
ಬೆಂಗಳೂರು: ಎಷ್ಟೇ ಮುನ್ನೆಚ್ಚರಿಕೆ ನೀಡಿದರೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ದುರಂತದ ಪ್ರಕರಣಗಳು ಪ್ರತಿವರ್ಷ ಸಂಭವಿಸುತ್ತವೆ. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಹಲವರು ಶಾಶ್ವತವಾಗಿ ಕಣ್ಣು ಕಳೆದುಕೊಂಡದ್ದುಂಟು.
ನಿನ್ನೆ ದೀಪಾವಳಿ ಹಬ್ಬದ ಮೊದಲ ದಿನವೇ ಪಟಾಕಿ ಹೊಡೆಯುವ ಭರದಲ್ಲಿ ಬೆಂಗಳೂರಿನಲ್ಲಿ ಏಳು ಮಕ್ಕಳು ಸೇರಿದಂತೆ ಹಲವು ಜನರು ಗಾಯಗೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ 11ಕ್ಕೂ ಹೆಚ್ಚು ಮಂದಿ ಪಟಾಕಿ ಹೊಡೆದು ಕಣ್ಣು, ಶರೀರಕ್ಕೆ ಗಾಯವಾಗಿ ಚಿಕಿತ್ಸೆಗೆಂದು ಬಂದಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 14 ವರ್ಷದ ಹಾಗೂ 12 ವರ್ಷದ ಮಕ್ಕಳಿಬ್ಬರು ಗಾಯಗೊಂಡು ಚಿಕಿತ್ಸೆ ಪಡೆದರೆ, ನಾರಾಯಣ ನೇತ್ರಾಲಯದಲ್ಲಿ 3 ವರ್ಷ, 4 ವರ್ಷ ಹಾಗೂ 14 ವರ್ಷದ ಮಕ್ಕಳು ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಐವರಲ್ಲಿ ಇಬ್ಬರು ಸ್ವತಃ ಪಟಾಕಿ ಹಚ್ಚಿ ಗಾಯಗೊಂಡರೆ, ಇನ್ನುಳಿದ ಮೂವರು ಹಚ್ಚಿದ ಪಟಾಕಿ ನೋಡುವಾಗ ಗಾಯಗೊಂಡಿರುವುದಾಗಿ ಮಿಂಟೋ ಕಣ್ಣಿನ ಆಸ್ಪತ್ರೆಯ ಡಾ. ಶಶಿಧರ್ ಮಾಹಿತಿ ನೀಡಿದ್ದಾರೆ.
ಪಟಾಕಿ ಹೊಡೆಯುವ ಮುನ್ನ ಎಚ್ಚರ!
ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಅದೆಷ್ಟೋ ಜನರು ದುಬಾರಿಯಾದರೂ ಪಟಾಕಿನ ಖರೀದಿಸಿ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ಅದೇ ಪಟಾಕಿಯಿಂದ ಅದೆಷ್ಟೋ ಜನರು ಸುಟ್ಟುಕೊಂಡು ಅಥವಾ ಪಟಾಕಿ ಸಿಡಿದು ಕಣ್ಣುಗಳಿಗೆ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗುವುದೇನು ಹೊಸದೇನಲ್ಲ. ಅದರಲ್ಲೂ ಮೊದಲ ದಿನವೇ ಪಟಾಕಿಯಿಂದ ಕಣ್ಣಿಗೆ ಪೆಟ್ಟಾದ ಐವರು ಮಕ್ಕಳು ಮಿಂಟೋ ಹಾಗೂ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದಿದ್ದು, ಇವರೆಲ್ಲರೂ 15 ವರ್ಷದೊಳಗಿನ ಮಕ್ಕಳಾಗಿದ್ದಾರೆ.
Advertisement