
ಬೆಂಗಳೂರು: ಬೆಂಗಳೂರು ನಗರಕ್ಕೆ ಸಭೆಗಳು, ಪ್ರೋತ್ಸಾಹಕಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳ ಭಾಗವಾಗಿ ಆಗಮಿಸುವ ಪ್ರವಾಸಿಗರು, ಉದ್ಯಮಿಗಳಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮಿದೆ. ಇದು ವ್ಯಾಪಾರ ಪ್ರವಾಸೋದ್ಯಮದ ಒಂದು ಭಾಗವಾಗಿದೆ.
ಪ್ರವಾಸ ನಿರ್ವಾಹಕರು ಮತ್ತು ಪಾಲುದಾರರು ಬೆಂಗಳೂರಿಗೆ ಬರದೇ ಕೆಂಪೇಗೌಡ ಏರ್ ಪೋರ್ಟ್ ಹತ್ತಿರ ಸೇರಿ ಸಭೆ-ಸಂವಹನಗಳನ್ನು ನಡೆಸಿ ಸಂಜೆ ವಿಮಾನ ಹತ್ತಿ ಹೋಗುತ್ತಾರೆ. ವಿಮಾನ ಹತ್ತುವ ಮೊದಲು ವಿಮಾನ ನಿಲ್ದಾಣದಲ್ಲಿ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ರಜೆ ಕಳೆಯುತ್ತಿದ್ದಾರೆ. ಪ್ರಯಾಣ ಮತ್ತು ಪ್ರವಾಸೋದ್ಯಮ ವೃತ್ತಿಪರರ ಸಂಘವಾದ ಸ್ಕಲ್ ಇಂಡಿಯಾ-ಬೆಂಗಳೂರು ವೃತ್ತದ ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ನಿನ್ನೆ ನಡೆದ ಕಾರ್ಯಾಗಾರ ಸಂದರ್ಭದಲ್ಲಿ ಪ್ರವಾಸ ನಿರ್ವಾಹಕರು ಮತ್ತು ಪಾಲುದಾರರಲ್ಲಿ ಚರ್ಚಿಸಲಾದ ಹೊಸ ಪ್ರವೃತ್ತಿ ಕಂಡುಬಂತು.
ಸಂಚಾರ ದಟ್ಟಣೆ ಇಲ್ಲದ ಆಂಧ್ರಪ್ರದೇಶ ಸೇರಿದಂತೆ ದೇವನಹಳ್ಳಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳು ಮತ್ತು ರೆಸಾರ್ಟ್‌ಗಳ ಉಪಸ್ಥಿತಿಯು ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಇಳಿಯುವ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ. ಇದಲ್ಲದೆ, ಕೆಐಎ ಆವರಣದಲ್ಲಿರುವ ತಿಂಡಿತಿನಿಸು ಕೇಂದ್ರಗಳು, ಅದರ ಸುತ್ತಮುತ್ತಲಿನ ಹೊಟೇಲ್ ಗಳು ಪ್ರವಾಸಿಗರಿಗೆ ದೊಡ್ಡ ಆಕರ್ಷಣೆಯಾಗಿದೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣದ ಬಳಿ ಸ್ಟಾರ್ ಹೋಟೆಲ್‌ಗಳಿದ್ದರೂ, ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಮಣ್ಣಿನ ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳು ಸಹ ಇವೆ. ವಿಮಾನ ನಿಲ್ದಾಣವು ಒಳಗೆ ಮತ್ತು ಹೊರಗೆ ವಿಸ್ತಾರ ಪ್ರದೇಶ ಹೊಂದಿದ್ದು, ಸಂಚಾರ ದಟ್ಟಣೆಯನ್ನು ತಪ್ಪಿಸಲು ಬಯಸುವವರಿಗೆ ಇದು ಜನಪ್ರಿಯ ತಾಣವಾಗಿದೆ ಎಂದು ಪ್ರವಾಸ ನಿರ್ವಾಹಕರು ಹೇಳುತ್ತಾರೆ.
