

ಬೆಂಗಳೂರು: ನಾಳೆ ನಾಟಕ ರತ್ನ ಎಚ್.ಡಿ ಕುಮಾರಸ್ವಾಮಿ ನಾಟಕ ಮಂಡಳಿಯಿಂದ ಬಿಡದಿಯ 25 ಎಕರೆ ಜಾಗದಲ್ಲಿ ನಾಟಕ ಪ್ರಾರಂಭವಾಗುತ್ತೆ. ನಟ , ನಾಟಕರತ್ನ ಕುಮಾರಸ್ವಾಮಿ ಅವರೇ ಮುಖ್ಯಪಾತ್ರಧಾರಿ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಳೆಯಿಂದ ಬಿಡದಿ ನಾಟಕ ಪ್ರಾರಂಭವಾಗುತ್ತೆ ಎಂದಿದ್ದಾರೆ. ನಟ , ನಾಟಕರತ್ನ ಕುಮಾರಸ್ವಾಮಿ ಅವರ ನಾಟಕ. ಮುಖ್ಯಪಾತ್ರದಾರಿ ಕುಮಾರಣ್ಣ, ಶಕುನಿ ಪಾತ್ರದಾರಿ ಅಶೋಕಣ್ಣ ಮಾಡುತ್ತಾರೆ.
ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿರು ರವಿಕುಮಾರ್ ಇಲ್ಲವೇ ಛಲವಾದಿಯಣ್ಣ ದುಶ್ಯಾಸನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ.
ಸಮಯವನ್ನು ಕುಮಾರಣ್ಣ ನಿಗದಿ ಮಾಡಲಿ, ನನ್ನದು 75 ಲಕ್ಷ ರೂಪಾಯಿ ವಾಚ್, ಅವರದ್ದು ಸಿಂಪಲ್ ವಾಚ್ ಹೀಗಾಗಿ ಸಮಯ ಅವರೇ ನಿಗದಿ ಮಾಡಲಿ ಎಂದಿದ್ದಾರೆ, ಸ್ಥಳ ನಿಖಿಲ್ ಕುಮಾರಸ್ವಾಮಿಯವರ 35 ಎಕರೆ ಎಂದು ಬಿಡದಿ ವಿಚಾರವನ್ನ ನಾಟಕಕ್ಕೆ ಹೋಲಿಸಿದ್ದಾರೆ.