
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಶಿಕ್ಷೆ ಅನುಭವಿಸುತ್ತಿರುವಂತೆಯೇ ಇತ್ತ ಅವರ ಅಭಿನಯದ ಡೆವಿಲ್ ಚಿತ್ರದ 'ಇದ್ರೆ ನೆಮ್ಮಿದಿಯಾಗ್ ಇರ್ಬೇಕ್' ಹಾಡು ಕೂಡಾ ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ.
ಈ ಮಧ್ಯೆ ಮೈಸೂರಿನಲ್ಲಿ ಆರಂಭವಾಗಿರುವ ವಿಶ್ವ ವಿಖ್ಯಾತ ದಸರಾ ಆಹಾರ ಮೇಳದಲ್ಲಿ ತೂಗುದೀಪ ಫ್ಯಾಮಿಲಿಯೂ ಕಾಣಿಸಿಕೊಂಡಿದೆ. ದರ್ಶನ್ ಅಳಿಯ ಚಂದನ್ ಆಹಾರ ಮೇಳದಲ್ಲಿ ನಾನ್ ವೆಜ್ ಹೊಟೇಲ್ ತೆರೆದಿದ್ದಾರೆ. ಅದಕ್ಕೆ ನೆಮ್ಮದಿಯಾಗಿ ಊಟ ಮಾಡಿ ಅಂತ ಹೆಸರಿಟ್ಟಿದ್ದಾರೆ.
ಚಂದನ್ ಅಲ್ಲಿ ವಿಧ ವಿಧವಾದ ಅಡುಗೆ ಮೆನು ಕೂಡಾ ಇಟ್ಟಿದ್ದಾರೆ. ಮಟನ್ ಪಲಾವ್, ಮಟನ್ ಚಾಪ್ಟ್, ಚಿಕನ್ ಫ್ರೈ, ಚಿಕನ್ ಕಬಾಬ್ ಮತ್ತಿತರ ತರಹೇವಾರಿ ಐಟಂಗಳಿದ್ದು, ನಾನ್ ವೆಜ್ ಪ್ರಿಯರನ್ನು ಆಕರ್ಷಿಸುತ್ತಿದೆ. ಚಂದನ್ ಗೆ ಮೀನಾ ತೂಗುದೀಪ ಸಾಥ್ ಕೊಟ್ಟಿದ್ದಾರೆ.
ಈ ಹಿಂದೆ ಸಾರಥಿ ಬಿಡುಗಡೆ ಸಂದರ್ಭದಲ್ಲೂ ಪತ್ನಿ ವಿಜಯಲಕ್ಷ್ಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರು. ಆದರೆ, ಅವರು ಜೈಲಿನಲ್ಲಿದ್ದರೂ ಚಿತ್ರ ಭರ್ಜರಿ ಯಶಸ್ಸು ಕಂಡಿತು. ಈಗ 'ಡೆವಿಲ್' ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ. ದರ್ಶನ್ ಮತ್ತೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೀಗಿರುವಾಗ ಚಂದನ್ ಆಹಾರ ಮೇಳದಲ್ಲಿ ನೆಮ್ಮದಿಯಾಗಿ ಊಟ ಮಾಡಿ' ಅಂತಾ ಫುಡ್ ಸ್ಟಾಲ್ ತೆರೆದಿರುವುದು ಡೆವಿಲ್ ಚಿತ್ರದ ಪ್ರಚಾರ ತಂತ್ರನಾ? ಎಂಬ ಅನುಮಾನ ಶುರುವಾಗಿದೆ.
ಸಾರಥಿಯಂತೆ ದರ್ಶನ್ ಜೈಲಿನಲ್ಲಿರುವಾಗಲೇ 'ಡೆವಿಲ್' ಬಿಡುಗಡೆಯಾಗಿ ಭರ್ಜರಿ 'ಯಶಸ್ಸು' ಕಾಣಿಸಬೇಕು ಎಂಬುದು ಅವರ ಕುಟುಂಬ ಹಾಗೂ ಚಿತ್ರತಂಡದ ಯೋಜನೆಯಾಗಿದೆಯೇ? ಎಂಬ ಕುತೂಹಲ ಕೆರಳಿಸಿದೆ.
Advertisement