
ರಾಯಚೂರು: ಮೂರು ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಆಡಿಯೋ ವೈರಲ್ ಆಗುತ್ತಿದ್ದಂತೆ ರಾಯಚೂರಿನ ಇಡಪನೂರು ಠಾಣೆ ಮಹಿಳಾ ಪಿಎಸ್ ಐ ಸೌಮ್ಯಾ ಹಿರೇಮಠರನ್ನು ಎತ್ತಂಗಡಿ ಮಾಡಲಾಗಿದೆ. ಲಂಚದ ಬಗ್ಗೆ ಪಿಎಸ್ ಐ ಸೌಮ್ಯಾ ಹಾಗೂ ಕಾನ್ಸ್ ಟೇಬಲ್ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಹೀಗಾಗಿ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್ ಇಡಪನೂರು ಠಾಣೆ ಪಿಎಸ್ ಐ ಸೌಮ್ಯಾ ಹಿರೇಮಠ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಇಡಪನೂರು ಗ್ರಾಮದ ಸರ್ವೆ ನಂಬರ್ 917 ಜಮೀನು ವಿವಾದ ವಿಚಾರವಾಗಿ ಭೀಮನಗೌಡ ಹಾಗೂ ಅನುಸೂಯ ಎಂಬುವವರ ನಡುವೆ ಭೂ ವಿವಾದವಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರು ದೂರು ದಾಖಲಿಸಿದ್ದರು. ಇನ್ನು ಅನಸೂಯಾ ವಿರುದ್ಧದ ಕೆಲ ಸೆಕ್ಷನ್ ಗಳನ್ನು ಕೈಬಿಡಲು ಸೌಮ್ಯಾ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಆಡಿಯೋ ವೈರಲ್ ಆಗಿತ್ತು.
Advertisement