ಒಂದು ವೇಳೆ ಸರ್ಕಾರ ಆರ್ ಎಸ್ ಎಸ್ ಸಂಘಟನೆ ನಿಷೇಧ ಮಾಡಿದರೇ ಆ ನಿರ್ಧಾರವೇ ಕಾಂಗ್ರೆಸ್ ಗೆ ತಿರುಗು ಬಾಣವಾಗಲಿದೆ ಎಂದರು.

ರಾಜ್ಯದಲ್ಲಿ ಆರ್. ಎಸ್.ಎಸ್.‌ ನಿಷೇಧಿಸಲು ಕಾಂಗ್ರೆಸ್ ಪಕ್ಷ ಹೊರಟಿದೆ. ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸುತ್ತಾರೆ. ಆಗ ಅವರ ಆಟ ಶುರುವಾಗುತ್ತದೆ. ಒಟ್ಟಿನಲ್ಲಿ ನಿಷೇಧಿಸುವ ಆಟ ಜೋರಾಗಿದೆ ಎಂದರು.

Santosh hegde
RSS ನಿಷೇಧ: ದೇವೇಗೌಡರು 25 ವರ್ಷಗಳ ಹಿಂದೆಯೇ ಹೇಳಿದ್ರಾ? ಕುತೂಹಲ ಕೆರಳಿಸಿದ ಪ್ರಿಯಾಂಕ್ ಖರ್ಗೆ ಟ್ವೀಟ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com