ಮಾಜಿ ಶಾಸಕ ಪ್ರೀತಂ ಗೌಡ ಅಕ್ರಮ ಆಸ್ತಿ ಪ್ರಕರಣ: ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಲೋಕಾಯುಕ್ತ SP ಗೆ ನಿರ್ದೇಶನ

2018 ಮತ್ತು 2023ರ ಚುನಾವಣಾ ಪ್ರಮಾಣಪತ್ರಗಳನ್ನು ಆಧರಿಸಿ ಖಾಸಗಿ ದೂರು ಸಲ್ಲಿಸಲಾಗಿತ್ತು. ಕುಟುಂಬದ ಆಸ್ತಿಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಆರೋಪಿಸಲಾಗಿದೆ.
preetham gowda
ಪ್ರೀತಂ ಜೆ ಗೌಡ
Updated on

ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ತಮ್ಮ ಆಸ್ತಿ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ಒದಗಿಸಿಲ್ಲ ಎಂಬ ಆರೋಪ ಎದುರಿಸುತ್ತಿರುವ ಹಾಸನದ ಮಾಜಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿ ವರದಿ ಕೊಡಿ ಎಂದು ಹಾಸನ ಲೋಕಾಯುಕ್ತ ಎಸ್‌ಪಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಮಾಜಿ ಶಾಸಕ ಪ್ರೀತಂ ಜೆ. ಗೌಡ, ಅವರ ಪತ್ನಿ ಕಾವ್ಯಾ ಎಚ್‌ಜಿ, ಇತರ ನಾಲ್ವರು ಆರೋಪಿಗಳು ಗಳಿಸಿದ್ದಾರೆ ಎನ್ನಲಾದ ಅಕ್ರಮ ಆಸ್ತಿ ಮತ್ತು ಬೇನಾಮಿ ವಹಿವಾಟುಗಳ ಕುರಿತು ಹಾಸನ ಲೋಕಾಯುಕ್ತ ಡಿವೈಎಸ್‌ಪಿ ಸಲ್ಲಿಸಿದ ಪ್ರಾಥಮಿಕ ತನಿಖಾ ವರದಿ ಅಪೂರ್ಣವಾಗಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಸಂದೀಪ್ ಬಿ.ಪಿ. ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ದೂರು ಆಧರಿಸಿ ತನಿಖೆ ನಡೆಸುವಂತೆ ಆದೇಶಿಸಿದೆ. ತನಿಖೆ ಪೂರ್ಣಗೊಳಿಸಿ ಅಕ್ಟೋಬರ್ 22ರ ಒಳಗೆ ವರದಿ ಸಲ್ಲಿಸುವಂತೆಯೂ ಕೋರ್ಟ್ ಸೂಚನೆ ನೀಡಿದೆ.

2018 ಮತ್ತು 2023ರ ಚುನಾವಣಾ ಪ್ರಮಾಣಪತ್ರಗಳನ್ನು ಆಧರಿಸಿ ಖಾಸಗಿ ದೂರು ಸಲ್ಲಿಸಲಾಗಿತ್ತು. ಕುಟುಂಬದ ಆಸ್ತಿಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಆರೋಪಿಸಲಾಗಿದೆ. 2018 ರಿಂದ 23 ರವರೆಗಿನ ಪರಿಶೀಲನಾ ಅವಧಿಯಲ್ಲಿ ಪ್ರೀತಮ್ ಮತ್ತು ಅವರ ಪತ್ನಿ, ಆರೋಪಿ ಸಂಖ್ಯೆ 1 ಮತ್ತು 2, ಕ್ರಮವಾಗಿ ಮತ್ತು ಅದಕ್ಕೂ ಮೊದಲು ಸ್ವಾಧೀನಪಡಿಸಿಕೊಂಡ ಆಸ್ತಿಗಳ ಮೌಲ್ಯವನ್ನು ಪರಿಗಣಿಸಿ, ಅವರು ಸಂಪಾದಿಸಿದ ಆಸ್ತಿಗಳು ಅವರ ಆದಾಯದ ಮೂಲಗಳಿಗೆ ಅನುಗುಣವಾಗಿಲ್ಲ ಎಂದು ನ್ಯಾಯಾಧೀಶ ಶಿವಪ್ರಸಾದ್ ಕೆ.ಬಿ. ಹೇಳಿದರು.

preetham gowda
ಲೋಕಾಯುಕ್ತ ಕ್ಲೀನ್‌ಚಿಟ್ ಕೊಟ್ಟಿದೆ, ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ: ಸತೀಶ್ ಜಾರಕಿಹೊಳಿ; Video

ಪ್ರೀತಂ ಗೌಡ ಶಾಸಕರಾಗಿದ್ದಅವಧಿಯಲ್ಲಿ ಅಕ್ರಮವಾಗಿ ಶ್ರೀಮಂತರಾಗಿದ್ದಾರೆ ಮತ್ತು ಆ ಮೂಲಕ ಅವರು ಕ್ರಿಮಿನಲ್ ದುಷ್ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕವಾಗಿ ಕಂಡುಬರುತ್ತದೆ ಎಂದು ಕೋರ್ಟ್ ತಿಳಿಸಿದೆ.

ಪ್ರಾಥಮಿಕ ವರದಿಯು ಆರೋಪಿ ಸಂಖ್ಯೆ 1 ಮತ್ತು 2 ಪ್ರಕುಲ್ ಗ್ರಾನೈಟ್ಸ್, ಪ್ರಕುಲ್ ಸರ್ವೀಸಸ್, ಅಕಾನಿ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿದ್ದಾರ. ಖರೀದಿಸಿದ ಆಸ್ತಿಗಳನ್ನು ಈ ಕಂಪನಿಗಳಿಂದ ಬಂದ ಆದಾಯದಿಂದ ಸಂಪಾದಿಸಲಾಗಿದೆ ಮತ್ತು ಪ್ರೀತಂ ಅವರ ಆದಾಯಕ್ಕೆ ಯಾವುದೇ ಅಸಮಾನ ಆಸ್ತಿಗಳಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.

ಆಪಾದಿತ ಬೇನಾಮಿ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಂಗ್ರಹಿಸಿದ ದಾಖಲೆಗಳು ಆ ವಹಿವಾಟುಗಳ ಕುರಿತಾದ ದಾಖಲೆಗಳು ಇತರ ಆರೋಪಿಗಳ ಹೆಸರಿನಲ್ಲಿವೆ ಎಂದು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮಾಜಿ ಶಾಸಕ ಪ್ರೀತಂ ಗೌಡ ಅವರ ಸಂಪೂರ್ಣ ಆಸ್ತಿ ಬಗ್ಗೆ ತನಿಖೆ ನಡೆಸಬೇಕು. ಅವರ ಆದಾಯ ಮತ್ತು ಆಸ್ತಿ ವಿವರಗಳನ್ನು ಹೋಲಿಸಿ ಪರಿಶೀಲಿಸಬೇಕು. ತನಿಖೆ ಪೂರ್ಣಗೊಳಿಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹಾಸನ ಲೋಕಾಯುಕ್ತ ಎಸ್‌ಪಿಗೆ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com