

ಬೆಂಗಳೂರು: ಬೆಳಗಾವಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಡಾ ಯತೀಂದ್ರ ಸಿದ್ದರಾಮಯ್ಯ ಸಿಎಂ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಬಗ್ಗೆ ನೀಡಿದ್ದ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ನಾನಾ ವಿಶ್ಲೇಷಣೆಯೂ ನಡೆಯುತ್ತಿದೆ.
ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಈ ಹೇಳಿಕೆ ಬಗ್ಗೆ ಎಂಎಲ್ಸಿ ಡಾ.ಯತೀಂದ್ರ ಬಳಿಯೇ ಕೇಳಿದೆ. ಅದು ಸೈದ್ಧಾಂತಿಕವಾಗಿ ಮಾತ್ರ ಅಂತ ಹೇಳಿದ್ದಾರೆ. ಇಂಥವರೇ ಸಿಎಂ ಆಗಬೇಕು ಎಂದು ಡಾ.ಯತೀಂದ್ರ ಹೇಳಿಲ್ಲ. ತಿರುಚಿ ಏನಾದ್ರೂ ಹೇಳಿದ್ದಾರಾ ಎಂದು ಡಾ.ಯತೀಂದ್ರಗೆ ಕೇಳಿದೆ. ಇಲ್ಲ, ನಾನು ಸೈದ್ಧಾಂತಿಕವಾಗಿ ಮಾತಾಡಿದ್ದು ಎಂದಿದ್ದಾರೆ ಎಂದರು.
ಸೈದ್ಧಾಂತಿಕವಾಗಿ ಮಾತನಾಡಿದೆ ಎಂದ
ಯತೀಂದ್ರ ಮಾತನಾಡಿರುವ ವಿಷಯ ಅಷ್ಟು ಸುದ್ದಿಯಾದಾಗ ನಾನೇ ಅವನ ಬಳಿ ನೀನು ಏನು ಮಾತನಾಡಿದ್ದೀಯಾ ಎಂದು ಕೇಳಿದೆ, ಅದಕ್ಕೆ ಅವನು ಸೈದ್ಧಾಂತಿಕವಾಗಿ ಮಾತನಾಡಿದ್ದೀನಿ ಎಂದ. ಇಂಥವರೇ ಮುಂದೆ ಮುಖ್ಯಮಂತ್ರಿಯಾಗಬೇಕೆಂದು ಹೇಳಿಲ್ಲ.
ಅವರು ಆ ಮಾತುಗಳನ್ನು ಏಕೆ ಹೇಳಬೇಕಾಗಿತ್ತು ಎಂದದ್ದಕ್ಕೆ ಈಗ ನೀವು ಕೇಳಿದ್ದೀರಲ್ಲ, ನೀವು ಸುಮ್ನಿರಲ್ಲ, ಏನೋ ಪ್ರಶ್ನೆ ಕೇಳುತ್ತೀರಿ, ಹಾಗೆ ಅಲ್ಲಿ ಕೂಡ ಯಾರೋ ಏನೋ ಪ್ರಶ್ನೆ ಕೇಳಿರಬೇಕು, ಅದಕ್ಕೆ ಯತೀಂದ್ರ ಉತ್ತರ ನೀಡಿರಬೇಕು ಎಂದರು.
ಇಲ್ಲಿ ನಾವು ಸಹಕಾರ ಸಪ್ತಾಹದ ಬಗ್ಗೆ ಮಾತನಾಡಲು ಬಂದಿರುವುದು, ನೀವು ಈ ಪ್ರಶ್ನೆ ಕೇಳಿದ್ದೀರಿ, ಹಾಗೆಯೇ ಅಲ್ಲಿ ಕೂಡ ಯಾರೋ ಏನೋ ಪ್ರಶ್ನೆ ಕೇಳಿರಬೇಕು ಎಂದರು.
Advertisement