'ಕೋಮುವಾದ ವಿರುದ್ಧ ಸೆಕ್ಯುಲರಿಸಂ ಗೆದ್ದಿದೆ': ಬಾನು ಮುಷ್ತಾಕ್ ಪರ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಂಗ್ರೆಸ್ ನಾಯಕರ ಹರ್ಷ

ಈ ತೀರ್ಪು ಪ್ರಸಿದ್ಧ ಕನ್ನಡ ಬರಹಗಾರ್ತಿ ಮತ್ತು ಕಾರ್ಯಕರ್ತೆ, ಮುಸ್ಲಿಂ ಮಹಿಳೆ ಬಾನು ಮುಷ್ತಾಕ್ ಅವರು ಸೆಪ್ಟೆಂಬರ್ 22 ರಂದು ರಾಜ್ಯ ಪ್ರಾಯೋಜಿತ ನಾಡ ಹಬ್ಬವನ್ನು ಉದ್ಘಾಟಿಸಲು ಸುಗಮ ದಾರಿ ಮಾಡಿಕೊಟ್ಟಿದೆ.
Banu Mushtaq
ಬಾನು ಮುಷ್ತಾಕ್
Updated on

ಬೆಂಗಳೂರು: ಈ ವರ್ಷದ ಮೈಸೂರು ದಸರಾ ಆಚರಣೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದನ್ನು ಕರ್ನಾಟಕದ ರಾಜಕೀಯ ನಾಯಕರು ಸ್ವಾಗತಿಸಿದರು, ಈ ತೀರ್ಪನ್ನು "ಕೋಮುವಾದದ ಮೇಲೆ ಜಾತ್ಯತೀತತೆಯ ಗೆಲುವು" ಎಂದು ಬಣ್ಣಿಸಿದ್ದಾರೆ.

ಈ ತೀರ್ಪು ಪ್ರಸಿದ್ಧ ಕನ್ನಡ ಬರಹಗಾರ್ತಿ ಮತ್ತು ಕಾರ್ಯಕರ್ತೆ, ಮುಸ್ಲಿಂ ಮಹಿಳೆ ಬಾನು ಮುಷ್ತಾಕ್ ಅವರು ಸೆಪ್ಟೆಂಬರ್ 22 ರಂದು ರಾಜ್ಯ ಪ್ರಾಯೋಜಿತ ನಾಡ ಹಬ್ಬವನ್ನು ಉದ್ಘಾಟಿಸಲು ಸುಗಮ ದಾರಿ ಮಾಡಿಕೊಟ್ಟಿದೆ. ಇದು ವಾರಗಳಿಂದ ರಾಜಕೀಯ ನಾಯಕರ ನಡುವೆ ನಡೆಯುತ್ತಿದ್ದ ರಾಜಕೀಯ ಮತ್ತು ಧಾರ್ಮಿಕ ವಿವಾದವನ್ನು ಅಂತ್ಯಗೊಳಿಸಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರು "ಜಾತ್ಯತೀತತೆ, ಸಮಾನತೆ ಮತ್ತು ಭ್ರಾತೃತ್ವವನ್ನು ಸಂವಿಧಾನ ಪೀಠಿಕೆಯಲ್ಲಿ ಸೇರಿಸಲಾಗಿದೆ. ದಸರಾ ಒಂದು ನಾಡ ಹಬ್ಬ - ಹೊರಗಿಡುವಿಕೆಯ ಹಬ್ಬವಲ್ಲ, ಸೇರ್ಪಡೆಯ ಹಬ್ಬ. ಈ ವರ್ಷ, ನಾವು ಕೋಮುವಾದ ಮತ್ತು ಕ್ಷುಲ್ಲಕತೆಯ ಮೇಲೆ ಜಾತ್ಯತೀತತೆಯ ವಿಜಯವನ್ನು ಆಚರಿಸುತ್ತೇವೆ" ಎಂದು ಹೇಳಿದರು.

Banu Mushtaq
ಸಾಹಿತಿ ಬಾನು ಮುಷ್ತಾಕ್ ಗೆ ಗೆಲುವು: ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ವಜಾ

ಮಾಜಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಇದು ಕೋಮುವಾದಿ ಶಕ್ತಿಗಳ ಮುಖದ ಮೇಲೆ ಹೊಡೆದಂತೆ. ಜಾತ್ಯತೀತತೆ ಎಂದರೆ ಏನು ಎಂದು ಅರ್ಥಮಾಡಿಕೊಳ್ಳಲು ಅವರಿಗೆ ಸುಪ್ರೀಂ ಕೋರ್ಟ್‌ನ ಅಗತ್ಯವಿತ್ತು ಎಂಬುದು ದುರದೃಷ್ಟಕರ." ಅರಣ್ಯ ಸಚಿವ ಈಶ್ವರ್ ಖಂಡ್ರೆ "ನಾಡ ಹಬ್ಬದಲ್ಲಿ ಧರ್ಮವನ್ನು ಎಳೆದು ತರಬಾರದು. ದಸರಾ ಇಡೀ ರಾಜ್ಯಕ್ಕೆ - ಪ್ರತಿಯೊಂದು ಸಮುದಾಯಕ್ಕೂ, ಪ್ರತಿಯೊಂದು ನಂಬಿಕೆಗೂ ಸೇರಿದೆ. ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಹಿಂದೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ (The New Indian Express) ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದ ವೇಳೆ, ದಸರಾದ ಎಲ್ಲರನ್ನೂ ಒಳಗೊಳ್ಳುವ ಪರಂಪರೆಯನ್ನು ನೆನಪಿಸಿಕೊಂಡಿದ್ದರು. ಐತಿಹಾಸಿಕವಾಗಿ, ಟಿಪ್ಪು ಸುಲ್ತಾನ್, ಹೈದರ್ ಅಲಿ ಮತ್ತು ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾದಲ್ಲಿ ಭಾಗವಹಿಸಿದ್ದರು. ಇದು ಕರ್ನಾಟಕದ ಸಮನ್ವಯ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದ್ದರು.

ಮಾಜಿ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು, "ನಾಡ ಹಬ್ಬ ದಸರಾ ಎಲ್ಲಾ ಧರ್ಮಗಳಿಗೂ ಸೇರಿದ್ದು. ಇದು ಪರಸ್ಪರ ಶಾಂತಿ ಮತ್ತು ಹಂಚಿಕೆಯ ಸಂಸ್ಕೃತಿಯ ಬಗ್ಗೆ. ಇದರ ಬಗ್ಗೆ ಬಿಜೆಪಿ ನಾಯಕರು ನ್ಯಾಯಾಲಯಕ್ಕೆ ಹೋಗಿರುವುದು ದುರದೃಷ್ಟಕರ" ಎಂದು ಹೇಳಿದರು.

ಕುತೂಹಲಕಾರಿಯಾಗಿ, ಈ ಹಿಂದೆ ಈ ವಿಷಯದ ಬಗ್ಗೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಘರ್ಷಣೆ ನಡೆಸಿದ್ದ ಬಿಜೆಪಿ ಎಂಎಲ್ಸಿ ಎ.ಎಚ್. ​​ವಿಶ್ವನಾಥ್ ಅವರು ಸಾಂವಿಧಾನಿಕ ಟಿಪ್ಪಣಿ ಬಗ್ಗೆ ಪ್ರಸ್ತಾಪಿಸಿ "ಬಿಜೆಪಿ ಅಥವಾ ಕಾಂಗ್ರೆಸ್, ಎಲ್ಲರೂ ಸಂವಿಧಾನವನ್ನು ಗೌರವಿಸಲು ಕಲಿಯಬೇಕು. ಅದು ನಮ್ಮೆಲ್ಲರಿಗಿಂತ ಮೇಲಿದೆ ಎಂದಿದ್ದಾರೆ.

ಕಳೆದ ಸೆಪ್ಟೆಂಬರ್ 3 ರಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 10 ದಿನಗಳ ದಸರಾವನ್ನು ಉದ್ಘಾಟಿಸಲು ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ನಂತರ ಅವರ ಆಹ್ವಾನವನ್ನು ಆಕ್ಷೇಪಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಸಂವಿಧಾನದ ಅಡಿಯಲ್ಲಿ ಹಿಂದೂ ಆಚರಣೆಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿತ್ತು.

ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎರಡೂ ಅರ್ಜಿಗಳನ್ನು ವಜಾಗೊಳಿಸಿದವು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ, ಮೈಸೂರು ದಸರಾ ಆಚರಣೆ ರಾಜ್ಯ ಕಾರ್ಯಕ್ರಮ. ಜಾತ್ಯತೀತತೆಯು ಒಂದು ಮೂಲಭೂತ ಲಕ್ಷಣವಾಗಿದೆ. ನಾವು ಮೂರು ಬಾರಿ 'ವಜಾಗೊಳಿಸಲಾಗಿದೆ' ಎಂದು ಹೇಳಿದ್ದೇವೆ - ನಿಮಗೆ ಇನ್ನೂ ಎಷ್ಟು ಸಲ ಹೇಳಬೇಕು ಎಂದು ಛೀಮಾರಿ ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com