
ಮಂಗಳೂರು: ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ನೂರಾರು ಅತ್ಯಾಚಾರ, ಕೊಲೆ ಮತ್ತು ರಹಸ್ಯ ಸಮಾಧಿ ಆರೋಪಗಳ ಹಿಂದೆ 'ಬಹಳ ದೊಡ್ಡ ಪಿತೂರಿ' ನಡೆದಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದು ಪ್ರಕರಣವನ್ನು NIA ಅಥವಾ CBIಗೆ ವಹಿಸಬೇಕೆಂದು ಒತ್ತಾಯಿಸಿದ್ದು ರಾಜ್ಯ ಸರ್ಕಾರವು ಯಾವುದೇ ವಿಳಂಬವಿಲ್ಲದೆ, ಆದಷ್ಟು ಬೇಗ ತನಿಖೆಗೆ ಆದೇಶಿಸುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದರು.
ಧರ್ಮಸ್ಥಳ ವಿರುದ್ಧದ ಪಿತೂರಿ ಮತ್ತು ಅಪಪ್ರಚಾರ ಅಭಿಯಾನವನ್ನು ಖಂಡಿಸಿ ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ಶಾಸಕರು ಮತ್ತು ಹಲವು ನಾಯಕರು 'ಧರ್ಮಸ್ಥಳ ಚಲೋ' ರ್ಯಾಲಿ ನಡೆಯಲಿದ್ದಾರೆ. ರ್ಯಾಲಿಗೆ ಮುಂಚಿತವಾಗಿ, ನಾಯಕರು ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸಹ ಭೇಟಿ ಮಾಡಿದರು. ಜಾತಿ, ಧರ್ಮ ಲೆಕ್ಕಿಸದೆ ಎಲ್ಲರೂ ಸಿಬಿಐ ಅಥವಾ ಎನ್ಐಎಯಿಂದ ಸಮಗ್ರ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಧರ್ಮಸ್ಥಳ ಪ್ರಸಂಗದಲ್ಲಿ ಇದು ಅತ್ಯಗತ್ಯ. ಇದು ಧರ್ಮಸ್ಥಳದ ಮಂಜುನಾಥನ ಎಲ್ಲಾ ಭಕ್ತರ ಬೇಡಿಕೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.
ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಯ ಸಮಯದಲ್ಲಿ ಬಹಳಷ್ಟು ಸುಳ್ಳು ಪ್ರಚಾರವನ್ನು ನಡೆಸಲಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಪ್ರಚಾರವನ್ನು ನಡೆಸಿರುವ ರೀತಿ ಕೋಟ್ಯಂತರ ಭಕ್ತರು ಅಸಮಾಧಾನಗೊಂಡಿದ್ದು ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದರು. ಇನ್ನು ಧರ್ಮಸ್ಥಳ ವಿರುದ್ಧ ದೊಡ್ಡ ಪಿತೂರಿ ನಡೆದಿದೆ ಎಂದು ಹೇಳಿದ ಬಿಜೆಪಿ ಮುಖ್ಯಸ್ಥರು, ತನಿಖೆಗಾಗಿ ರಾಜ್ಯ ಸರ್ಕಾರದ ಮೇಲೆ ಎಡಪಂಥೀಯ ಗುಂಪುಗಳಿಂದ ಸಾಕಷ್ಟು ಒತ್ತಡವಿತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೊಂಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರೇ ಧರ್ಮಸ್ಥಳದ ವಿಚಾರದಲ್ಲಿ ದೊಡ್ಡ ಪಿತೂರಿ ನಡೆದಿದೆ ಎಂದು ಹೇಳಿದ್ದಾರೆ ಎಂದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರ ಧರ್ಮಸ್ಥಳದಲ್ಲಿ ಇದೇ ರೀತಿಯ ಬೇಡಿಕೆಯೊಂದಿಗೆ 'ಧರ್ಮಸ್ಥಳ ಸತ್ಯಯಾತ್ರೆ' ನಡೆಯಿತು.
Advertisement