ಆಗಸ್ಟ್ 14 ರಂದು ರಾಜಿನಾಮೆ: CM ಡಿಕೆ ಶಿವಕುಮಾರ್ ಮನೆಯಿಂದ ಸಿಟ್ಟಿನಿಂದಲೇ ಹೊರ ನಡೆದ ಬಸವರಾಜ್ ಹೊರಟ್ಟಿ!

ಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊರಟ್ಟಿ ಇಂದು ಮತ್ತೆ ಬೇಟಿಯಾಗಿದ್ದರು. 10 ನಿಮಿಷಗಳ ಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು. ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರ ಬಂದರು.
horatti meets dk shivakumar
ಸಿಎಂ ಭೇಟಿಯಾದ ಬಸವರಾಜ ಹೊರಟ್ಟಿ
Updated on

ಬೆಂಗಳೂರು: ಎರಡನೇ ಬಾರಿಗೆ ಡಿ.ಕೆ.ಶಿವಕುಮಾರ್ ಭೇಟಿಯಾದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನದಿಂದಲೇ ಹೊರನಡೆದಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊರಟ್ಟಿ ಇಂದು ಮತ್ತೆ ಬೇಟಿಯಾಗಿದ್ದರು. 10 ನಿಮಿಷಗಳ ಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು. ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರ ಬಂದರು.

ಹೊರಟ್ಟಿ ಅವರನ್ನ ಬೀಳ್ಕೊಡಲು ಗೇಟ್ ವರೆಗೂ ಮುಖ್ಯಮಂತ್ರಿಗಳು ಹೊರಬಂದಿದ್ದರು. ಈ ವೇಳೆ ಸಿಟ್ಟಲ್ಲಿದ್ದ ಹೊರಟ್ಟಿ ತಮ್ಮ ಸಿಬ್ಬಂದಿಗೆ, ‘ಏ.. ಕಾರು ಎಲ್ಲಿದೆ’ ಎಂದು ಕೇಳಿದರು. ಸಿಎಂ ಶಿವಕುಮಾರ್ ಅವರನ್ನು ಹಿಂದೆ ತಿರುಗಿಯೂ ನೋಡದೆ ಕಾರಲ್ಲಿ ಹೊರಟರು.

ನಂತರ ಖಾಸಗಿ ಸುದ್ದಿ ಚಾನೆಲ್ ಜೊತೆ ಮಾತನಾಡಿದ ಹೊರಟ್ಟಿ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಮೇಯವೇ ಬರುವುದಿಲ್ಲ, ನಾನು ಆಗಸ್ಟ್ 14 ರಂದು ರಾದಿನಾನೆ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

horatti meets dk shivakumar
ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ಫಿಕ್ಸ್! ಆಗಸ್ಟ್ 14ಕ್ಕೆ ರಾಜೀನಾಮೆ ನೀಡೋದಾಗಿ ತಿಳಿಸಿದ ಬಸವರಾಜ ಹೊರಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com