2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಚಿತ್ರ ನಟ ಪ್ರಕಾಶ್ ರಾಜ್ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 70 ಮಂದಿಯನ್ನು ಆಯ್ಕೆ ಮಾಡಲಾಗಿದೆ.
image for representation purpose
ಸಂಗ್ರಹ ಚಿತ್ರonline desk
Updated on

2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಚಿತ್ರ ನಟ ಪ್ರಕಾಶ್ ರಾಜ್ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 70 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಯಾವುದೇ ಅರ್ಜಿ ಆಹ್ವಾನಿಸದೆ ಈ ಆಯ್ಕೆ ನಡೆದಿದೆ. ಜಿಲ್ಲಾವಾರು, ಸಾಮಾಜಿಕ ಪರಿಪಾಲನೆ, ಹಾಗೂ ಆಯ್ಕೆ ಸಮಿತಿ ಶಿಫಾರಸ್ಸುಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ಬಾರಿ 12 ಮಹಿಳೆಯರು ಹಾಗೂ ಸಮಗಾರ ಹರಳಯ್ಯ ಸಮುದಾಯದ ಇಬ್ಬರು ಪ್ರತಿಭೆಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ‌‌ ಆಯ್ಕೆ ಮಾಡಲಾಗಿದ್ದು,‌ ನಾಲ್ಕೈದು‌ ಬಾರಿ‌ ಸಭೆ ನಡೆಸಿದ ಸದಸ್ಯರು ಅರ್ಹರನ್ನು ‌ಆಯ್ಕೆ ಮಾಡಲು ಸಹಕರಿಸಿದ್ದಕ್ಕೆ‌ ಧನ್ಯವಾದಗಳನ್ನು ಈ‌ ಮೂಲಕ‌ ತಿಳಿಸುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 12 ಮಂದಿ‌ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ‌‌ ಮಾಡಲಾಗಿದೆ. ಈ ಪೈಕಿ‌ ಕೆಲವರು ಸ್ವಯಂ ಮನವಿ ನೀಡಿದ್ದರು. ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ‌‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಚಲನಚಿತ್ರ /ಕಿರುತೆರೆ

  • ಪ್ರಕಾಶ್ ರಾಜ್ ದಕ್ಷಿಣ ಕನ್ನಡ

  • ಮತಿ ವಿಜಯಲಕ್ಷ್ಮೀ ಸಿಂಗ್ ಕೊಡಗು

ಆಡಳಿತ/ ವೈದ್ಯಕೀಯ

  • ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ)

  • ಡಾ. ಆಲಮ್ಮ ಮಾರಣ್ಣ ತುಮಕೂರು

  • ಡಾ. ಜಯರಂಗನಾಥ್ ಬೆಂಗಳೂರು ಗ್ರಾಮಾಂತರ

ಸಾಹಿತ್ಯ ಕ್ಷೇತ್ರ

  • ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ

  • ತುಂಬಾಡಿ ರಾಮಯ್ಯ ತುಮಕೂರು

  • ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ

  • ಡಾ.ಎಚ್.ಎಲ್ ಪುಷ್ಪ ತುಮಕೂರು

  • ರಹಮತ್ ತರೀಕೆರೆ ಚಿಕ್ಕಮಗಳೂರು

  • ಹ.ಮ. ಪೂಜಾರ ವಿಜಯಪುರ

ಜಾನಪದ

  • ಬಸಪ್ಪ ಭರಮಪ್ಪ ಚೌಡ್ಕಿ ಕೊಪ್ಪಳ

  • ಬಿ. ಟಾಕಪ್ಪ ಕಣ್ಣೂರು ಶಿವಮೊಗ್ಗ

  • ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ ಬೆಳಗಾವಿ

  • ಹನುಮಂತಪ್ಪ, ಮಾರಪ್ಪ, ಚೀಳಂಗಿ ಚಿತ್ರದುರ್ಗ

  • ಎಂ. ತೋಪಣ್ಣ ಕೋಲಾರ

  • ಸೋಮಣ್ಣ ದುಂಡಪ್ಪ ಧನಗೊಂಡ ವಿಜಯಪುರ

  • ಮತಿ ಸಿಂಧು ಗುಜರನ್‌ ದಕ್ಷಿಣ ಕನ್ನಡ

  • ಎಲ್. ಮಹದೇವಪ್ಪ ಉಡಿಗಾಲ ಮೈಸೂರು

ಸಮಾಜ ಸೇವೆ

  • ಮತಿ ಸೂಲಗಿತ್ತಿ ಈರಮ್ಮ ವಿಜಯನಗರ

  • ಮತಿ ಫಕ್ಕೀರಿ ಬೆಂಗಳೂರು ಗ್ರಾಮಾಂತರ

  • ಮತಿ ಕೋರಿನ್ ಆಂಟೊನಿಯಟ್ ರಸ್ಕೀನಾ ದಕ್ಷಿಣ ಕನ್ನಡ

  • ಡಾ. ಎನ್. ಸೀತಾರಾಮ ಶೆಟ್ಟಿ ಉಡುಪಿ

  • ಕೋಣಂದೂರು ಲಿಂಗಪ್ಪ ಶಿವಮೊಗ್ಗ

  • ಉಮೇಶ ಪಂಬದ ದಕ್ಷಿಣ ಕನ್ನಡ

  • ಡಾ. ರವೀಂದ್ರ ಕೋರಿಶೆಟ್ಟಿರ್ ಧಾರವಾಡ

  • ಕೆ.ದಿನೇಶ್ ಬೆಂಗಳೂರು

  • ಶಾಂತರಾಜು ತುಮಕೂರು

  • ಜಾಫರ್ ಮೊಹಿಯುದ್ದೀನ್ ರಾಯಚೂರು

  • ಪೆನ್ನ ಓಬಳಯ್ಯ ಬೆಂಗಳೂರು ಗ್ರಾಮಾಂತರ

  • ಶಾಂತಿ ಬಾಯಿ ಬಳ್ಳಾರಿ

  • ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ

ಹೊರನಾಡು/ ಹೊರದೇಶ

  • ಜಕರಿಯ ಬಜಪೆ (ಸೌದಿ)

