
ಬೆಂಗಳೂರು: ಕನ್ನಡಪ್ರಭ.ಕಾಮ್ ನ ಅಂಕಣಕಾರರೂ ಆಗಿರುವ ಲೇಖಕ ಗಿರೀಶ್ ಲಿಂಗಣ್ಣ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ನೌಶಾದ್ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಶುಕ್ರವಾರದಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಿ ಉಮಾಪತಿ ಅವರಿಗೆ 2024ನೇ ಸಾಲಿನ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜಯಲಕ್ಷ್ಮಿ ಶಿಬರೂರು, ಬಿಎಂಟಿ ರಾಜೀವ್, ವಿನೋದ್ ಕುಮಾರ್ ಬಿ ನಾಯ್ಕ್, ಮಾಲತೇಶ ಅಂಗೂರ, ಸುಧೀರ್ ಶೆಟ್ಟಿ, ಮಲ್ಲಿಕಾರ್ಜುನ ಹೊಸ ಪಾಳ್ಯ, ಆರ್ ಮಂಜುನಾಥ್ ಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚೀ.ಜ ರಾಜೀವ್, ದೇವಯ್ಯ ಗುತ್ತೆದಾರ್, ಗಿರೀಶ್ ಲಿಂಗಣ್ಣ, ಎಂಎನ್ ಯೋಗೇಶ್, ನೌಶಾದ್ ಬಿಜಾಪುರ, ಜಿಟಿ ಸತೀಶ್, ಎಸ್ ಗಿರೀಶ್ ಬಾಬು ಅವರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
Advertisement