ಸಮೀಕ್ಷೆ ವಿಸ್ತರಣೆ: ತಮ್ಮ ಇಲಾಖೆಗಳಲ್ಲಿ ಬಾಕಿ ಉಳಿದಿರುವ ರಾಶಿ- ರಾಶಿ ಕೆಲಸ ನೆನೆದು ಭಯಗೊಂಡಿರುವ ಸರ್ಕಾರಿ ನೌಕರರು!

ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆಯು ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಿತ್ತು, ಆದರೆ ರಾಜ್ಯದ ಹಲವು ಭಾಗಗಳಲ್ಲಿ ಕೇವಲ ಶೇಕಡಾ 60 ರಷ್ಟು ಗಣತಿ ಪೂರ್ಣಗೊಂಡಿದೆ. ದೀಪಾವಳಿ ಹಬ್ಬದ ರಜೆಗೆ ಮುಂಚಿತವಾಗಿ ಸಮೀಕ್ಷೆಯ ಗಡುವನ್ನು ಅಕ್ಟೋಬರ್ 18 ಕ್ಕೆ ವಿಸ್ತರಿಸಲು ಸರ್ಕಾರ ನಿರ್ಧರಿಸಲಾಗಿದೆ.
An enumerators collects details from a family as part of the socio-economic survey
ಸಮೀಕ್ಷೆಯಲ್ಲಿ ತೊಡಗಿರುವ ಗಣತಿದಾರರು
Updated on

ಬೆಂಗಳೂರು: ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮತ್ತಷ್ಟು ದಿನ ವಿಸ್ತರಿಸಿರುವುದರ ಬಗ್ಗೆ ಸರ್ಕಾರಿ ನೌಕರರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಈಗಾಗಲೇ ಕೆಲಸದ ಹೊರೆಯಿಂದ ಬಳಲುತ್ತಿರುವ ಅವರು, ಸಮೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ತಮ್ಮ ಕಚೇರಿಗಳಿಗೆ ಹಿಂತಿರುಗಿದ ನಂತರ ಕೆಲಸದ ಹೊರೆಯನ್ನು ನೆನೆದು ಭಯ ಭೀತರಾಗಿದ್ದಾರೆ.

ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆಯು ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಿತ್ತು, ಆದರೆ ರಾಜ್ಯದ ಹಲವು ಭಾಗಗಳಲ್ಲಿ ಕೇವಲ ಶೇಕಡಾ 60 ರಷ್ಟು ಗಣತಿ ಪೂರ್ಣಗೊಂಡಿರುವುದರಿಂದ, ದೀಪಾವಳಿ ಹಬ್ಬದ ವಿರಾಮಕ್ಕೆ ಮುಂಚಿತವಾಗಿ ಸಮೀಕ್ಷೆಯ ಗಡುವನ್ನು ಅಕ್ಟೋಬರ್ 18 ಕ್ಕೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈಗ, ಬೆಂಗಳೂರು ಹೊರತುಪಡಿಸಿ, ಹೆಚ್ಚಿನ ಜಿಲ್ಲೆಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಶಿಕ್ಷಕರನ್ನು ಸಮೀಕ್ಷೆ ಕೆಲಸದಿಂದ ಬಿಡುಗಡೆ ಮಾಡಲಾಗಿದೆ.

ದೀಪಾವಳಿಯ ಸಮಯದಲ್ಲಿ ಸಮೀಕ್ಷೆ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಕೋರಿ ಈ ಹಿಂದೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಕರ್ನಾಟಕ ಸರ್ಕಾರಿ ನೌಕರರ ಸಂಘವು, ವಿವಿಧ ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯನ್ನು ತೆಗೆದುಕೊಳ್ಳುವ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮತ್ತೊಂದು ಪತ್ರವನ್ನು ಬರೆದಿದೆ. ಪರೀಕ್ಷೆಯು ನವೆಂಬರ್ 2 ರಂದು ನಿಗದಿಯಾಗಿದ್ದು, ಈ ಶಿಕ್ಷಕರಿಗೆ ಅಧ್ಯಯನ ಮಾಡಲು ಅವಕಾಶ ನೀಡುವಂತೆ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.

