
ಮೈಸೂರು: ದಸರಾ ಮಹೋತ್ಸವದ ನಿಮಿತ್ತ 16 ನಾನಾ ಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು ಜಿಲ್ಲಾಡಳಿತ ನೇಮಕ ಮಾಡಿದೆ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಈ ಉಪ ಸಮಿತಿಗಳಲ್ಲಿ ಬರೋಬ್ಬರಿ 2219 ಸದಸ್ಯರಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ವಿವಿಧ ಸಮಿತಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಾಗಿ 2,219 ಸದಸ್ಯರನ್ನು ನೇಮಿಸಿರುವುದು ರಾಜಕೀಯ ವಲಯಗಳಲ್ಲಿ ಅಸಮಾಧಾನ ಹುಟ್ಟುಹಾಕಿದೆ. ರಾಜಕೀಯ ಅನುಭವಿಗಳಿಂದ ಹಿಡಿದು ಕಾಂಗ್ರೆಸ್‌ನ ಯುವ ನಾಯಕರವರೆಗೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಯೋಗ, ಕುಸ್ತಿ, ಆಹಾರ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳವರೆಗೆ, ಪ್ರತಿ ಸಮಿತಿಯು ನೂರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.
ಜಂಬೂ ಸವಾರಿ (ಮೆರವಣಿಗೆ) ಮತ್ತು ಯುವ ದಸರಾ ಸಮಿತಿಗಳು ತಲಾ 155 ಸದಸ್ಯರೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಯೋಗ ದಸರಾ ಉಪಸಮಿತಿಯು 135 ಸದಸ್ಯರನ್ನು ಹೊಂದಿದೆ. ಪ್ರಕಾಶ ಮತ್ತು ಕವಿ ಗೋಷ್ಠಿ (ಕವಿಗಳ ಸಭೆ) ಯಂತಹ ಸಮಿತಿಗಳು 120 ಕ್ಕೂ ಹೆಚ್ಚು ಹೆಸರುಗಳನ್ನು ಹೊಂದಿವೆ.
ರಾಜಕೀಯ ಅನುಭವಿಗಳು ಸಹ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಮಾಜಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಮಹಿಳಾ ಮತ್ತು ಮಕ್ಕಳ ದಸರಾ ಸಮಿತಿಯ ಅಧ್ಯಕ್ಷರಾಗಿದ್ದಾರೆ, ಮಾಜಿ ಕಾರ್ಪೊರೇಟರ್ ಕೆ.ವಿ. ಮಲ್ಲೇಶ್ ಸಾಂಸ್ಕೃತಿಕ ದಸರಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ.
ಇಷ್ಟೊಂದು ಮಂದಿಯನ್ನು ವಿವಿಧ ಸಮಿತಿಗಳಿಗೆ ನೇಮಕ ಮಾಡಿರುವುದು ಅಸಮಾಧಾನಕ್ಕೆ ಕಾರಣವಲ್ಲ, ಮೈಸೂರು ಮತ್ತು ನೆರೆಯ ಜಿಲ್ಲೆಗಳಾದ್ಯಂತದ ಕಾಂಗ್ರೆಸ್ ಕಾರ್ಯಕರ್ತರು, ಸಮಿತಿಯಲ್ಲಿ ಸ್ಥಾನ ಪಡೆಯಲು ತೀವ್ರವಾಗಿ ಲಾಬಿ ಮಾಡಿದ್ದರ ಬಗ್ಗೆ ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ವರ್ಷ, ಹೆಸರುಗಳನ್ನು ತಡವಾಗಿ ಪ್ರಕಟಿಸಲಾಗುತ್ತದೆ. ಆದರೆ ಅಧಿಕಾರಿಗಳೇ ಎಲ್ಲಾ ಕೆಲಸ ಮಾಡಿ ಮುಗಿಸಿರುತ್ತಾರೆ, ನಾವು ಕೇವಲ ಕಾಗದದ ಮೇಲಿನ ಹೆಸರುಗಳಾಗಿ ನಾಮ್ ಕಾ ವಸ್ತೆಯಾಗಿ ಉಳಿಯುತ್ತೇವೆ ಎಂದು ಹಿರಿಯ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುವುದಕ್ಕಲ್ಲ, ಬದಲಿಗೆ ತಾವು ಎಲ್ಲೆಡೆ ಕಾಣಿಸಿಕೊಳ್ಳಬೇಕೆಂಬ ಹಂಬಲದಿಂದ ಹುದ್ದೆಗಳಿಗಾಗಿ ಲಾಬಿ ಮಾಡಲಾಗುತ್ತಿದೆ ಎಂದಿದ್ದಾರೆ.
ಗಜ ಗಾತ್ರದ ಸಮಿತಿ ನೇಮಕ ಮಾಡುವ ಮೂಲಕ ಆಡಳಿತ ಪಕ್ಷವು ತನ್ನ ಕೇಡರ್ ಮತ್ತು ಮಿತ್ರರಿಗೆ ಅವಕಾಶ ನೀಡುವ ಪ್ರಯತ್ನ ಮಾಡುತ್ತಿದೆ ಎಂದು ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement