
ಬೆಂಗಳೂರು: ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ, ಕೇಂದ್ರ ಸರ್ಕಾರವು ಕರ್ನಾಟಕದಿಂದ ಹೆಸರುಕಾಳು, ಉದ್ದು, ಸೂರ್ಯಕಾಂತಿ, ನೆಲಗಡಲೆ ಮತ್ತು ಸೋಯಾಬೀನ್ ಖರೀದಿಸಲಿದೆ. ಇದರಿಂದ ರಾಜ್ಯದ ರೈತ ಸಮುದಾಯಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶನಿವಾರ ಹೇಳಿದ್ದಾರೆ,
ರಾಜ್ಯ ಸರ್ಕಾರ ಪ್ರಸ್ತಾಪಿಸಿದಂತೆ, 2025-26 ಖಾರಿಫ್ ಋತುವಿನಲ್ಲಿ ಕರ್ನಾಟಕದಲ್ಲಿ ಬೆಳೆಯುವ ಈ ಬೆಳೆಗಳ ಖರೀದಿಗೆ ಅನುಮೋದನೆ ನೀಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೋರಿರುವುದಾಗಿ ಜೋಶಿ ತಿಳಿಸಿದ್ದಾರೆ.
"ನನ್ನ ವಿನಂತಿಯನ್ನು ಕೇಂದ್ರ ಸರ್ಕಾರ ಈಗ ಅನುಮೋದಿಸಿದೆ ಎಂದು ತಮಗೆ ತಿಳಿಸಲು ಸಂತೋಷವಾಗುತ್ತಿದೆ" ಎಂದು ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ, ಚೌಹಾಣ್ ಅವರ ಪತ್ರವನ್ನು ಹಂಚಿಕೊಂಡಿದ್ದಾರೆ.
ಪ್ರಹ್ಲಾದ್ ಜೋಶಿಕೇಂದ್ರ ಕೃಷಿ ಸಚಿವರು ಸೆಪ್ಟೆಂಬರ್ 20 ರಂದು ಜೋಶಿ ಅವರಿಗೆ ಬರೆದ ಪತ್ರದಲ್ಲಿ, "ಕರ್ನಾಟಕ ಸರ್ಕಾರವು 2025-26 ಖಾರಿಫ್ ಋತುವಿನಲ್ಲಿ ರಾಜ್ಯದಲ್ಲಿ ಹೆಸರುಕಾಳು, ಸೂರ್ಯಕಾಂತಿ, ನೆಲಗಡಲೆ ಮತ್ತು ಸೋಯಾಬೀನ್ ಖರೀದಿಗೆ ಪಿಎಸ್ಎಸ್ ಅನುಷ್ಠಾನಕ್ಕೆ ಪ್ರಸ್ತಾವನೆ ಕಳುಹಿಸಿದೆ ಎಂದು ನಿಮಗೆ ತಿಳಿಸಲು ಸಂತೋಷವಾಗುತ್ತಿದೆ ಎಂದಿದ್ದಾರೆ.
ಸರಿಯಾದ ಪರಿಗಣನೆಯ ನಂತರ, ಈ ಸಚಿವಾಲಯವು ಕರ್ನಾಟಕದಲ್ಲಿ ಪಿಎಸ್ಎಸ್ ಅಡಿಯಲ್ಲಿ 38,000 ಮೆಟ್ರಿಕ್ ಟನ್ ಹೆಸರುಕಾಳು, 60,180 ಮೆಟ್ರಿಕ್ ಟನ್ ಉದ್ದು, 15,650 ಮೆಟ್ರಿಕ್ ಟನ್ ಸೂರ್ಯಕಾಂತಿ, 61,148 ಮೆಟ್ರಿಕ್ ಟನ್ ನೆಲಗಡಲೆ ಮತ್ತು 1,15,000 ಮೆಟ್ರಿಕ್ ಟನ್ ಸೋಯಾಬೀನ್ ಖರೀದಿಗೆ ಅನುಮೋದನೆ ನೀಡಿದೆ.
" "ರೈತರ ಹಿತಾಸಕ್ತಿ ಕಾಪಾಡಲು ಮತ್ತು ಅವರಿಗೆ ಸ್ಥಿರ ಹಾಗೂ ಸುಸ್ಥಿರ ಆದಾಯವನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರದ ಬದ್ಧತೆಯನ್ನು ಈ ಅನುಮೋದನೆ ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದ್ದಾರೆ.
Advertisement