ಈ ಮಧ್ಯೆ, ಕರ್ನಾಟಕ ಸಚಿವಾಲಯದ ಸಂಘದ ಸಿಬ್ಬಂದಿ ತಮ್ಮ ಕಚೇರಿ ಕೆಲಸ ಬಾಕಿ ಉಳಿದಿರುವುದರಿಂದ ಸಮೀಕ್ಷೆ ಕೆಲಸವನ್ನು ಅರ್ಧದಲ್ಲೇ ಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಡೆಯುತ್ತಿರುವ ಸಮೀಕ್ಷೆಗಾಗಿ ನಿಯೋಜಿಸಲಾದ 1,600 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಸಚಿವಾಲಯದಿಂದ ಬಿಡುಗಡೆ ಮಾಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದರು.

An enumerators collects details from a family as part of the socio-economic survey
ಜಾತಿ ಸಮೀಕ್ಷೆ: ಸುಧಾಮೂರ್ತಿ-ನಾರಾಯಣಮೂರ್ತಿ ಕುಟುಂಬ ಮಾಹಿತಿ ಬಹಿರಂಗವಾಗಿದ್ದು ಹೇಗೆ?

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಂಹವನ- ಸಂಪರ್ಕ, ನ್ಯಾಯಾಲಯದ ತಿರಸ್ಕಾರ ಪ್ರಕರಣಗಳು, ವಿವಿಧ ನ್ಯಾಯಾಲಯಗಳ ಮುಂದೆ ಇರುವ ಸರ್ಕಾರಿ ಪ್ರಕರಣಗಳು, ಸಂಪುಟ ಸಭೆಗಳಲ್ಲಿ ಚರ್ಚಿಸಬೇಕಾದ ಕಾರ್ಯಸೂಚಿ, ಆರ್‌ಟಿಐ ಪ್ರಕರಣಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಗಮನ ಹರಿಸಬೇಕಾಗಿದೆ. ಸಚಿವಾಲಯದ ಸಿಬ್ಬಂದಿಯನ್ನು ಇತರ ಇಲಾಖೆಯ ಸಿಬ್ಬಂದಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸಂಘದ ಅಧ್ಯಕ್ಷ ರಮೇಶ್ ಸಂಗ ಅವರು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ, ಡೆಪ್ಯುಟೇಶನ್‌ನಲ್ಲಿರುವ ಸಿಬ್ಬಂದಿ ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸರ್ಕಾರದ ಅಧಿಕೃತ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. ನಮಗೆ ಅನೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದೆ. ಕೆಲವು ಇಲಾಖೆಗಳಲ್ಲಿ, ಒಬ್ಬ ವ್ಯಕ್ತಿ ಇಬ್ಬರ ಕೆಲಸ ಮಾಡುತ್ತಿದ್ದಾರೆ, ಮತ್ತು ಈಗ ಅವರು ಸಹ ಸಮೀಕ್ಷೆಯಲ್ಲಿ ಭಾಗವಹಿಸುತ್ತಿರುವುದರಿಂದ, ಬಹಳಷ್ಟು ಕೆಲಸಗಳು ರಾಶಿ ರಾಶಿಯಾಗಿ ಬಾಕಿ ಉಳಿದಿವೆ ಎಂದು ಅವರು ಹೇಳಿದರು.

ಸಚಿವಾಲಯದ ನೌಕರರ ಮನವಿಯನ್ನು ಉಲ್ಲೇಖಿಸಿ, ಸರ್ಕಾರಿ ಸಂಘದ ಸದಸ್ಯರೊಬ್ಬರು ಬೆಂಗಳೂರು ಅಥವಾ ವಿಧಾನಸೌಧದಲ್ಲಿ ಮಾತ್ರ ಕೆಲಸ ಸ್ಥಗಿತಗೊಂಡಿಲ್ಲ. ಇಲ್ಲಿಂದ ಬರುವ ಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್‌ಗಳಲ್ಲಿ ಕೆಲಸ ಮಾಡುವ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಸಿಬ್ಬಂದಿ ಇಲ್ಲದಿರುವಾಗ, ಯಾರು ಮೇಲ್‌ಗಳನ್ನು ಕಳುಹಿಸಬೇಕು,'' ಎಂದು ಅವರು ಪ್ರಶ್ನಿಸಿದ್ದಾರೆ.. ಅವರ ಪ್ರಕಾರ, ದಿನಾಂಕ ವಿಸ್ತರಿಸುತ್ತಿರುವುದರಿಂದ ಕೆಲಸ ಪೂರ್ಣಗೊಳ್ಳದ ಕಾರಣ ಸಿಬ್ಬಂದಿ ನಿರಾಶೆಗೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com