

ಚಾಮರಾಜನಗರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಾನು ಕಿಂಗ್ ಆಗಲ್ಲ, ಕಿಂಗ್ ಮೇಕರ್ ಕೂಡ ಅಲ್ಲ ಎಂದು ಶಾಸಕ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಇನ್ನು ಮುಂದೆ ಏನೂ ಆಗಲ್ಲ. ಯಾವಾಗ ಜೆಡಿಎಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆ..?? ದಳ ಎಂದಾದರೂ ನಿಶ್ಚಳ ಬಹುಮತ ತೆಗೆದುಕೊಂಡು ಮಂತ್ರಿ ಆಗಿರುವುದನ್ನು ನೀವು ನೋಡಿದ್ದೀರಾ? ಅವರು ಸಮಯ ನೋಡಿ ಮಂತ್ರಿ ಆಗಲು ಕಾಯ್ತಾ ಇರ್ತಾರೆ ಎಂದರು.
ಇದೇ ವೇಳೆ ಬಿಡದಿ ಪಾದಯಾತ್ರೆ ಕುರಿತು ವ್ಯಂಗ್ಯವಾಡಿದ ಸಚಿವ ಸಿ ಪುಟ್ಟರಂಗಶೆಟ್ಟಿ, ಬಿಡದಿ ಟೌನ್ ಶಿಪ್ ಪ್ರಾರಂಭ ಮಾಡಿದ್ದು ನಾವಾ..?? ಇಲ್ಲ ಅವ್ರ..?? ಎಂದು ಪ್ರಶ್ನಿಸಿದರು. ಖಾತೆ ಹಂಚಿಕೆಗೆ ಕೋಟಿ-ಕೋಟಿ ಡೀಲ್... ಇಂತಿಂತ ಖಾತೆಗೆ ಇಷ್ಟಿಷ್ಟು ರೇಟ್ ಫಿಕ್ಸ್ ಮಾಡಿದ್ದಾರೆಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಛಲವಾದಿ ನಾರಾಯಣಸ್ವಾಮಿ ಎಷ್ಟು ದುಡ್ಡು ಕೊಟ್ಟು ಎಂ ಎಲ್ ಸಿ ಆದ್ರು..??, ಎಷ್ಟು ದುಡ್ಡು ಕೊಟ್ಟು ವಿಪಕ್ಷ ನಾಯಕರಾದ್ರು.? ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಅಂತಹ ಕೆಲಸ ಅವರು ಮಾಡಿರಬಹುದು, ಅದಕ್ಕೆ ನಮಗೆ ಹೇಳುತ್ತಾರೆ. ನಮ್ಮ ಪಕ್ಷದಲ್ಲಿ ಈತರ ಪದ್ದತಿ ಇಲ್ವೇ ಇಲ್ಲಾ.. ಆ ಕೆಲಸ ನಾವು ಮಾಡುವುದೂ ಇಲ್ಲ. ಆ ಯೋಗ್ಯತೆಯೂ ನಮಗಿಲ್ಲ ಎಂದರು.