ಮೋದಿ ಮಹಾನ್ ಡೋಂಗಿ, 8 ವರ್ಷ ಹೆಚ್ಚು GST ವಿಧಿಸಿದ್ದೂ ಅವರೇ, ಈಗ ವಾಪಾಸ್ ಕೊಡ್ತೀರಾ?

ಇಷ್ಟು ವರ್ಷ ಹೆಚ್ಚು ಜಿಎಸ್‌ಟಿ ವಿಧಿಸಿ ಜನರನ್ನು ಸುಲಿಗೆ ಮಾಡುವಾಗ ನಿಮ್ಮ ಈ ಕಾಳಜಿ ಎಲ್ಲಿಹೋಗಿತ್ತು? ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿದರು.
CM Siddaramaiah
ಸಿದ್ದರಾಮಯ್ಯ
Updated on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಡೋಂಗಿ. ಜಿಎಸ್‌ಟಿ ಜಾರಿ ಮಾಡಿದ್ದೂ ಅವರೇ, ಜಿಎಸ್‌ಟಿ ಹೆಚ್ಚೆಚ್ಚು ವಿಧಿಸಿದ್ದೂ ಅವರೇ, ಈಗ ಕಡಿಮೆ ಮಾಡಿ ಬೆನ್ನು ತಟ್ಟಿಕೊಳ್ತಾ ಇರೋದೂ ಅವರೇ ಎಂದು ಮುಖ್ಯಮಂತ್ರಿ ಸಿದ್ದಾರಮಯ್ಯ ಅವರು ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಇಷ್ಟು ವರ್ಷ ಹೆಚ್ಚು ಜಿಎಸ್‌ಟಿ ವಿಧಿಸಿ ಜನರನ್ನು ಸುಲಿಗೆ ಮಾಡುವಾಗ ನಿಮ್ಮ ಈ ಕಾಳಜಿ ಎಲ್ಲಿಹೋಗಿತ್ತು? ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿದರು.

ಎಂಟು ವರ್ಷ ವಿಪರೀತ ಜಿಎಸ್‌ಟಿ ವಸೂಲಿ ಮಾಡಿದ್ರಲ್ಲಾ ಪ್ರಧಾನಿ ಮೋದಿಯವರೇ ಅದೆಲ್ಲವನ್ನೂ ಈಗ ಭಾರತೀಯರಿಗೆ ವಾಪಾಸ್ ಕೊಡ್ತೀರಾ? ಜಿಎಸ್‌ಟಿ ಶೇ. 18 ಮತ್ತು ಶೇ. 28 ಹೆಚ್ಚಿಸಿದ್ದರ ಬಗ್ಗೆ ವಿರೋಧ ಮಾಡಿದವರು ನಾವು. ಇಷ್ಟು ವರ್ಷ ವಸೂಲಿ ಮಾಡಿದವರೇ ಈಗ ಕ್ರೆಡಿಟ್ ತಗೊತಾ ಇದಾರೆ. ಭಾರತೀಯರಿಗೆ ಎಷ್ಟು ನಾಜೂಕಾಗಿ ಟೋಪಿ ಹಾಕ್ತಾರೆ ನೋಡಿ. ನೀವು ಇದಕ್ಕೆಲ್ಲಾ ಮರಳಾಗಬಾರದು ಎಂದು ಸಿಎಂ ಕರೆ ನೀಡಿದರು.

CM Siddaramaiah
Mysuru Dasara 2025: 'ಏಯ್.. ಯಾವನೋ ಅವ್ನು.. ಯಾಕ್ ಬರ್ತೀರಾ ನೀವು...'; ಭಾಷಣ ವೇಳೆ ಸಿದ್ದರಾಮಯ್ಯ ಫುಲ್ ಗರಂ! Video

ಬಡವರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಜಾರಿಗೆ ತಂದು 10 ಕೆಜಿ ಅಕ್ಕಿ ಕೊಟ್ಟಿದ್ದೇ ಈ ಸಿದ್ದರಾಮಯ್ಯ ಎಂದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ವಿರೋಧಿಸಿದವರಿಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ಸೋಲಾಯಿತು, "ನನ್ನ ಹೆಸರಲ್ಲೇ ಇಬ್ಬರು ದೇವರಿದ್ದಾರೆ. ಸಿದ್ದ ಅಂದರೆ ಶಿವ, ರಾಮ ಅಂದರೆ ವಿಷ್ಣು", ನನಗೆ ದೇವರ ಬಗ್ಗೆ ಪ್ರೀತಿ, ಭಕ್ತಿ ಎಲ್ಲವೂ ಇದೆ. ಬೇರೆಯವರಂತೆ ದೇವರ ಹೆಸರಲ್ಲಿ ದ್ವೇಷ ಹರಡುವವರು ನಾವಲ್ಲ. ಹೀಗಾಗಿ ಬಾನು ಮುಷ್ತಾಕ್ ಗೆ ವಿರೋಧ ವ್ಯಕ್ತಪಡಿಸಿದ ಮೂರ್ಖರಿಗೆ ಸುಪ್ರೀಂಕೋರ್ಟ್ ಸಂವಿಧಾನದ ಪೀಠಿಕೆ ಓದಲು ಹೇಳಿದೆ ಎಂದರು.

ಬಾನು ಮುಷ್ತಾಕ್ ಅವರಿಗೆ ಎರಡು ಬಾರಿ ಸಂಸದರಾಗಿದ್ದವರು ವಿರೋಧ ವ್ಯಕ್ತಪಡಿಸಿದ್ದರು. ದಸರಾ ನಾಡ ಹಬ್ಬ ಎನ್ನುವುದೂ ಕೂಡ ಗೊತ್ತಿಲ್ಲ ಅವರಿಗೆ. ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೋಗಿ ಸೋತರು. ನಾನು ಅವರಿಗಿಂತ ನೈಜ ಮತ್ತು ಉತ್ತಮ ಹಿಂದೂ ಎಂದು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com