ಮಗಳಿಗಾಗಿ ಸಚಿವ ಸ್ಥಾನ ತ್ಯಾಗ ಮಾಡಲ್ಲ: ಖಾತೆ ಬದಲಾವಣೆಗೆ ಕೇಳಿದ್ದೇನೆ ಅಷ್ಟೇ; ಕೆ ಎಚ್ ಮುನಿಯಪ್ಪ

ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ 7 ಬಾರಿ ಸಂಸದರಾಗಿ, ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಶಂಕರಾನಂದ ಹಾಗೂ ಜಾಫರ್‌ ಶರೀಫ್‌ ರವರ ನಂತರ ಕೆ.ಹೆಚ್.‌ ಮುನಿಯಪ್ಪ ರವರ ದಾಖಲೆ ಜಯ ಐತಿಹಾಸಿಕವಾಗಿದೆ.
Muniyappa
ಕೆ. ಎಚ್. ಮುನಿಯಪ್ಪ
Updated on

ಬೆಂಗಳೂರು: ಪುತ್ರಿಗಾಗಿ ಸಚಿವ ಸ್ಥಾನ ತ್ಯಾಗ ಮಾಡಲ್ಲ, ಈ ಸುದ್ದಿ ಕೇವಲ ವದಂತಿಯಷ್ಟೇ ಎಂದು ಸಚಿವ ಕೆ ಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಾಗಿ ಕೆ ಎಚ್ ಮುನಿಯಪ್ಪ ಅವರ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳು ಸತ್ಯಕ್ಕೆ ದೂರ ಎಂದಿದ್ದಾರೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್.‌ ಮುನಿಯಪ್ಪ ರವರು ಆಹಾರ ಇಲಾಖೆ ಖಾತೆಗೆ ರಾಜೀನಾಮೆ ನೀಡಲಿದ್ದಾರೆ.

ಅವರ ಮಗಳಾದ ಕೆಜಿಎಫ್‌ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್‌ ರವರಿಗೆ ಸಚಿವ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿಗಳು ಕೆಲವು ದೃಶ್ಯ ಮಾಧ್ಯಮಗಳು ಹಾಗೂ ಇನ್ನಿತರೆ ಪತ್ರಿಕೆಗಳಲ್ಲಿ ಸುದ್ಧಿ ಪ್ರಕಟಣೆಗೊಂಡಿದ್ದು, ಈ ವರದಿಯು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.

ಹೀಗಾಗಿ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಅವರ ಬದಲಾಗಿ ರೂಪಕಲಾ ಅವರಿಗೆ ಅವಕಾಶ ನೀಡಲಾಗುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಇದನ್ನು ಸ್ವತಃ ಸಚಿವರು ನಿರಾಕರಿಸಿದ್ದಾರೆ.

Muniyappa
ಸಚಿವ ಸ್ಥಾನಕ್ಕಾಗಿ ಕೃಷ್ಣಪ್ಪ ಬಿಗಿ ಪಟ್ಟು: ಡಿಕೆಶಿ ಸಂಪುಟದಿಂದ ಒಬ್ಬರಿಗೆ ಕೊಕ್? 'ನಾನು ರಾಜೀನಾಮೆಗೆ ಸಿದ್ಧ' ಎಂದ ಬಾಲಕೃಷ್ಣ!

ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ 7 ಬಾರಿ ಸಂಸದರಾಗಿ, ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಶಂಕರಾನಂದ ಹಾಗೂ ಜಾಫರ್‌ ಶರೀಫ್‌ ರವರ ನಂತರ ಕೆ.ಹೆಚ್.‌ ಮುನಿಯಪ್ಪ ರವರ ದಾಖಲೆ ಜಯ ಐತಿಹಾಸಿಕವಾಗಿದೆ.

ಕೆ.ಹೆಚ್.‌ ಮುನಿಯಪ್ಪ ರವರು ಪ್ರಸ್ತುತ ಆಹಾರ ಇಲಾಖೆಯನ್ನು ಉತ್ತಮವಾಗಿ ಮುನ್ನೆಡೆಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಖಾತೆಯೊಂದಿಗೆ ಪರಿಶಿಷ್ಟ ಜಾತಿಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಖಾತೆ ಬದಲಾವಣೆಗಾಗಿ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿಯವರಿಗೆ ಬೇಡಿಕೆ ಇಟ್ಟಿದ್ದು, ಸಕರಾತ್ಮಕ ಸ್ಪಂದನೆಯೊಂದಿಗೆ ಈ ಖಾತೆ ನೀಡುವುದು ಬಹುತೇಕ ಖಚಿತವಾಗಿದೆ. ಮಾಧ್ಯಮಗಳಲ್ಲಿ ಇತ್ತಿಚೀಗೆ ಹರಿದಾಡುತ್ತಿರುವ ಸುದ್ಧಿಗಳು ನೈಜಕ್ಕೆ ದೂರವಾಗಿದ್ದು, ಅವುಗಳನ್ನು ಪರಿಗಣಿಸಿದಿರಲು ಈ ಮೂಲಕ ಕೋರುತ್ತೇನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com