  • ಪಿ ವಿ ಶೆಟ್ಟಿ (ಮುಂಬೈ)

ಸಂಗೀತ/ ನೃತ್ಯ ಕ್ಷೇತ್ರ

  • ದೇವೆಂದ್ರಕುಮಾರ ಪತ್ತಾರ್ ಕೊಪ್ಪಳ

  • ಮಡಿವಾಳಯ್ಯ ಸಾಲಿ ಬೀದರ್

  • ಪ್ರೊ. ಕೆ. ರಾಮಮೂರ್ತಿ ರಾವ್ ಮೈಸೂರು

ಪರಿಸರ

  • ರಾಮೇಗೌಡ ಚಾಮರಾಜನಗರ

  • ಮಲ್ಲಿಕಾರ್ಜುನ ನಿಂಗಪ್ಪ ಯಾದಗಿರಿ

ಕೃಷಿ

  • ಡಾ.ಎಸ್.ವಿ.ಹಿತ್ತಲಮನಿ ಹಾವೇರಿ

  • ಎಂ ಸಿ ರಂಗಸ್ವಾಮಿ ಹಾಸನ

  • ಮಾಧ್ಯಮ ಕ್ಷೇತ್ರ

  • ಕೆ.ಸುಬ್ರಮಣ್ಯ ಬೆಂಗಳೂರು

  • ಅಂಶಿ ಪ್ರಸನ್ನಕುಮಾರ್ ಮೈಸೂರು

  • ಬಿ.ಎಂ ಹನೀಫ್ ದಕ್ಷಿಣ ಕನ್ನಡ

  • ಎಂ ಸಿದ್ಧರಾಜು ಮಂಡ್ಯ

ವಿಜ್ಞಾನ ತಂತ್ರಜ್ಞಾನ

  • ರಾಮಯ್ಯ ಚಿಕ್ಕಬಳ್ಳಾಪುರ

  • ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ದಾವಣಗೆರೆ

  • ಡಾ. ಆರ್. ವಿ ನಾಡಗೌಡ ಗದಗ

ಸಹಕಾರ

  • ಶೇಖರಗೌಡ ವಿ ಮಾಲಿಪಾಟೀಲ್ ಕೊಪ್ಪಳ

ಯಕ್ಷಗಾನ/ ಬಯಲಾಟ/ ರಂಗಭೂಮಿ

  • ಕೋಟ ಸುರೇಶ ಬಂಗೇರ ಉಡುಪಿ

  • ಐರಬೈಲ್‌ಆನಂದ ಶೆಟ್ಟಿ ಉಡುಪಿ

  • ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ) ಉತ್ತರ ಕನ್ನಡ

  • ಗುಂಡೂರಾಜ್ ಹಾಸನ

  • ಹೆಚ್.ಎಂ. ಪರಮಶಿವಯ್ಯ ಬೆಂಗಳೂರು ದಕ್ಷಿಣ (ರಾಮನಗರ)

  • ಎಲ್.ಬಿ.ಶೇಖ್ (ಮಾಸ್ತರ್) ವಿಜಯಪುರ

  • ಬಂಗಾರಪ್ಪ ಖುದಾನ್‌ಪುರ ಬೆಂಗಳೂರು

  • ಮೈಮ್ ರಮೇಶ್ ದಕ್ಷಿಣ ಕನ್ನಡ

  • ಶ್ರೀಮತಿ ಡಿ.ರತ್ನಮ್ಮ ದೇಸಾಯಿ ರಾಯಚೂರು

ಶಿಕ್ಷಣ ಕ್ಷೇತ್ರ

  • ಡಾ. ಎಂ.ಆರ್. ಜಯರಾಮ್ ಬೆಂಗಳೂರು

  • ಡಾ. ಎನ್ ಎಸ್ ರಾಮೇಗೌಡ ಮೈಸೂರು

  • ಎಸ್. ಬಿ. ಹೊಸಮನಿ ಕಲಬುರಗಿ

  • ನಾಗರಾಜು ಬೆಳಗಾವಿ

ಕ್ರೀಡೆ

  • ಆಶೀಶ್ ಕುಮಾರ್ ಬಲ್ಲಾಳ್ ಬೆಂಗಳೂರು

  • ಎಂ ಯೋಗೇಂದ್ರ ಮೈಸೂರು

  • ಡಾ. ಬಬಿನಾ ಎನ್.ಎಂ (ಯೋಗ) ಕೊಡಗು

ನ್ಯಾಯಾಂಗ

  • ನ್ಯಾ. ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ ) ಬಾಗಲಕೋಟೆ

  • ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ

  • ಬಸಣ್ಣ ಮೋನಪ್ಪ ಬಡಿಗೇರ ಯಾದಗಿರಿ

  • ನಾಗಲಿಂಗಪ್ಪ ಜಿ ಗಂಗೂರ ಬಾಗಲಕೋಟೆ

  • ಬಿ. ಮಾರುತಿ ವಿಜಯನಗರ

  • ಎಲ್. ಹೇಮಾಶೇಖರ್ ಮೈಸೂರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com