ಒಂದು ಕಾಲಂ Tick ನಿಂದ ಭವಿಷ್ಯ ನಿರ್ಧಾರ? ಜಾತಿ ವರ್ಗೀಕರಣದ ಬಗ್ಗೆ ಲಿಂಗಾಯತ, ಪಂಚಮಸಾಲಿಗಳಲ್ಲಿ ಗೊಂದಲ!

ಧರ್ಮ ಮತ್ತು ಜಾತಿಯ ಅಚ್ಚುಕಟ್ಟಾದ ಕಾಲಂ ಮುಂದೆ ಹಾಕುವ ಟಿಕ್ ಮಾರ್ಕ್ ಶಕ್ತಿ ಮತ್ತು ಉಳಿವಿನ ಹೋರಾಟವಾಗಿದೆ. ಈ ನಡುವೆ ನಾಡಿನ ದೊಡ್ಡ ಸಮುದಾಯಗಳಲ್ಲಿ ಒಂದಾದ ಲಿಂಗಾಯತರು ಏನೆಂದು ನಮೂದಿಸಬೇಕು? ಧರ್ಮವೋ? ಜಾತಿಯೋ? ಎಂಬ ಪ್ರಶ್ನೆ ಮೂಡಿದೆ.
representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸೆಪ್ಟೆಂಬರ್‌ 22 ರಿಂದ ಜಾತಿ ಗಣತಿ ಆರಂಭವಾಗಿದೆ. ಇದು ಸಾಮಾನ್ಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲ. ಧರ್ಮ ಮತ್ತು ಜಾತಿಯ ಅಚ್ಚುಕಟ್ಟಾದ ಕಾಲಂ ಮುಂದೆ ಹಾಕುವ ಟಿಕ್ ಮಾರ್ಕ್ ಶಕ್ತಿ ಮತ್ತು ಉಳಿವಿನ ಹೋರಾಟವಾಗಿದೆ. ಈ ನಡುವೆ ನಾಡಿನ ದೊಡ್ಡ ಸಮುದಾಯಗಳಲ್ಲಿ ಒಂದಾದ ಲಿಂಗಾಯತರು ಏನೆಂದು ನಮೂದಿಸಬೇಕು? ಧರ್ಮವೋ? ಜಾತಿಯೋ? ಎಂಬ ಪ್ರಶ್ನೆ ಮೂಡಿದೆ.

ಕೆಲವೇ ದಿನಗಳ ಹಿಂದೆ, ಪಂಚಮಸಾಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ತಮ್ಮ ಅನುಯಾಯಿಗಳನ್ನು ಧರ್ಮದ ಕಾಲಂ ಅಡಿಯಲ್ಲಿ "ಹಿಂದೂ" ಮತ್ತು ಜಾತಿಯ ಅಡಿಯಲ್ಲಿ "ಪಂಚಮಸಾಲಿ" ಎಂದು ಗುರುತಿಸುವಂತೆ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಲಿಂಗಾಯತ ಜನಸಂಖ್ಯೆಯ ಅಂದಾಜು ಶೇ. 30 ರಷ್ಟಿರುವ ಪಂಚಮಸಾಲಿಗಳು ದ್ರೋಹ ಬಗೆದಿದ್ದು ಒಳಸಂಚುಗಳಿಂದ ಸಮಸ್ಯೆ ಅನುಭವಿಸಿದರು. ಹೀಗಾಗಿ

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ತ್ವರಿತವಾಗಿ ಕಾರ್ಯಪ್ರವೃತ್ತವಾಯಿತು, ಆಧ್ಯಾತ್ಮಿಕ ನ್ಯಾಯಸಮ್ಮತತೆಯ ಪೂರ್ವಜರ ನೆಲೆಯಾದ ಕೂಡಲಸಂಗಮ ಪೀಠದಲ್ಲಿ ತಡರಾತ್ರಿ ತುರ್ತು ಅಧಿವೇಶನವನ್ನು ಕರೆದಿತ್ತು.

ನಮ್ಮ ಪೀಠವು ಬಸವಣ್ಣನವರ ತತ್ವಶಾಸ್ತ್ರದ ಮೇಲೆ ನಿಂತಿದೆ. ಲಿಂಗಾಯತವನ್ನು ಸ್ವತಂತ್ರ ಧರ್ಮವೆಂದು ಸ್ಪಷ್ಟವಾದ ಮಾನ್ಯತೆ ಪಡೆಯುವುದು ನಮ್ಮ ಧ್ಯೇಯವಾಗಿದೆ. ವೀರಶೈವವು 112 ಉಪಪಂಗಡಗಳಲ್ಲಿ ಒಂದಾಗಿದೆ. ನಮ್ಮನ್ನು ಹಿಂದೂ ಎಂದು ಕರೆದುಕೊಳ್ಳುವುದು ನಮ್ಮ ಭವಿಷ್ಯವನ್ನು ಬಿಟ್ಟುಕೊಡುವುದು ಎರಡು ಒಂದೇ ಎಂದು ಟ್ರಸ್ಟ್ ಅಧ್ಯಕ್ಷ ವಿಜಯ್ ಆನಂದ್ ಕಾಶಪ್ಪನವರ್ ಸ್ಪಷ್ಟವಾಗಿ ಹೇಳಿದರು.

