ಮಹಜರು ನಡೆಸುವ ನಾಟಕ, ವಿಡಿಯೋ ಮಾಡಿ ಗೋದಿ ಮೀಡಿಯಾಗಳಿಗೆ ಹಂಚಿಕೆ: ನನ್ನದೆ ತಪ್ಪೆಂದು ಬಿಂಬಿಸಲು ಯತ್ನ; ಪ್ರಕಾಶ್ ರಾಜ್

ಈ ವಿಷಯವನ್ನು ನಾನು ಪ್ರಸ್ತಾಪಿಸಿ ಲಕ್ಷಾಂತರ ಜನರಿಗೆ ತಲುಪಿದ ಕೆಲವೇ ಗಂಟೆಗಳಲ್ಲಿ, ಅಧಿಕಾರಿಗಳು ನನಗೆ ಕರೆ ಮಾಡಿ ತಪ್ಪಾಗಿದೆ, ಸರಿಪಡಿಸುತ್ತೇವೆ ಎಂದು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಹಾಕಲು ವಿನಂತಿಸಿದ್ದು ಹೌದಲ್ಲವೇ?
Prakash Raj
ಪ್ರಕಾಶ್ ರಾಜ್
Updated on

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಕೈ ಬಿಟ್ಟಿದ್ದಕ್ಕೆ ಎರಡನೇ ವಿಡಿಯೋ ಮಾಡಿ ಚುನಾವಣಾ ಆಯೋಗದ ವಿರುದ್ಧ ನಟ ಪ್ರಕಾಶ್‌ ರಾಜ್‌ ಕಿಡಿಕಾರಿದ್ದಾರೆ.

ಈ ಸಂಬಂಧ ವಿಡಿಯೋ ಮಾಡಿ, ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ನಿಮ್ಮ ವೆಬ್‌ಸೈಟ್‌ನಲ್ಲಿ ನನ್ನ ಮತದಾರರ ಗುರುತಿನ ಚೀಟಿ ಖಾಯಂ ಆಗಿ ವರ್ಗಾವಣೆಯಾಗಿದೆ ಹಾಗಾಗಿ ಫಾರ್ಮ್ 6 ಭರ್ತಿ ಮಾಡಿ ಹೊಸ ಐಡಿಗೆ ಅರ್ಜಿ ಸಲ್ಲಿಸಿ ಎಂದು ತೋರಿಸಿದ್ದು ನಿಜವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈ ವಿಷಯವನ್ನು ನಾನು ಪ್ರಸ್ತಾಪಿಸಿ ಲಕ್ಷಾಂತರ ಜನರಿಗೆ ತಲುಪಿದ ಕೆಲವೇ ಗಂಟೆಗಳಲ್ಲಿ, ಅಧಿಕಾರಿಗಳು ನನಗೆ ಕರೆ ಮಾಡಿ ತಪ್ಪಾಗಿದೆ, ಸರಿಪಡಿಸುತ್ತೇವೆ ಎಂದು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಹಾಕಲು ವಿನಂತಿಸಿದ್ದು ಹೌದಲ್ಲವೇ? ಆದರೆ ಅದೇ ದಿನ ಸಂಜೆ ಪ್ರೆಸ್ ಮೀಟ್ ಕರೆದು ಅದು ವರ್ಗಾವಣೆಯಾಗಿದೆ ಡಿಲೀಟ್ ಆಗಿಲ್ಲ ಎಂದು ಸುಳ್ಳು ಹೇಳಿದಿರಿ ಎಂದಿದ್ದಾರೆ.

ವಿಷಯ ಕೈಮೀರಿ ಹೋದ ತಕ್ಷಣ ರಾತ್ರಿ 8:30ಕ್ಕೆ ನನ್ನ ಹಳೆಯ ಮನೆ ವಿಳಾಸಕ್ಕೆ ಕಳುಹಿಸಿ ಬಿಎಲ್‌ಒ ಜೊತೆ ಕ್ಯಾಮೆರಾ ಕಳುಹಿಸಿ ನೆರೆಹೊರೆಯವರನ್ನು ಕರೆದು ಮಹಜರು ನಡೆಸುವ ನಾಟಕ ಮಾಡಿದಿರಿ. ನಂತರ ಅದನ್ನು ಗೋದಿ ಮೀಡಿಯಾ ಹಾಗೂ ಬಿಜೆಪಿ ಹ್ಯಾಂಡಲ್‌ಗಳಿಗೆ ನೀಡಿ ಪ್ರಕಾಶ್ ರಾಜ್ ಹೇಳಿದ್ದು ತಪ್ಪು ಎಂದು ಬಿಂಬಿಸಲು ಯತ್ನಿಸಿದಿರಿ.

Prakash Raj
ನಟ ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಲ್ಲ; 'ಶಿಫ್ಟೆಡ್' ಎಂದು ಗುರುತಿಸಲಾಗಿದೆ: BBMP

ನಾನು ನನ್ನ ವೃತ್ತಿಯಿಂದಾಗಿ ನಟ/ಸೆಲೆಬ್ರಿಟಿಯಾಗಿರಬಹುದು. ಆದರೆ ಈ ನಾಗರಿಕನಾಗಿ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ನಾನು ಸಮಾನ. ಈ ಹೋರಾಟ ಪ್ರತಿಯೊಬ್ಬ ನಾಗರಿಕನ ಆತ್ಮಗೌರವ ಮತ್ತು ಮತದಾನದ ಹಕ್ಕಿನ ಹೋರಾಟವಾಗಿದೆ.

ಐದು ವರ್ಷಕ್ಕೊಮ್ಮೆ ಮತದಾರರ ಮುಂದೆ ಬಂದು ಓಟಿಗಾಗಿ ಕೈಮುಗಿದು ಬೇಡುತ್ತೀರಿ. ಆದರೆ ಈಗ ಅದೇ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಾಲಿನಲ್ಲಿ ನಿಂತು ಭಿಕ್ಷೆ ಬೇಡುವಂತೆ ಮಾಡುತ್ತಿದ್ದೀರಲ್ಲಾ? ಇದೇನು ನಾಟಕ? ಇದೇನು ರಾಜಕೀಯ? ನಿಮ್ಮ ಅಜೆಂಡಾ ಏನು? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com