ಮೈಸೂರು: ಸಂಸ್ಕರಿಸದ ತ್ಯಾಜ್ಯ ನೀರಿನಿಂದ ಕಾವೇರಿ, ಕಪಿಲ ನದಿ ಕಲುಷಿತ- KSPCB chief

ನದಿಗಳ ಮಾಲಿನ್ಯ ತಡೆಗಟ್ಟಲು ತುರ್ತು ಕ್ರಮಗಳ ಕುರಿತು ಶಿಫಾರಸು ಮಾಡುವ ತಾಂತ್ರಿಕ ವರದಿಯನ್ನು ಮೈಸೂರು ಜಿಲ್ಲಾಡಳಿತ ಮತ್ತು ಮೈಸೂರು ಮಹಾನಗರ ಪಾಲಿಕೆಗೆ (ಎಂಸಿಸಿ) ಮಂಡಳಿ ಸಲ್ಲಿಸಿದೆ ಎಂದರು.
PM Narendraswamy
ಶಾಸಕ ಪಿ.ಎಂ. ನರೇಂದ್ರ ಸ್ವಾಮಿ
Updated on

ಮೈಸೂರು: ಕೈಗಾರಿಕಾ ತ್ಯಾಜ್ಯ ಮತ್ತು ಚರಂಡಿ ನೀರು ಸೇರಿದಂತೆ ಸಂಸ್ಕರಿಸದ ತ್ಯಾಜ್ಯ ನೀರನ್ನು ಬಿಡುತ್ತಿರುವುದರಿಂದ ಮೈಸೂರು ಮತ್ತು ಬೆಂಗಳೂರಿನ ಜೀವನಾಡಿ ಕಾವೇರಿ ಮತ್ತು ಕಪಿಲಾ ನದಿಗಳು ಹೆಚ್ಚು ಕಲುಷಿತಗೊಳ್ಳುತ್ತಿವೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಸೋಮವಾರ ಕಳವಳ ವ್ಯಕ್ತಪಡಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕೆಎಸ್‌ಪಿಸಿಬಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನದಿಗಳ ಮಾಲಿನ್ಯ ತಡೆಗಟ್ಟಲು ತುರ್ತು ಕ್ರಮಗಳ ಕುರಿತು ಶಿಫಾರಸು ಮಾಡುವ ತಾಂತ್ರಿಕ ವರದಿಯನ್ನು ಮೈಸೂರು ಜಿಲ್ಲಾಡಳಿತ ಮತ್ತು ಮೈಸೂರು ಮಹಾನಗರ ಪಾಲಿಕೆಗೆ (ಎಂಸಿಸಿ) ಮಂಡಳಿ ಸಲ್ಲಿಸಿದೆ ಎಂದರು.

ಕಾವೇರಿ ಮತ್ತು ಕಪಿಲಾ ಎರಡೂ ಮೈಸೂರು ಮತ್ತು ಬೆಂಗಳೂರಿಗೆ ಅತ್ಯಗತ್ಯ, ಆದರೆ ದುಃಖಕರ ಸಂಗತಿವೇನೆಂದರೆ, ಎರಡೂ ಕಲುಷಿತವಾಗಿವೆ. KSPCB ನದಿ ನೀರಿನ ಗುಣಮಟ್ಟವನ್ನು ಪತ್ತೆಹಚ್ಚಲು ಹಲವಾರು ಜಲ-ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಜಿಲ್ಲಾಡಳಿತ ಮತ್ತು MCC ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಮತ್ತಷ್ಟು ಮಾಲಿನ್ಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಕೆಎಸ್‌ಪಿಸಿಬಿ ವರದಿಯ ಪ್ರಕಾರ, ಮಂಡಳಿ ಸ್ಥಾಪಿಸಿರುವ ಕೊಳಚೆ ನೀರು ಸಂಸ್ಕರಣಾ ಘಟಕಗಳಲ್ಲಿ (STP) ಸಂಸ್ಕರಿಸದ ಒಳಚರಂಡಿ, ಕೈಗಾರಿಕಾ ತ್ಯಾಜ್ಯ ಮತ್ತು ಚರಂಡಿ ನೀರನ್ನು ಸರಿಯಾಗಿ ಸಂಸ್ಕರಣೆ ಮಾಡದೆ ನೇರವಾಗಿ ನದಿಗಳಿಗೆ ಬಿಡಲಾಗುತ್ತಿದೆ. ನದಿಗಳನ್ನು ರಕ್ಷಿಸುವುದು ಸ್ಥಳೀಯ ಅಧಿಕಾರಿಗಳ ಕರ್ತವ್ಯ ಮಾತ್ರವಲ್ಲ, ನಾಗರಿಕರ ಜವಾಬ್ದಾರಿಯೂ ಆಗಿದೆ. ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ಜನರು ಮೂಲದಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವ ಮೂಲಕ ಪ್ರಾರಂಭಿಸಬೇಕು" ಎಂದು ಅವರು ಹೇಳಿದರು.

