

ಬೆಂಗಳೂರು: ಬಂಡೀಪುರ ಹುಲಿ ಮೀಸಲು ಪ್ರದೇಶದ (ಬಿಟಿಆರ್) ಹೊರವಲಯದಲ್ಲಿ ರೈತರ ಮೇಲೆ ನಡೆದ ಎರಡು ಹುಲಿ ದಾಳಿಗಳು, ಮಾನವ-ಪ್ರಾಣಿ ಸಂಘರ್ಷಗಳನ್ನು ತಗ್ಗಿಸುವಲ್ಲಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಮತ್ತೊಮ್ಮೆ ಬಹಿರಂಗವಾಗಿದೆ.
ತಜ್ಞರು ಮತ್ತು ಅರಣ್ಯ ಅಧಿಕಾರಿಗಳು ಇಲಾಖೆಯೊಳಗಿನ ನಿರ್ಲಕ್ಷ್ಯದ ಬಗ್ಗೆ ವಿವರಿಸಿದ್ದಾರೆ. ಅರಣ್ಯದ ಅಂಚಿನಲ್ಲಿರುವ ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಬೇಕು ಮತ್ತು ಅವರು ರಾತ್ರಿಯಲ್ಲಿ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಹಿಂದಿನ ಘಟನೆಗಳ ವಿಶ್ಲೇಷಣೆಗಳ ಪ್ರಕಾರ ಚಿರತೆಗಳು, ಹುಲಿಗಳು ಅಥವಾ ಇತರ ಪ್ರಾಣಿಗಳ ದಾಳಿಗಳು ಮುಂಜಾನೆ ಅಥವಾ ತಡರಾತ್ರಿಯಲ್ಲಿ ಸಂಭವಿಸುತ್ತವೆ ಎಂದು ತೋರಿಸಿದೆ. ವಿದ್ಯುತ್ ಸರಬರಾಜು ಕಂಪನಿಗಳು ರೈತರಿಗೆ ಹಗಲಿನಲ್ಲಿ ವಿದ್ಯುತ್ ಒದಗಿಸುವಂತೆ ನಾವು ವಿನಂತಿಸಿದ್ದೇವೆ, ಏಕೆಂದರೆ ಇದರಿಂದ ಸಂಘರ್ಷ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅರಣ್ಯ, ವನ್ಯಜೀವಿಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಪಿಸಿ ರೈ ತಿಳಿಸಿದ್ದಾರೆ.
ರೈತರು ರಾತ್ರಿಯಲ್ಲಿ ಗುಂಪುಗಳಲ್ಲಿ ತಿರುಗಾಡಬೇಕೆಂದು ಅರಿವು ಮೂಡಿಸಬೇಕು. ಕಾಡು ಪ್ರಾಣಿಗಳನ್ನು ಕಂಡರೆ ಅಥವಾ ಪಗ್‌ಮಾರ್ಕ್‌ಗಳನ್ನು ಕಂಡುಕೊಂಡರೆ ಅವರು ತಕ್ಷಣ ಅರಣ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು. ಸೆರೆಹಿಡಿಯಲಾದ ಹುಲಿಗಳಲ್ಲಿ ರೇಡಿಯೋ-ಕಾಲರ್ ಅಥವಾ ಮೈಕ್ರೋಚಿಪ್‌ಗಳನ್ನು ಸೇರಿಸುವ ಬಗ್ಗೆ ಇಲಾಖೆ ಯೋಚಿಸುತ್ತಿದೆ. ನೀರಾವರಿ, ಲೋಕೋಪಯೋಗಿ ಮತ್ತು ಇಂಧನ ಇಲಾಖೆಗಳು ಕಳೆಗಳನ್ನು ತೆರವುಗೊಳಿಸುವ ಮೂಲಕ ಅರಣ್ಯ ಗಡಿಯ ಹೊರಗೆ ಸರಿಯಾದ ಬೆಳಕು ಹರಿಯುವಂತೆ ನೋಡಿಕೊಳ್ಳಬೇಕು. ಈ ಮೂಲಕ ಮಾನವ ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಕುಸುಮ್-ಸಿ ಯೋಜನೆಯಡಿಯಲ್ಲಿ ವಿದ್ಯುತ್ ಪೂರೈಕೆಯನ್ನು ವಿಕೇಂದ್ರೀಕರಿಸಲು ಮತ್ತು ರೈತರು ಸೌರ ಫಲಕಗಳನ್ನು ಅಳವಡಿಸುವಂತೆ ಪ್ರೋತ್ಸಾಹಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದರು. ವಿದ್ಯುತ್ ಪೂರೈಕೆಯ ಸಮಯವನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ನಿಯಮಗಳನ್ನು ಮಾರ್ಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇತ್ತೀಚಿನ ಹುಲಿ ಜನಗಣತಿಯ ಪ್ರಕಾರ ಬಿಟಿಆರ್ 154 ಹುಲಿಗಳಿಗೆ ಆಶ್ರಯ ನೀಡಿದೆ ಎಂದು ತಜ್ಞರು ತಿಳಿಸಿದ್ದಾರೆ. 2023 ಮತ್ತು 2024 ಕ್ಕೆ ಹೋಲಿಸಿದರೆ ಹುಲಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತಿಳಿಸಿದೆ.
ಅರಣ್ಯ ಗಡಿಗಳಲ್ಲಿ ಗಸ್ತು ತಿರುಗುವಿಕೆಯನ್ನು ಹೆಚ್ಚಿಸುವ ತುರ್ತು ಅವಶ್ಯಕತೆಯಿದೆ ಎಂದು ಮಾಜಿ ಪಿಸಿಸಿಎಫ್ ಬಿ.ಕೆ. ಸಿಂಗ್ ಹೇಳಿದರು. ಮಾಜಿ ಪಿಸಿಸಿಎಫ್ ಬಿಜೆ ಹೊಸ್ಮಠ್ ಮಾತನಾಡಿ, ವಯಸ್ಸಾದ ಮತ್ತು ದುರ್ಬಲ ಹುಲಿಗಳು ಗಡಿ ಪ್ರದೇಶಗಳನ್ನು ತಮ್ಮ ಆವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತಿವೆ, ಹೀಗಾಗಿ ಸಣ್ಣ ವಯಸ್ಸಿನ ಹುಲಿಗಳು ಸಹ ಹೊಸ ಪ್ರದೇಶಗಳನ್ನು ಅನ್ವೇಷಿಸುತ್ತಿರುವುದರಿಂದ ಎಲ್ಲೆಡೆ ಹುಲಿಗಳು ಹರಡುತ್ತಿವೆ. ಬಿಟಿಆರ್ ಸುತ್ತಮುತ್ತಲಿನ ಪ್ರದೇಶಗಳು ಉತ್ತಮ ಬೇಟೆಯ ಸಾಂದ್ರತೆಯನ್ನು ಹೊಂದಿದ್ದರೂ, ಇಂತಹ ಘಟನೆಗಳು ಸಂಭವಿಸುತ್ತಿವೆ, ಇದು ಕಳವಳಕಾರಿ ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.
Advertisement