

ಹುಬ್ಬಳ್ಳಿ: ಹಂಪಿಯ ಶ್ರೀ ಬಡವಿಲಿಂಗ ದೇವಾಲಯದ ಪವಿತ್ರ ಕೊಳದಲ್ಲಿ ಚಪ್ಪಲಿ ತೇಲುತ್ತಿರುವುದು ಕಂಡುಬಂದ ನಂತರ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು.
ಪ್ರವಾಸಿಗರ ಸೋಗಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಚಪ್ಪಲಿಯನ್ನು ಎಸೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಭಕ್ತರು ದೇವಾಲಯದಲ್ಲಿ ಸರಿಯಾದ ಭದ್ರತಾ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ. ಇದು ದೇವಾಲಯದಲ್ಲಿ ನಡೆದ ಮೂರನೇ ಘಟನೆಯಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಸ್ಥಳೀಯರು ಈ ಘಟನೆಯನ್ನು ASI ಗಮನಕ್ಕೆ ತಂದಿದ್ದಾರೆ. ಈ ದೇವಾಲಯವನ್ನು 15 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತಗಾರರು ನಿರ್ಮಿಸಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಸಂರಕ್ಷಿತ ಸ್ಮಾರಕವಾಗಿದ್ದರೂ, ಪೂಜೆಗಳು ಮತ್ತು ಇತರ ಆಚರಣೆಗಳನ್ನು ಪ್ರತಿದಿನ ಅಲ್ಲಿ ನಡೆಸಲಾಗುತ್ತದೆ.
ಎಲ್ಲಾ ಸಂದರ್ಶಕರು, ವಿಶೇಷವಾಗಿ ಪ್ರವಾಸಿಗರು, ಯಾವುದೇ ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ತಮ್ಮ ಪಾದರಕ್ಷೆಗಳನ್ನು ತೆಗೆದು ಸ್ಥಳದ ಪಾವಿತ್ರ್ಯವನ್ನು ಗೌರವಿಸಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.
Advertisement