ಮೈಸೂರಿನಲ್ಲಿ ಪ್ರತಿದಿನ ಸುಮಾರು ಎರಡು ಲಕ್ಷ ಹಾಲಿನ ಪ್ಯಾಕೆಟ್ ಕವರ್‌ಗಳನ್ನು ಎಸೆಯುತ್ತಿದ್ದಾರೆ. ಪ್ರತಿ ಮನೆಯವರು ಪ್ರತಿನಿತ್ಯ ಹಾಲು ಖರೀದಿಸುತ್ತಿದ್ದು, ಪ್ಯಾಕೆಟ್ ತೆರೆದಾಗ ಆ ಸಣ್ಣ ಪ್ಲಾಸ್ಟಿಕ್ ತುಂಡು ಮಣ್ಣಿನಲ್ಲಿ ಸೇರಿ ಪರಿಸರಕ್ಕೆ ಅಪಾಯ ತಂದೊಡ್ಡುತ್ತಿದ್ದು, ಮೈಸೂರು ನಗರವನ್ನು ದೇಶದಲ್ಲೇ ಸ್ವಚ್ಛ ನಗರವನ್ನಾಗಿ ಮಾಡಲು ನಾಗರಿಕರು, ಸಂಘ-ಸಂಸ್ಥೆಗಳು ಆಡಳಿತದೊಂದಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.

ಕೊಡಗಿನ ಕಾಫಿ ಎಸ್ಟೇಟ್‌ಗಳು ನದಿಗಳಿಗೆ ತ್ಯಾಜ್ಯ ನೀರನ್ನು ಬಿಡುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ 682 ಕಾಫಿ ತೋಟಗಳಿವೆ. ಅನೇಕರು ಸಂಸ್ಕರಿಸದ ತ್ಯಾಜ್ಯವನ್ನು ನದಿಗಳಿಗೆ ಬಿಡುಗಡೆ ಮಾಡುತ್ತಿದ್ದಾರೆ, ಇದು ತೀವ್ರ ಜಲ ಮಾಲಿನ್ಯವನ್ನು ಉಂಟುಮಾಡುತ್ತದೆ. "ನಮ್ಮ ಪರಿಸರವನ್ನು ಮರೆಯುವುದು ನಮ್ಮ ಭವಿಷ್ಯವನ್ನು ಮರೆತಂತೆ, ಶುದ್ಧ ಗಾಳಿ ಮತ್ತು ನೀರು ಮಾನವ ಜೀವನಕ್ಕೆ ಅವಶ್ಯಕವಾಗಿದೆ. ಆದರೂ ನಾವು ಮಾಲಿನ್ಯದ ಬಗ್ಗೆ ಅಸಡ್ಡೆ ಹೊಂದಿದ್ದೇವೆ. ಭವಿಷ್ಯದ ಪೀಳಿಗೆಗೆ ನಾವು ನೀಡಬಹುದಾದ ಅತ್ಯುತ್ತಮ ಕೊಡುಗೆ ನಮ್ಮ ಪರಿಸರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಎಂದು ಅವರು ಹೇಳಿದರು.

PM Narendraswamy
ಪರಿಸರ ಸಂರಕ್ಷಣೆ: ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಮುಖ್ಯಮಂತ್ರಿ ಮೆಚ್ಚುಗೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com