
ಬೆಂಗಳೂರು: ದಿ ಫೋರಮ್ ಆಫ್ ವಿಮೆನ್ ಇನ್ ಪಬ್ಲಿಕ್ ಸೆಕ್ಟರ್(ಸಾರ್ವಜನಿಕ ವಲಯದ ಮಹಿಳೆಯರ ಸಂಘಟನೆ) ಮತ್ತು ಎಚ್ಎಎಲ್(ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)ನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಬಿ) ಫ್ಯಾಮಿಲೀಸ್ ವೆಲ್‌ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ಭಾರತದ ಮೊದಲ ರಾಷ್ಟ್ರೀಯ ಮಹಿಳಾ ಸಮಾವೇಶವಾದ 'ತೇಜಸ್ವಿ' ಅನ್ನು ಆಯೋಜಿಸಿದ್ದವು.
'ತೇಜಸ್ವಿ' ಸಮಾವೇಶವನ್ನು 'ವಿಮೆನ್ ಹೂ ಕ್ರಿಯೇಟ್ ರೇಡಿಯನ್ಸ್ ಎಟ್ ಹೋಮ್ ಆ್ಯಂಡ್ ಇನ್ ದಿ ವರ್ಕ್ ಪ್ಲೇಸ್'(ಮನೆ ಮತ್ತು ಉದ್ಯೋಗ ಸ್ಥಳಗಳೆರಡರಲ್ಲೂ ತಮ್ಮ ಛಾಪು ಮೂಡಿಸುವ ಮಹಿಳೆಯರು) ಎಂಬ ಥೀಮ್ ಅಡಿಯಲ್ಲಿ, ಎಚ್ಎಎಲ್ ಮ್ಯಾನೇಜ್ಮೆಂಟ್ ಅಕಾಡೆಮಿಯಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಈ ಸಮಾರಂಭ ಮಹಿಳೆಯರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ನಿರ್ವಹಿಸುವ ಜವಾಬ್ದಾರಿಗಳನ್ನು ಗೌರವಿಸಿತು.
ಐಎಎಸ್ ಅಧಿಕಾರಿ, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ವಿಭಾಗದ ಜಂಟಿ ಕಾರ್ಯದರ್ಶಿ ಮನಿಷಾ ಚಂದ್ರ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮನಿಷಾ ಅವರು ರಾಷ್ಟ್ರದ ಪ್ರಗತಿಯಲ್ಲಿ ಎಚ್ಎಎಲ್ ನಿರ್ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದರು. ಮಹಿಳೆಯರು ಮನೆಗಳಲ್ಲಿ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ನಿರ್ವಹಿಸುತ್ತಿರುವ ಪಾತ್ರವನ್ನು ಬಣ್ಣಿಸಿದರು. ಮಹಿಳೆಯರು ರೇಡಿಯಂಟ್, ಅಥೆಂಟಿಕ್, ಡೆಡಿಕೇಟೆಡ್, ಇಂಟಲಿಜೆಂಟ್, ಅಟಾಪ್ಟೇಬಲ್, ನರ್ಚರಿಂಗ್, ಕ್ರಿಯೇಟಿವ್ ಮತ್ತು ಎಂಪತೆಟಿಕ್(RADIANCE) ಎಂದು ವಿವರಿಸಿದರು.
ಸಮಾರಂಭದಲ್ಲಿ, ಎಚ್ಎಎಲ್ (ಬಿ) ಫ್ಯಾಮಿಲೀಸ್ ವೆಲ್‌ಫೇರ್ ಅಸೋಸಿಯೇಷನ್ ನ 50ನೇ ವರ್ಷವನ್ನು ಆಚರಿಸಲು ವಿಶೇಷ ಗೋಲ್ಡನ್ ಜ್ಯುಬಿಲೀ ಅಂಚೆ ಕವರ್ ಅನ್ನು ಸಹ ಬಿಡುಗಡೆಗೊಳಿಸಲಾಯಿತು. ಈ ಸಂಸ್ಥೆಯ ವತಿಯಿಂದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದ್ದು, ಸಮಿತಿಯ ಮುಖ್ಯಸ್ಥರಾದ ಡಾ. ಶುಭಾ ಸುನಿಲ್ ಅವರ ನೇತೃತ್ವದಲ್ಲಿ ಇನ್ನಷ್ಟು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.
Advertisement