ಪ್ರವಾಸೋದ್ಯಮ ತಜ್ಞ ಮತ್ತು ಸ್ಕಲ್ ಸದಸ್ಯ ರೋಹಿತ್ ಹಂಗಲ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹೊಸ ಸಭೆ-ಸಂವಹನ ಕೇಂದ್ರವಾಗುತ್ತಿದೆ ಎಂದು ಹೇಳಿದರು. ಜನರು ಸಭೆಗಳಿಗೆ ಮಾತ್ರ ಬರುತ್ತಿಲ್ಲ, ಸಭೆಗಳನ್ನು ಸಹ ನಡೆಸುತ್ತಿದ್ದಾರೆ. ಅಲ್ಲಿ ಆತಿಥ್ಯ ವಲಯವು ಪ್ರವರ್ಧಮಾನಕ್ಕೆ ಬರುತ್ತಿದೆ. ಬೆಂಗಳೂರಿನ ಸಂಚಾರ ಮತ್ತು ಟೋಲ್ ಪ್ಲಾಜಾವನ್ನು ತಪ್ಪಿಸಲು ಪ್ರವಾಸಿಗರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಮೂಲಸೌಕರ್ಯ ಕೊರತೆ
ಬೆಂಗಳೂರು ಅನೇಕ ಪ್ರವಾಸಿಗರಿಗೆ ಒಂದು ನಿಲುಗಡೆ ತಾಣವಾಗಿದ್ದು, ಜನಸಂಖ್ಯೆ ಹೆಚ್ಚಿದ್ದರೂ ಮೂಲಸೌಕರ್ಯ ಕಳವಳಕಾರಿಯಾಗಿದೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯ ಒಳಹರಿವಿನೊಂದಿಗೆ ಕೆಲಸವು ವೇಗವನ್ನು ಪಡೆಯಬೇಕಾಗಿದೆ ಎಂದು ಬೆಂಗಳೂರು ಕ್ಲಬ್‌ನ SKAL ಇಂಟರ್‌ನ್ಯಾಷನಲ್‌ನ ಅಧ್ಯಕ್ಷ ಮಣಿಮೇಗಲೈ ಹೇಳುತ್ತಾರೆ.
ಪ್ರವಾಸೋದ್ಯಮ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ (ದಕ್ಷಿಣ) ವೆಂಕಟೇಶನ್ ಡಿ, ಪ್ರವಾಸೋದ್ಯಮವು ಕೇವಲ ಒಂದು ಇಲಾಖೆಯನ್ನು ಒಳಗೊಂಡಿಲ್ಲ ಎಂದರು. ಇದು ಗೃಹ ವ್ಯವಹಾರಗಳು, ನಾಗರಿಕ ವಿಮಾನಯಾನ, ನಗರಾಭಿವೃದ್ಧಿ ಇಲಾಖೆ ಮತ್ತು ಇತರ ಹಲವು ಇಲಾಖೆಗಳಿಂದ ಸಮನ್ವಯ ಮತ್ತು ಸಾಮೂಹಿಕ ಪ್ರಯತ್ನಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ಪ್ರವಾಸೋದ್ಯಮದ ಜನರನ್ನು ಹೆಚ್ಚಿಸಲು ಸಾಮೂಹಿಕವಾಗಿ ಗಮನ ಮತ್ತು ಪ್ರಯತ್ನಗಳನ್ನು ಮಾಡಬೇಕು ಎಂದರು.
ಟ್ಯಾಕ್ಸಿ ಮತ್ತು ಆಟೋ ಚಾಲಕರು ನಗರ ಮತ್ತು ರಾಜ್ಯದ ಮುಂಚೂಣಿ ಮತ್ತು ಮೊದಲ ಪ್ರವಾಸೋದ್ಯಮ ರಾಯಭಾರಿಗಳಾಗಿರುವುದರಿಂದ ಅವರಿಗೆ ನಿರಂತರ ತರಬೇತಿಯನ್ನು ನೀಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವೆಂಕಟೇಶನ್ ಹೇಳಿದರು. ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಕೌಶಲ್ಯ, ಆತಿಥ್ಯ ಮತ್ತು ಸಂವಹನದಲ್ಲಿ ತರಬೇತಿ ನೀಡಬೇಕಾಗಿದೆ.
Advertisement