ಧವನ್ ರಾಕೇಶ್ ಹೆಸರು ಹೇಳಿ ಖುಷಿಯಿಂದ ಸ್ವಾಗತಿಸಿದ CM ಸಿದ್ದರಾಮಯ್ಯ: ಗದಗದಲ್ಲಿ ವೇದಿಕೆ ಹಂಚಿಕೊಂಡ ತಾತ-ಮೊಮ್ಮಗ-Video

ವೇದಿಕೆಯಲ್ಲಿ ಮೊಮ್ಮಗನ ಮುಂದಾಳತ್ವದಲ್ಲಿ ಡೊಳ್ಳು ಬಾರಿಸುವ ಮೂಲಕ ತಾತ ಸಿಎಂ ಸಿದ್ದರಾಮಯ್ಯ ಜೊತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
CM Siddaramaiah along with his grandson Dhawan Rakesh
ಗದಗದಲ್ಲಿ ಕನಕೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಧವನ್ ರಾಕೇಶ್
Updated on

ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ರಾಕೇಶ್ ಅವರ ಮಗ ಧವನ್ ಸಿದ್ದರಾಮಯ್ಯ ರಾಜಕೀಯಕ್ಕೆ ಎಂಂಟ್ರಿ ಕೊಡುತ್ತಾರಾ, ಹೀಗೊಂದು ವಿಷಯ ನಿನ್ನೆಯಿಂದ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಗದಗ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಕನಕೋತ್ಸವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮೊಮ್ಮಗ ಧವನ್ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದು.

ವೇದಿಕೆಯಲ್ಲಿ ಮೊಮ್ಮಗನ ಮುಂದಾಳತ್ವದಲ್ಲಿ ಡೊಳ್ಳು ಬಾರಿಸುವ ಮೂಲಕ ತಾತ ಸಿಎಂ ಸಿದ್ದರಾಮಯ್ಯ ಜೊತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

CM Siddaramaiah along with his grandson Dhawan Rakesh
3ನೇ ತಲೆಮಾರಿನ ರಾಜಕಾರಣಕ್ಕೆ ಸಿದ್ದರಾಮಯ್ಯ ಕುಟುಂಬ ಸಜ್ಜು: ತಾತನ ಪರ ಪ್ರಚಾರದಲ್ಲಿ ಮೊಮ್ಮಗ ಧವನ್ ರಾಕೇಶ್ ಭಾಗಿ!

ಈ ಕಾರ್ಯಕ್ರಮಕ್ಕೆ ಮೊಮ್ಮಗ ಧವನ್​ ಜತೆಗೆ ಬಂದ ಸಿದ್ದರಾಮಯ್ಯ ಆತನ ಜತೆ ಡೊಳ್ಳು ಬಾರಿಸಿದರು. ಗದಗ ನಗರದ ಕನಕ ಭವನದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು, ಸಚಿವ ಹೆಚ್​ಕೆ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ವೇದಿಕೆಯಲ್ಲಿ ಮಾತನಾಡಲು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಸಂಬೋಧಿಸುವಾಗ ಮೊಮ್ಮಗ ಧವನ್ ರಾಕೇಶ್ ಸಿದ್ದರಾಮಯ್ಯ ಎಂದು ಸಂಬೋಧಿಸಿದ್ದು ವಿಶೇಷವಾಗಿತ್ತು. ತಾತನ ಜೊತೆ ಮೊಮ್ಮಗ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಅವರ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಸಹಜವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com