ಆದರೆ ಅಂತಹ ಗೊಂದಲ ಮತ್ತು ಹೋರಾಟಗಳು ಪಂಚಮಸಾಲಿಗಳಿಗೆ ಮಾತ್ರ ಸೀಮಿತವಾಗಿಲ್ಲ. ವೀರಶೈವ ಮಹಾಸಭಾದಲ್ಲೂ ಕೂಡ ಇದೇ ರೀತಿಯ ಗೊಂದಲವಿದೆ, ಹೀಗಾಗಿ ವೀರಶೈವ ಮಹಾಸಭಾ ತನ್ನದೇ ಆದ ಆಜ್ಞೆ ಹೊರಡಿಸಿದೆ. ಪಂಚಮಸಾಲಿಗಳು ಸೇರಿದಂತೆ ಎಲ್ಲಾ ಲಿಂಗಾಯತರು ವೀರಶೈವ-ಲಿಂಗಾಯತರಾಗಿ ನೋಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದೆ.

representational image
ಸರ್ಕಾರದ ಜಾತಿ ಗಣತಿ: ಧರ್ಮ, ಜಾತಿ ಸ್ಥಾನಮಾನದ ಗೊಂದಲದಲ್ಲಿ ವೀರಶೈವ-ಲಿಂಗಾಯತ ಸಮುದಾಯ

ಪಂಚಮಸಾಲಿ ಟ್ರಸ್ಟ್ "ಲಿಂಗಾಯತ" ಎಂದು ಬರೆಸುವಂತೆ ಒತ್ತಾಯಿಸುತ್ತಿದೆ, ವೀರಶೈವರು "ವೀರಶೈವ ಲಿಂಗಾಯತ" ಎಂದು ಗುರುತಿಸುವಂತೆ ಹೇಳುತ್ತಿದೆ. ಈ ನಡುವೆ ಮೃತ್ಯುಂಜಯ ಸ್ವಾಮೀಜಿ "ಹಿಂದೂ" ಜೊತೆಗೂಡಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಂದರ್ಭದಲ್ಲಿ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಧರ್ಮವನ್ನು ಒಂದು ಧರ್ಮವಾಗಿ ಬೆಂಬಲಿಸುವುದಾಗಿ ಮಠದ ನಾಯಕರಿಗೆ ಭರವಸೆ ನೀಡಿದ್ದರು ಎಂದು ಕೂಡಲಸಂಗಮದಲ್ಲಿ ಲಿಂಗಾಯತ ತಜ್ಞರೊಬ್ಬರು ತಿಳಿಸಿದ್ದಾರೆ.

ಶ್ರೀಗಳ ಈ ಯೂ-ಟರ್ನ್ ನಮ್ಮ ಸಮುದಾಯವನ್ನು ಗಾಯಗೊಳಿಸಿದೆ. ರಾಜಕಾರಣಿಗಳನ್ನು ರಕ್ಷಿಸುವ ಸ್ವಾಮೀಜಿಗಳು ನಮಗೆ ಅಗತ್ಯವಿಲ್ಲ. ರಾಜಕಾರಣಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಆದರೆ ನಮ್ಮ ಜನರಿಗೆ ದುರ್ಬಲರನ್ನು ರಕ್ಷಿಸುವ ನಾಯಕರು ಬೇಕು" ಎಂದು ಹೇಳಿದರು.

ತಮ್ಮನ್ನು "ಹಿಂದೂ" ಎಂದು ಗುರುತಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ, ಆದರೆ ತಮ್ಮನ್ನು "ಲಿಂಗಾಯತ" ಎಂದು ಗುರುತಿಸಿಕೊಳ್ಳುವುದರಿಂದ ಮನ್ನಣೆ ಹಾಗೂ ತಮಗೆ ಹಕ್ಕುಗಳು ಸಿಗುತ್ತವೆ ಎಂಬ ಸಂದೇಶವನ್ನು ಪಂಚಮಸಾಲಿ ಟ್ರಸ್ಟ್ ಸಮುದಾಯದ ಸದಸ್ಯರಿಗೆ ಕಳುಹಿಸಿದೆ.

ಸಮುದಾಯದ ಸದಸ್ಯರು ಧರ್ಮದ ಅಡಿಯಲ್ಲಿ "ಲಿಂಗಾಯತ" ಮತ್ತು ಜಾತಿಯ ಅಡಿಯಲ್ಲಿ "ಪಂಚಮಸಾಲಿ" ಎಂದು ಬರೆಯಬೇಕು ಎಂಬ ಸಂದೇಶವನ್ನು ಕಳುಹಿಸಲಾಯಿತು. ಇದಕ್ಕೆ 20 ಕ್ಕೂ ಹೆಚ್ಚು ಮಠಾಧೀಶರು, ನಾಯಕರು ಹಾಗೂ ಪ್ರತಿನಿಧಿಗಳು ಈ ಘೋಷಣೆಗೆ ತಮ್ಮ ಬೆಂಬಲ ನೀಡಿದ್ದಾರೆ, ಬಸವ ಸಂಸ್ಕೃತಿ ಅಭಿಯಾನವು ಮೈಸೂರಿನಲ್ಲಿ ನಡೆಯಲಿದೆ ಮತ್ತು ಅವರು ಕೂಡ ಲಿಂಗಾಯತರಾಗಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com