

ಬೀದರ್: ಕಳ್ಳತನ ಮಾಡುವವರಿಗೆ ಕಳ್ಳತನದ ಕುರಿತು ಗೊತ್ತಿರುತ್ತದೆ. ರಾಹುಲ್ ಗಾಂಧಿ ಅವರನ್ನೇ ತನಿಖೆ ಮಾಡಿದರೆ ಎಲ್ಲವೂ ಗೊತ್ತಾಗುತ್ತದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಬೀದರ್ ನಲ್ಲಿ ಮಾತನಾಡಿದ ಅವರು, ದೇಶದ ಮೇಲೆ ಅಪನಂಬಿಕೆ ಬರುವ ರೀತಿಯಲ್ಲಿ ಮಾಡುವುದು ರಾಹುಲ್ ಗಾಂಧಿ ವಿಚಾರ. ದೇಶದಲ್ಲಿ ಕಲಹಸೃಷ್ಟಿ ಮಾಡಿ ಅಶಾಂತಿ ಹುಟ್ಟಿಸುವುದು ಕಾಂಗ್ರೆಸ್‌ನ ಉದ್ದೇಶ.
ಇದರ ಹಿಂದೆ ಜಾರ್ಜ್ ಸೊರೊಸ್ ಇದ್ದಾರೆ, ಅವರ ಉದ್ದೇಶ ಅಶಾಂತಿ ಹುಟ್ಟಿಸುವುದು. ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶಗಳು, ಜಾರ್ಜ್ ಸೊರೊಸ್ ಶಾಂತಿ ಕದಡುವ ಉದ್ದೇಶಕ್ಕೆ ಹಣ ನೀಡುತ್ತಾರೆ. ಜಾರ್ಜ್ ಸೊರೊಸ್ ಹಾಗು ರಾಹುಲ್ ಗಾಂಧಿ ಕುರಿತಾಗಿ ತನಿಖೆ ಆಗಬೇಕು ಎಂದರು.
ಆಳಂದ ಕ್ಷೇತ್ರದ ಬಗ್ಗೆ ರಾಹುಲ್ ಆರೋಪ ಮಾಡಿದ್ದಾರೆ. ಆಳಂದದಲ್ಲಿ ಗೆದ್ದಿರುವುದು ಕಾಂಗ್ರೆಸ್ ಅಭ್ಯರ್ಥಿ ಅಲ್ಲವೆ. ಸಿದ್ದರಾಮಯ್ಯರ ವರುಣ ಕ್ಷೇತ್ರದಲ್ಲೂ ಮನೆ ಸಂಖ್ಯೆ ಜೀರೊ ಇದೆ. 20-25 ಮತದಾರರ ಪಟ್ಟಿ ನೊಡಿದರೆ ಈಗಲೂ ಜೀರೋ ಜೀರೋ ಮನೆ ನಂ. ಇದೆ.
ಮಹದೇವಪುರದಲ್ಲೂ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಬಾಡಿಗೆ ಮನೆಯಲ್ಲಿ ಇದ್ದವರು, ಮನೆ ನಂಬರ್ ಎ,ಬಿ,ಸಿ,ಡಿ ಮಾಡಿರ್ತಾರೆ. ಮನೆ ನಂಬರ್ ಸರಿಯಾಗಿ ಫೀಡ್ ಆಗಿರಲ್ಲಾ, ಡಾಟಾ ಆಪರೇಟರ್ ಸರಿಯಾಗಿ ಫೀಡ್ ಮಾಡಿರಲ್ಲ. ಮನೆ ನಂಬರ್ ಎಬಿಸಿಡಿ ಹಾಕಿದರೆ ಆಗುವುದಿಲ್ಲ, ಆಗ ಜೀರೊ ಜೀರೊ ಹಾಕ್ತಾರೆ. ರಾಹುಲ್ ಗಾಂಧಿ ಅವರಿಗೆ ಇದೂ ಅರ್ಥ ಅಗಲ್ಲವೆಂದರೆ ಏನೂ ಹೇಳುವುದು. ಲೋಕಸಭಾ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿಗೆ ಸಾಮಾನ್ಯ ಜ್ಞಾನ ಇಲ್ಲವೆ ಎಂದು ಕಿಡಿಕಾರಿದರು.
ಮಾಲೂರು ಕಾಂಗ್ರೆಸ್ ಶಾಸಕರನ್ನು ಕೋರ್ಟ್ ಅಸಿಂಧುಗೊಳಿಸಿದ್ದು ಯಾಕೆ. ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕು. ಮೋಸ ಮಾಡಿದವರು ಯಾರು, ಮೋಸ ಮಾಡಿ 135 ಸ್ಥಾನ ಗೆದ್ದವರು ಕಾಂಗ್ರೆಸ್. ಮಾಲೂರಿನಲ್ಲಿ ಮೋಸ ಮಾಡಿ ಗೆದ್ದವರು ಕಾಂಗ್ರೆಸ್ ನವರು. ರಾಜ್ಯದ ಕಾಂಗ್ರೆಸ್ ಸದ್ಯ ಬರ್ಬಾದ್ ಆಗಿದೆ ಎಂದರು.
ತೆಲಂಗಾಣ ಸರ್ಕಾರ ಇತ್ತಿಚಿಗೆ ಬಂದಿದೆ. ಆದರೆ ರಾಜ್ಯ ಸರ್ಕಾರ ಬಂದು 2.5 ವರ್ಷ ಮೇಲೆ ಆಗಿದೆ. ಯಾವುದಕ್ಕೂ ದುಡ್ಡಿಲ್ಲಾ, ಎಲ್ಲಾ ಕಂಪನಿಗಳು ಬೆಂಗಳೂರು ಬಿಟ್ಟು ಹೋಗುತ್ತಿವೆ. ರಸ್ತೆ ಗುಂಡಿಗಳನ್ನು ಮುಚ್ಚಿಲು ಕಾಂಗ್ರೆಸ್ ಬಳಿ ಹಣವಿಲ್ಲ, ಬಸ್ ಓಡಿಸಲು ಹಣವಿಲ್ಲ, ನೀವು ಮೊದಲು ಖರ್ಚಿ ಬಿಟ್ಟು ತೊಲಗಿ ಎಂದು ಶೋಭಾ ಆಗ್ರಹಿಸಿದ್ದಾರೆ.
Advertisement