

ಬೆಂಗಳೂರು: ಹೆಚ್ಚುತ್ತಿರುವ "ಜಾಗತಿಕ ಬೆದರಿಕೆಗಳು" ಮತ್ತು ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ರಕ್ಷಣಾ ಪಡೆಗಳು ಹೊಂದಿಕೊಳ್ಳುವ, ಪರಿಣಾಮಕಾರಿ ಮತ್ತು ಯುದ್ಧ-ಸನ್ನದ್ಧವಾಗಿಡಲು ಮಿಲಿಟರಿ ತರಬೇತಿಯನ್ನು ಪರಿವರ್ತಿಸುವ ಅಗತ್ಯ ಇದೆ ಎಂದು ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ಅಕ್ಟೋಬರ್ 23 ಮತ್ತು 24 ರಂದು ಬೆಂಗಳೂರಿನ ಪ್ರಧಾನ ಕಚೇರಿ ತರಬೇತಿ ಕಮಾಂಡ್(ಎಚ್‌ಕ್ಯೂ ಟಿಸಿ) ನಲ್ಲಿ ನಡೆದ ತರಬೇತಿ ಕಮಾಂಡರ್‌ಗಳ ಸಮ್ಮೇಳನ 2025ರ ಅಧ್ಯಕ್ಷತೆ ವಹಿಸಿ, ಮಾತನಾಡಿದ ಎಪಿ ಸಿಂಗ್ ಅವರು, ತರಬೇತಿ ಕಮಾಂಡ್‌ನ ಶ್ರೇಷ್ಠತೆಗೆ ಅದರ ನಿರಂತರ ಬದ್ಧತೆಯನ್ನು ಶ್ಲಾಘಿಸಿದರು.
ವಿಕಸನಗೊಳ್ಳುತ್ತಿರುವ "ಜಾಗತಿಕ ಬೆದರಿಕೆಗಳು" ಮತ್ತು ತಂತ್ರಜ್ಞಾನಗಳ ಮುಖಾಂತರ ರಕ್ಷಣಾ ಪಡೆಗಳು ಹೊಂದಿಕೊಳ್ಳುವ, ಪರಿಣಾಮಕಾರಿ ಮತ್ತು ಯುದ್ಧಕ್ಕೆ ಸನ್ನದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮಿಲಿಟರಿ ತರಬೇತಿಯಲ್ಲಿ ಬದಲಾವಣೆ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ಈ ಕಾರ್ಯಕ್ರಮದ ಭಾಗವಾಗಿ, ಕಾರ್ಯಾಚರಣೆ, ನಿರ್ವಹಣೆ ಮತ್ತು ಆಡಳಿತದಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ವಾಯುಪಡೆ ಮುಖ್ಯಸ್ಥರು ಟ್ರೋಫಿಗಳನ್ನು ಪ್ರದಾನ ಮಾಡಿದರು.
'ತರಬೇತಿ ಕಮಾಂಡ್‌ನ ಹೆಮ್ಮೆ' ಟ್ರೋಫಿಯನ್ನು ವಾಯುಪಡೆ ಅಕಾಡೆಮಿಗೆ ನೀಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ವೇಳೆ "ವಾಯುಪಡೆಯ ಮುಖ್ಯಸ್ಥರು ಎಲ್ಲಾ ತರಬೇತಿ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು, ಗಮನಾರ್ಹ ಸಾಧನೆಗಳನ್ನು ಶ್ಲಾಘಿಸಿದರು ಎಂದು ಪ್ರಕಟಣೆ ತಿಳಿಸಿದೆ.
Advertisement